ಬಳ್ಳಾರಿ

ವೀರಶೈವ ಮುಖಂಡರಿಂದ ಗಾಂಧಿನಗರ ಪೊಲೀಸ್ ಇನ್ಸ್ಪೆಕ್ಟರ್‌ಗೆ ಸನ್ಮಾನ

ವೀರಶೈವ ಮುಖಂಡರಿಂದ ಗಾಂಧಿನಗರ ಪೊಲೀಸ್ ಇನ್ಸ್ಪೆಕ್ಟರ್‌ಗೆ ಸನ್ಮಾನ

ಬಳ್ಳಾರಿ:ಅ(16)ರಂದು ನಗರದಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ನೀಡಲ್ ಪಡುವ ಈ ವರ್ಷದ ಮುಖ್ಯಮಂತ್ರಿಗಳ ಪದಕ ಸ್ವೀಕರಿಸಲು ಭಾಜನರಾಗಿರುವ ಗಾಂಧಿನಗರ ಪೊಲೀಸ್ ಇನ್ಸ್ಪೆಕ್ಟರ್ ಸಿದ್ದರಾಮೇಶ್ವರ ಗಡೇದ ಇವರನ್ನು ಬಳ್ಳಾರಿ ನಗರದ ವೀರಶೈವ ಮುಖಂಡರಿಂದ ಅಭಿನಂದಿಸಿ ಸನ್ಮಾನಿಸಲಾಯಿತು.  ಈ ವೇಳೆಯಲ್ಲಿ ಜೆ. ವಿ. ಮಂಜುನಾಥ್‌ರವರು ಮಾತನಾಡಿ, ಇಂದಿನ ಕಾಲದಲ್ಲಿ ನಮ್ಮ ವೀರಶೈವ ಸಮಾಜದ ವಿದ್ಯಾರ್ಥಿಗಳು ಎಷ್ಟೇ ಓದಿದರು ಸರ್ಕಾರಿ ಕೆಲಸಗಳಿಂದ ವಂಚಿತರಾಗುತ್ತಿದ್ದಾರೆ. 

 ಅಂತದರಲ್ಲಿ ತಾವುಗಳು ಚಿಕ್ಕ ವಯಸ್ಸಿನಲ್ಲೇ ತಂದೆಯವರನ್ನು ಕಳೆದುಕೊಂಡು ಇಬ್ಬರು ತಂಗಿಯರನ್ನು ತಂದೆಯ ಸ್ಥಾನದಲ್ಲಿ ನಿಂತು ಅವರುಗಳು ಸಹ ಒಳ್ಳೆಯ ಕೆಲಸಗಳನ್ನು ಪಡೆಯುವಂತೆ ಮಾಡಿ, ಒಬ್ಬ ಸರ್ಕಾರಿ ಶಿಕ್ಷಕ ವೃತ್ತಿಯನ್ನು ಮಾಡಿ ಈ ದಿನ ಪೊಲೀಸ್ ಇನ್ಸ್ಪೆಕ್ಟರ್ ಆಗಿರುವುದು ನಮ್ಮ ಸಮಾಜಕ್ಕೆ ಹಾಗೂ ಈಗಿನ ವಿದ್ಯಾರ್ಥಿಗಳಿಗೆ ನಿಜವಾಗಲೂ ನೀವು ಮಾದರಿ. ಇನ್ನು ಮುಂದೆ ಇನ್ನೂ ಉನ್ನತ ಅಧಿಕಾರಿಗಳನ್ನು ಪಡೆಯುವಂತೆ ಆಗಲಿ ಎಂದು ಎಲ್ಲಾ ವೀರಶೈವ ಮುಖಂಡರುಗಳು ಆ ಭಗವಂತನಲ್ಲಿ ಪ್ರಾರ್ಥಿಸಿಕೊಳ್ಳುತ್ತೇವೆ ಎಂದರು.  

ಈ ಸಂದರ್ಭದಲ್ಲಿ ವೀರಶೈವ ಮುಖಂಡರುಗಳಾದ, ಬಿಚ್ಚಗಲ್ಲು ಪಂಚಾಕ್ಷರ​‍್ಪ, ಜೆ. ವಿ. ಮಂಜುನಾಥ ಪ್ರವೀಣ್ ಗೌಡ, ದಾಸಪುರ ಅರುಣ್ ಕುಮಾರ್, ತಾಳೂರು ರಸ್ತೆಯ ತಿಪ್ಪೇಸ್ವಾಮಿ, ಟೆಲಿಫೋನ್ ರಾಜಶೇಖರ್ ,ವಾಮದೇವಸ್ವಾಮಿ, ನಾಗರಾಜ್ ಗೌಡ, ಶ್ರೀಧರ ಗಡ್ಡೆ ನಿರಂಜನ, ಎಸ್ಪಿ ಸರ್ಕಲ್ ಪ್ರಕಾಶ್ ಶರಣಯ್ಯ ಸ್ವಾಮಿ, ಉಮೇಶ್ ಗೌಡ ಕುರುಗೋಡು ಚಂದ್ರ ಸ್ವಾಮಿ, ಮೂಲೆಮನೆ ಸೋಮಶೇಖರ್ ವೈ ಶರಣಪ್ಪ ಎರಿಸ್ವಾಮಿ ಎಂ ಮಂಜುನಾಥ ಶರಣಬಸವ ಕಂಠಿ, ಮುಂತಾದ ವೀರಶೈವ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ