ಅಥಣಿ ಚುನಾವಣೆಯಲ್ಲಿ ಗೆದ್ದರೆ ಮಾತ್ರ ಹಾರ, ಶಾಲು ಹಾಕೋತೇನಿ, ಇಲ್ಲ ಅಂದರೆ ನನ್ನ ಶವದ ಮೇಲೆ ಹಾರ ಹಾಕಿ : ಸಮಾವೇಶದಲ್ಲಿ ಶಪಥ ಮಾಡಿದ ಸವದಿ

ಅಥಣಿ ಚುನಾವಣೆಯಲ್ಲಿ ಗೆದ್ದರೆ ಮಾತ್ರ ಹಾರ, ಶಾಲು ಹಾಕೋತೇನಿ, ಇಲ್ಲ ಅಂದರೆ ನನ್ನ ಶವದ ಮೇಲೆ ಹಾರ ಹಾಕಿ : ಸಮಾವೇಶದಲ್ಲಿ ಶಪಥ ಮಾಡಿದ ಸವದಿ

ಪಾರೇಶ ಭೋಸಲೆ

ಬೆಳಗಾವಿ : ನನ್ನ ಸ್ವಾಭಿಮಾನಕ್ಕೆ ಧಕ್ಕೆ ತಂದಿರುವ ಅಥಣಿ ಕ್ಷೇತ್ರದ ಬಿಟ್ಟುಕೊಡುವದಿಲ್ಲ ಎಂದು ಪಟ್ಟು ಹಿಡಿದು ಬಿಜೆಪಿ ವಿರುದ್ದ ಸಮರ ಸಾರಿರುವ ಮಾಜಿ ಡಿಸಿಎಂ  ಲಕ್ಷ್ಮಣ ಸವದಿ ಅವರು ತಾವು ಅಥಣಿ ಚುನಾವಣೆಯಲ್ಲಿ ಗೆದ್ದರೆ ಮಾತ್ರ ನನ್ನ ಕೊರಳಿಗೆ ಹಾರ ಹಾಕೋತೇನೆ ಇಲ್ಲ ನನ್ನ ನನ್ನ ಶವದ ಮೇಲೆ ಹಾರ ಹಾಕಿ ಎಂದು ಬೆಂಬಲಿಗರ ಮುಂದೆ ಸಾರ್ವಜನಿಕವಾಗಿ ಶಪಥ ಮಾಡಿದ್ದಾರೆ.

   ಕಳೆದ ಕೆಲವು ತಿಂಗಳುಗಳಿಂದ ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ತೆರೆ ಮರೆಯಲ್ಲಿ ಕಸರತ್ತು ನಡೆಸುತ್ತಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ನಮ್ಮ ಬೆಂಬಲಿಗರ ಮುಂದೆ ಅಥಣಿ ಕ್ಷೇತ್ರದಲ್ಲಿ ಟಿಕೆಟ್ ಇಲ್ಲದಿರುವದು ನನ್ನ ಸ್ವಾಭಿಮಾನ ಕ್ಕೆ ಧಕ್ಕೆ ತಂದಿದೆ. ಇದು ನನ್ನ ಸ್ವಾಭಿಮಾನಕ್ಕೆ ಸವಾಲಾಗಿದೆ ಎಂದು ಹೇಳಿಕೊಳ್ಳತ್ತ ಸಾಗಿದ್ದರು. ಆದರೆ ಕೊನೆಯ ಗಳಿಗೆಯಲ್ಲಿ ಈ ಪರಿಸ್ಥಿತಿ ಬರುತ್ತದೆ ಎಂದು ಅವರು ಭಾವಿಸಿರಲಿಲ್ಲ ಎನ್ನಲಾಗುತ್ತಿದೆ. 

   ಆದರೆ ಬಿಜೆಪಿ ವರಿಷ್ಠರು ತೆಗೆದುಕೊಂಡ ನಿರ್ಧಾರದಿಂದ ಅಥಣಿ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ದ ಸಮರ ಸಾರಿರುವ ಮಾಜಿ ಸಚಿವ ಲಕ್ಷ್ಮಣ ಸವದಿ ಅವರು ಬೆಂಬಲಿಗರು, ಅಭಿಮಾನಿಗಳು, ಕಾರ್ಯಕರ್ತರು ಹೇಳಿದ ಮಾತಿಗೆ ತಲೆಭಾಗುವೆ, ತಾನು ಯಾವದೇ ಕಾರಣಕ್ಕೆ ಅಥಣಿ ಕಣದಿಂದ ಹಿಂದೆ ಸರಿಯುವದಿಲ್ಲ ಎಂದು ಭಾವುಕರಾಗಿ ಬಿಜೆಪಿಗೆ ವಿದಾಯದ ಸಂದೇಶ ಕಳಿಸಿದ್ದಾರೆ. ಅಲ್ಲೆ ಅಭಿಮಾನಿಗಳ ಹಾಗೂ ಬೆಂಬಲಿಗರ ಮುಂದೆ ತಾನು ಇಲ್ಲಿ ಚುನಾವಣೆಯಲ್ಲಿ ಗೆದ್ದರೆ ಮಾತ್ರ ಕೊರಳಲ್ಲಿ ಹಾರ ಹಾಕಿಕೊಳ್ಳುವೆ, ಇಲ್ಲ ಆದರೆ ಕೊನೆಯಲ್ಲಿ ನನ್ನ ಶವದ ಮೇಲೆ ಹಾರ ಹಾಕಿ ಎಂದು ಬರಂಬಲಿಗರ ಮುಂದೆ ಶಪಥ ಮಾಡಿದ್ದಾರೆ. 

   ಅಲ್ಲದೆ ತಮ್ಮ ಬೆಂಬಲಿಗರ ಅಭಿಪ್ರಾಯ ಗಳನ್ನು ಪಡೆದು ಬೆಂಗಳೂರಿನತ್ತ ಮುಖ ಮಾಡಿರುವ ಲಕ್ಷ್ಮಣ ಸವದಿ ಅವರು‌ ಸದ್ಯ ತಮ್ಮ ಬಳಿ ಇರುವ ಬಿಜೆಪಿಯ ವಿಧಾನ ಪರಿಷತ್ ಸದಸ್ಯತ್ವ ಕ್ಕೆ ರಾಜೀನಾಮೆ ಸಲ್ಲಿಸುವ ತವಕದಲ್ಲಿ ಇದ್ದಾರೆ. ಏನೇ ಆಗಲಿ ಮಾಡು ಇಲ್ಲವೆ ಮಡಿ ಎನ್ನುವ ಪರಿಸ್ಥಿತಿ ಯಲ್ಲಿ‌ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಇದ್ದಾರೆ ಎನ್ನಲಾಗಿದೆ.

   

ಸುದ್ದಿ ಓದಿ