ಗಾರ್ಡನ್, ಸ್ವಿಮ್ಮಿಂಗ್ ಫೂಲ್, ಹಿಂದೂ ಸ್ಮಶಾನದಲ್ಲಿ ಶಿವನ ಮೂರ್ತಿ ಸ್ಥಾಪನೆಯ ನೀಲ ನಕ್ಷೆಗೆ ಸಭೆ ಅನುಮತಿ
ಮಹಾಲಿಂಗಪುರ ಪುರಸಭೆಯ ಸಾಮಾನ್ಯ ಸಭೆ
ಮಹಾಲಿಂಗಪುರ09: ಟೋಕಿಯೊ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ನಿರಂಜನ ಚೋಪ್ರಾ ಅಲ್ಲದೆ ಬೆಳ್ಳಿ ಮತ್ತು ಕಂಚು ವಿಜೇತ ಭಾರತೀಯ ಇನ್ನಿತರ ಕ್ರೀಡಾಪಟುಗಳಿಗೆ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿದ್ದು ಸವದಿ ಅಭಿನಂದನೆ ಸಲ್ಲಿಸಿದರು.
ಸೋಮವಾರ ಪುರಸಭೆಯಲ್ಲಿ ಅಧ್ಯಕ್ಷೆ ಸ್ನೇಹಲ್ ಅಂಗಡಿಯವರ ಅಧ್ಯಕ್ಷತೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇಡೀ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿರುವ ಚಿನ್ನದ ಹುಡುಗ ನಿರಂಜನ ಚೋಪ್ರಾ ಮತ್ತು ಇತರ ಕ್ರೀಡಾಪಟುಗಳಿಗೆ ಸರ್ವಪಕ್ಷಗಳ ಸದಸ್ಯರು, ಪತ್ರಕರ್ತರು ಹಾಗೂ ಸಿಬ್ಬಂದಿಗಳಿಂದ ಕೂಡಿದ ಸದನ ಚಪ್ಪಾಳೆಯಿಂದ ಗೌರವ ಅಭಿನಂದನೆ ಸಲ್ಲಿಸಿತು.
2021 ಜನವರಿಯಿಂದ ಜುಲೈವರೆಗೆ ಜಮಾ ಖರ್ಚಿಗೆ ಅನುಮೋದನೆ, ನೀರು ಸರಬರಾಜು ಸಲಕರಣೆಗಳು, ಕೊಳವೆ ಬಾವಿ ರಿಪೇರಿ, ರಿವೈಂಡಿಂಗ್ ಹಾಗೂ ವಿದ್ಯುತ್ ಸಾಮಗ್ರಿಗಳ ಬಾಕಿ ಬಿಲ್ಲುಗಳಿಗೆ ಅನುಮೋದನೆ, ಚನ್ನಗೀರೀಶ್ವರ ದೇವಸ್ಥಾನದ ಹತ್ತಿರದ ಪ್ಲಾಟ್ ನಿರ್ವಹಣೆ, 2017-18 ಎಸ್. ಎಫ್. ಸಿ ಶೇ.24.10 ಯೋಜನೆಯ ಅಡುಗೆ ಅನಿಲ ಸಂಪರ್ಕಕ್ಕೆ ಬಾಕಿ ಫಲಾನುಭವಿಗಳ ಆಯ್ಕೆ, 2019-20 ನೇ ಸಾಲಿನ ಎಸ್ ಎಫ್ ಸಿ ಪಪಂಗಡಳಿಗೆ ಸ್ವಯಂ ಉದ್ಯೋಗ ಫಲಾನುಭವಿಗಳ ಆಯ್ಕೆ, 2020-21ನೇ ಸಾಲಿನ ಪುರಸಭೆ ನಿಧಿಯ ಶೇ.24.10 ಪಪಂ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಹಾಗೂ ಯುಪಿಎಸ್ ಗಾಗಿ ಫಲಾನುಭವಿಗಳ ಆಯ್ಕೆ, ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಡಿ ಐ ಇಸಿ ಚಟುವಟಿಕೆಗಳಿಗೆ ಬಿಡುಗಡೆಗೊಂಡ ಅನುದಾನಕ್ಕೆ ಕ್ರಿಯಾ ಯೋಜನೆಗೆ ಅನುಮೋದನೆ.
ನೀರು ಸರಬರಾಜು ಹೊರಗುತ್ತಿಗೆ ಟೆಂಡರ್ ಅನ್ನು ಪ್ರಸಕ್ತ ಸಾಲಿನ ಟೆಂಡರ್ ಆಗುವವರೆಗೆ ಮುಂದುವರಿಸುವ ಬಗ್ಗೆ, 2021-22 ನೇ ಸಾಲಿಗೆ ಆರೋಗ್ಯ ವಿಭಾಗಕ್ಕೆ ಸಾಧನ ಸಲಕರಣೆ, ಮತ್ತು ಕ್ರಿಮಿನಾಶಕ ಖರೀದಿಸುವ ಟೆಂಡರ್ ಗೆ ಮಂಜೂರಾತಿ.
ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಕುರಿತು ಕರೆದ ಟೆಂಡರ್ ದರ ಮಂಜೂರಾತಿ, ಲಾಕ್ ಡೌನ್ ಸಮಯದಲ್ಲಿ ವಾರದ ಮತ್ತು ನಿತ್ಯ ಸಂತೆಯ ಕರ ಬಾಕಿ ಇರುವ ಕುರಿತು, ಗುಂಡದ ಭಾವಿ ಹತ್ತಿರದ ಪ್ರದೇಶ ಅಭಿವೃದ್ಧಿ, ಬಸ್ ಸ್ಟ್ಯಾಂಡ್ ಹತ್ತಿರದ ಪುರಸಭೆಯ ಖಾಲಿ ಜಾಗದಲ್ಲಿ ಗಾರ್ಡನ್ ಹಾಗೂ ಸ್ವಿಮ್ಮಿಂಗ್ ಫೂಲ್, ಹಿಂದೂ ಸ್ಮಶಾನದಲ್ಲಿ ಶಿವನ ಮೂರ್ತಿ ಸ್ಥಾಪನೆಯ ನೀಲ ನಕ್ಷೆಗೆ ಅನುಮತಿ, ಎಸ್ ಎಫ್ ಸಿ ವಿಶೇಷ ಹೆಚ್ಚಿನ ಅನುದಾನದಡಿ 75 ಲಕ್ಷ ರೂ. ಮಂಜೂರಾತಿಗೆ ಕ್ರಿಯಾಯೋಜನೆ, ಪುರಸಭೆ ಒಡೆತನದ ಖಾಲಿ ಉಳಿದ ವಾಣಿಜ್ಯ ಮಳಿಗೆಗಳನ್ನು ಬೇಡಿದ ಯೋಗ್ಯ ದರದಲ್ಲಿ ಮಂಜೂರಾತಿ ಹಾಗೂ ಸ್ವಾತಂತ್ರ್ಯ ದಿನಾಚರಣೆ ಸರಳವಾಗಿ ಆಚರಿಸುವ ಕುರಿತು ಸೇರಿದಂತೆ ಇನ್ನೂ ಅನೇಕ ವಿಷಯಗಳನ್ನು ಚರ್ಚಿಸಿ ಸಭೆ ಅನುಮೋದನೆ ನೀಡಿತು.
ಪುರಸಭಾ ಮುಖ್ಯಾಧಿಕಾರಿ ಎಚ್. ಎಸ್. ಚಿತ್ತರಗಿ, ಪುರಸಭಾ ಸದಸ್ಯರಾದ ಯಲ್ಲನಗೌಡ ಪಾಟೀಲ, ಶೇಖರ್ ಅಂಗಡಿ, ಜಾವೇದ ಭಾಗವಾನ, ಬಸವರಾಜ ಹಿಟ್ಟಿನಮಠ, ಪ್ರಹ್ಲಾದ ಸಣ್ಣಕ್ಕಿ, ರಾಜು ಚಮಕೇರಿ, ಚನ್ನಬಸು ಯರಗಟ್ಟಿ, ರವಿ ಜವಳಗಿ, ಡಾ.ಸವಿತಾ ಕೋಳಿಗುಡ್ಡ, ಮುಸ್ತಾಕ್ ಚಿಕ್ಕೋಡಿ, ರಾಜು ಗೌಡಪ್ಪಗೋಳ, ಬಸವರಾಜ ಬುರುಡ, ಲಕ್ಷ್ಮೀ ಮುದ್ದಾಪುರ, ಸರಸ್ವತಿ ರಾಮೋಜಿ, ಶಿಲ್ಪಾ ಭಾವಿಕಟ್ಟಿ, ಸವಿತಾ ಮಾಂಗ ಮತ್ತು ಅಭಿಯಂತರ ಡಿ. ಬಿ. ಪಠಾಣ, ಅಧೀಕ್ಷಕ ರಾಘವೇಂದ್ರ ನಡುವಿನಮನಿ, ಕಂದಾಯ ಅಧಿಕಾರಿ ನಾಮದೇವ ಲಮಾಣಿ, ವಿ. ಜಿ. ಕುಲಕರ್ಣಿ, ಬಿ.ವಾಯ್.ಮರ್ದಿ, ಶ್ರೀಮತಿ ಸೋರಗಾವಿ, ಸಿದ್ದು ಅಳ್ಳಿಮಟ್ಟಿ, ರಾಜು ಹೂಗಾರ, ಎಸ್. ಎನ್. ಪಾಟೀಲ, ಸಿಪಾಯಿ ರಾಮು, ಮಾನಿಂಗ ಮಾಂಗ ಇತರರು ಇದ್ದರು.