ಹಗರಿಬೊಮ್ಮನಹಳ್ಳಿ

ಪಿಎಲ್‌ಡಿ ಬ್ಯಾಂಕ್‌ನ ಮಹಾಜನ ಸಭೆ

ಪಿಎಲ್‌ಡಿ ಬ್ಯಾಂಕ್‌ನ ಮಹಾಜನ ಸಭೆ

ಹಗರಿಬೊಮ್ಮನಹಳ್ಳಿ 16: ಪಟ್ಟಣದ ಹಳೇ ಊರಿನ ಸಮುದಾಯ ಭವನದಲ್ಲಿ ಪಿಎಲ್‌ಡಿ ಬ್ಯಾಂಕ್‌ನ 2022ರ ಮಹಾಜನ ಸಭೆಯ ನಡೆಯಿತು. 

ಈ ವೇಳೆ ಅಧ್ಯಕ್ಷತೆ ವಹಿಸಿ ಬ್ಯಾಂಕ್ ಅಧ್ಯಕ್ಷ ಬಿ.ಗಂಗಾಧರ ಮಾತನಾಡಿ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವಹಿವಾಟು 2022ನೇ ಸಾಲಿನಲ್ಲಿ ವಿಜಯನಗಕ್ಕೆ ಪ್ರಥಮ ಹಾಗೂ ಬಳ್ಳಾರಿ ಜಿಲ್ಲೆಗೆ ದ್ವಿತೀಯ ಸ್ಥಾನದಲ್ಲಿದೆ, ಬ್ಯಾಂಕಿನ ವಹಿವಾಟಿಗೆ ಸಹಕರಿಸಿ ಬ್ಯಾಂಕ್‌ನ ಸಾಲ ಸೌಲಭ್ಯ ಪಡೆದ ಗ್ರಾಹಕ ವರ್ಗ ಹಾಗೂ ಸಿಬ್ಬಂದಿ ವರ್ಗ ಮತ್ತು ಆಡಳಿತ ಸಮಿತಿಯ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಿದರು. ಮುಂಬರುವ ದಿನಗಳಲ್ಲಿ ಉತ್ತಮ ಸಓಲಭ್ಯಗಳನ್ನು ನೀಡುವುದರ ಜೊತೆ ಹೆಚ್ಚಿನ ಸದಸ್ಯತ್ವವನ್ನು ಮಾಡುವುದು ಹಾಗೂ ರೈತರನ್ನು ಬ್ಯಾಂಕ್‌ನತ್ತ ಸೆಳೆಯುವ ಕಾರ್ಯ ಮಾಡಲಾಗುವುದು ಎಂದರು. 

ಬ್ಯಾಂಕ್ ವ್ಯವಸ್ಥಾಪಕ ತಿಪ್ಪೇಸ್ವಾಮಿ ಮಾತನಾಡಿ ಬ್ಯಾಂಕ್‌ನಿಂದ 2ಕೋಟಿ ಸಾಲ ನೀಡುವ ಗುರಿಯನ್ನು ಹೊಂದಿದ್ದು, ಅಧ್ಯಕ್ಷ ಮತ್ತು ನಿರ್ದೇಶಕ ಶ್ರಮದಿಂದ ಹೆಚ್ಚಿನ ಅನುದಾನ ತರುವ ಮೂಲಕ 3.44 ಕೋಟಿ ರೂ.ಗಳ ಸಾಲ ನೀಡಲಾಗಿದೆ. ವಸೂಲಿಯಲ್ಲಿ 263.18 ಲಕ್ಷ ರೂ.ಗಳಿದ್ದು, 213.53 ಲಕ್ಷ ರೂ.ಗಳು ವಸೂಲಿಯಾಗಿ ಶೇ.81.13 ಸಾಧಿಸಿದೆ. ಬ್ಯಾಂಕ್ ಆರ್ಥಿಕವಾಗಿ ಸದೃಢವಾಗುವ ಮೂಲಕ ಗ್ರಾಹಕರ ವಿಶ್ವಾಸಗಳಿಸಲು, ಇಲ್ಲಿಯವರೆಗೂ ಒಟ್ಟು 583.01 ಲಕ್ಷ ಠೇವಣೆಯ ಜೊತೆಗೆ, 314.55 ಲಕ್ಷ ಲಾಭದಲ್ಲಿದೆ ಎಂದರು.   

ಬ್ಯಾಂಕ್ ನಿರ್ದೇಶಕ ಈ.ಕೆ.ಮೂರ್ತಿ ಮಾತನಾಡಿದರು, ಈ ವೇಳೆ ಉಪಧ್ಯಕ್ಷೆ ಕೆ.ನಾಗಮ್ಮ, ಸದಸ್ಯರಾದ ಬಿ.ಎಂ.ಗುರುವಯ್ಯ, ಪಾಟೀಲ್ ಮಂಜುನಾಥ, ಎಚ್‌.ಎಂ.ಮಲ್ಲಯ್ಯ, ಎನ್‌.ಪಕ್ಕೀರಾಭೀ, ಜಿ.ಕೊಟ್ರೇಶ, ಮಹೇಂದ್ರ​‍್ಪ, ಪೂಜಾರಿ ದುರ್ಗಾನಾಯ್ಕ್‌, ಬಡಪ್ನರ ಕೊಟ್ರೇಶ, ಬಿ.ಪೃಥ್ವಿರಾಜ್, ನಾಮನಿರ್ದೇಶಕ ವಿ.ಸಣ್ಣ ಹನುಮನಗೌಡ, ವಿಷೇಯ ಪರಿಣಿತ ನಿರ್ದೇಶಕ ಪಿ.ಶಾಮಾಚಾರ್, ಟಿ.ಎ.ಪಿ.ಸಿ.ಎಂ.ಎಸ್‌. ಅಧ್ಯಕ್ಷ ಕೆ.ಭರಮರೆಡ್ಡಿ, ಆರ್‌.ಎಸ್‌.ಎಸ್‌.ಎನ್‌.ಅಧ್ಯಕ್ಷ ಕೊಟ್ರೇಶಪ್ಪ, ಉಪಾಧ್ಯಕ್ಷ ವೀರಯ್ಯ, ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಪಿ.ಸೂರ್ಯಬಾಬು, ಕಿನ್ನಾಳ್ ಸುಭಾಷ್,  ಎಚ್‌.ಎ.ಕೊಟ್ರೇಶ್, ಮಹಾಬಲೇಶ್ವರ ರೆಡ್ಡಿ, ಅಕ್ಕಿತೋಟೇಶ್, ಹುಡೇದ್ ಗುರುಬಸವರಾಜ್, ಮಂಜುನಾಥಗೌಡ, ಮುಟುಗನಹಳ್ಳಿ ಹನುಮಂತ ಹಾಗೂ ಕ.ರ.ಸ.ಕೃಷಿ ಬ್ಯಾಂಕ್‌ನ ಬಳ್ಳಾರಿ ಜಿಲ್ಲಾ ವ್ಯವಸ್ಥಾಪಕರಾದ ಸಿ.ಮಂಜುನಾಥ ಮತ್ತು ಬ್ಯಾಂಕ್ ಸಿಬ್ಬಂದಿ ಮತ್ತಿತರರು ಇದ್ದರು. 


ಸುದ್ದಿ ಓದಿ