ಮಹಲಿಂಗಪುರ

ಬಿಪಿಎಲ್ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್, ಒಲೆ, ರೆಗುಲೇಟರ್, ಪೈಪ್ ವಿತರಣೆ

ಬಿಪಿಎಲ್ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್, ಒಲೆ, ರೆಗುಲೇಟರ್, ಪೈಪ್ ವಿತರಣೆ
ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಸಂಪರ್ಕ ಪಡೆಯಲು ಸರತಿಸಾಲಿನಲ್ಲಿ ನಿಂತಿರುವ ಜನ.

ಮಹಾಲಿಂಗಪುರ 30: ಪಬ್ಲಿಕ್ ಲಯಾಬಿಲಿಟಿ ಪಾಲಿಸಿ ವ್ಯಾಪ್ತಿಯಲ್ಲಿ ವೈಯಕ್ತಿಕ ದುರ್ಘಟನೆಗೆ ವಿಮಾ ಕವರೇಜು ನೀಡಲಾಗುತ್ತದೆ ಗ್ರಾಹಕರು ಇದರ ಸದುಪಯೋಗಪಡಿಸಿಕೊಳ್ಳಿ ಎಂದು ಯೋಧ ಇಂಡಿಯನ್ ಗ್ಯಾಸ್ ವ್ಯವಸ್ಥಾಪಕ ಹನುಮಂತ ಕಣಬೂರ್ ಹೇಳಿದರು. 

ಪಟ್ಟಣದ ಇಂಡಿಯನ್ ಗ್ಯಾಸ್ ವಿತರಣಾ ಘಟಕದಲ್ಲಿ ಶನಿವಾರ ದಿವಸ ಕಳೆದ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಬಾಕಿ ಉಳಿದ ಬಿಪಿಎಲ್ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್, ಒಲೆ, ರೆಗುಲೇಟರ್, ಪೈಪ್ ವಿತರಿಸಿ ಮಾತನಾಡಿದ ಅವರು, ಸರಿಯಾಗಿ ಮತ್ತು ಸುರಕ್ಷಿತವಾಗಿ ಎಲ್ಪಿಜಿಯನ್ನು ಗ್ಯಾಸ್ ಕಂಪನಿ ತಿಳಿಸಿದ ಪದ್ಧತಿಗಳನ್ನು ಅಳವಡಿಸಿಕೊಂಡು ಅಮೂಲ್ಯವಾದ ಜೀವವನ್ನು ಉಳಿಸಿಕೊಳ್ಳಿ ಎಂದರು. 

 ಘಟನೆ ನಡೆದ ಸಮಯದಲ್ಲಿ ಸಮೀಪದ ಗ್ಯಾಸ್ ವಿತರಕರಿಗೆ ತಿಳಿಸಿದಲ್ಲಿ ದುರ್ಘಟನೆಯಲ್ಲಿ ವಿಮೆ ಪಡೆಯುವ ಫಲಾನುಭವಿಗಳಿಗೆ ಸಂಪೂರ್ಣ ಸಹಾಯೋಗ ನೀಡುತ್ತಾರೆ. 

ಈ ದುರ್ಘಟನೆಯಲ್ಲಿ ಸಾವು ಸಂಭವಿಸಿದರೆ ವಿಮೆ ಕಂಪನಿಯಿಂದ ಕೆಲವು ಶರತ್ತುಗಳನ್ನು ಒಳಗೊಂಡು ವ್ಯಕ್ತಿಗತವಾಗಿ 6 ಲಕ್ಷ ರೂಪಾಯಿಗಳು ದೊರೆಯುತ್ತವೆ. ಗರಿಷ್ಠ 2ಲಕ್ಷ ತಕ್ಷಣದಲ್ಲಿ 25ಸಾವಿರ ವೈದ್ಯಕೀಯ ಪರಿಹಾರ, ನೋಂದಾಯಿತ ವಿಳಾಸಕ್ಕೆ 2 ಲಕ್ಷ ವರೆಗೆ ಆಸ್ತಿ ಹಾನಿ ಪರಿಹಾರವೂ ದೊರೆಯುತ್ತದೆ ಎಂದರು. 

ಸುದ್ದಿ ಓದಿ