ಪುರಸಭೆ ಉಪ ಚುನಾವಣೆಯಲ್ಲಿ ಗಂಗಾರಾಮ ಭೂಸಗೋಳ ಜಯಶಾಲಿ

ಪುರಸಭೆ ಉಪ ಚುನಾವಣೆಯಲ್ಲಿ ಗಂಗಾರಾಮ ಭೂಸಗೋಳ ಜಯಶಾಲಿ
ಪುರಸಭೆ ಉಪ ಚುನಾವಣೆಯಲ್ಲಿ ಗಂಗಾರಾಮ ಭೂಸಗೋಳ ಜಯಶಾಲಿ

ಸಂಕೇಶ್ವರ : ಪಟ್ಟಣದ ಪುರಸಭೆಯ 21ನೇ ವಾರ್ಡಗೆ ನಡೆದ ಉಪಚುನಾವನೆಯಲ್ಲಿ ಪಕ್ಷೇತರ ಅಭ್ಯರ್ಥಿ ಗಂಗಾರಾಮ ಗಣಪತಿ ಭೂಸಗೋಳ ಅವರು ಜಯಶಾಲಿಯಾಗಿದ್ದಾರೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಈ ಹಿಂದೆ ಸದಸ್ಯರಾಗಿದ್ದ ಜಿತೇಂದ್ರ (ಅಪ್ಪಾಜಿ) ಮರಡಿ ಅವರ ನಿಧನ ಹೊಂದಿದ್ದ ಹಿನ್ನೆಲೆಯಲ್ಲಿ ತೆರವಾದ ವಾರ್ಡ ನಂ. 21ಕ್ಕೆ ಉಪಚನಾವಣೆ ನಡೆದಿತ್ತು. ಅದರ ಪ್ರಯುಕ್ತವಾಗಿ ಮಂಗಳವಾರ ಹುಕ್ಕೇರಿಯ ಮಿನಿವಿಧಾನ ಸೌಧದಲ್ಲಿ ಮತಗಳ ಎಣಿಕೆ ಕರ‍್ಯವು ನಡೆಯಿತು. ಇದರಲ್ಲಿ ಪಕ್ಷೇತ್ರ ಅಭ್ಯರ್ಥಿಯಾಗಿ ಸ್ಪರ್ಧೇ ಮಾಡಿದ್ದ ಗಂಗಾರಾಮ ಭೂಸಗೋಳ ಅವರು ಕಾಂಗ್ರೆಸ್ ನ ಭಾರತಿ ಜಿತೇಂದ್ರ ಮರಡಿ ಅವರ ವಿರುದ್ದ ಜಯ ಸಾಧಿಸಿದ್ದಾರೆ. 

  21ನೇ ವಾರ್ಡಿನ ಒಟ್ಟು 1065 ಮತಗಳ ಪೈಕಿ 803 ಮತಗಳು ಚಲಾವಣೆ ಆಗಿದ್ದವು. ಈ ಪೈಕಿ ಪಕ್ಷೇತರ ಅಭ್ಯರ್ಥಿ ಗಂಗಾರಾಮ ಭೂಸಗೋಳ ಅವರು 448 ಮತಗಳನ್ನು ಪಡೆದು ಪಡೆದು ಜಯ ಸಾಧಿಸಿದರೆ, ಕಾಂಗ್ರೆಸ್‌ನ ಭಾರತಿ ಮರಡಿ ಇವರು 345 ಮತಗಳನ್ನು ಪಡೆದರು. ಇದರಲ್ಲಿ 10 ಮತಗಳು ನೋಟಾಗೆ ಚಲಾವಣೆಯಾಗಿದ್ದವು. 

   ಈ ಚುನಾವಣೆಯಲ್ಲಿ ಅರವಿಂದ ಜಮಖಂಡಿ ಚುನಾವಣಾಧಿಕಾರಿಯಾಗಿ ಹಾಗೂ ರವೀಂದ್ರ ಗಡಾದ ಅವರು ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ಸುದ್ದಿ ಓದಿ