ಗಾಂಧೀಜಿ ಚಿಂತಕ, ಸುಧಾರಕ, ತತ್ವಜ್ಞಾನಿ ಕೂಡ: ಸಿ ಎಸ್ ನಾಡಗೌಡ(ಅಪ್ಪಾಜಿ)
ಮುದ್ದೇಬಿಹಾಳ 04: ಗಾಂಧೀಜಿ ಕೇವಲ ಸ್ವಾತಂತ್ರ್ಯ ಹೋರಾಟಗಾರರು ಮಾತ್ರವಲ್ಲ ಚಿಂತಕ, ಸುಧಾರಕ, ತತ್ವಜ್ಞಾನಿ ಕೂಡ ಹಾಗಿದ್ದರು ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನ ಮೌಲ್ಯಗಳನ್ನು ಮುಂದಿನ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ದೇಶಾಭಿಮಾನ ಮೆರೆಯಬೇಕು ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮಾರ್ಜಕ ನಿಮಗದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಹೇಳಿದರು.
ಪಟ್ಟಣದ ತಾಲೂಕಾ ಆಡಳಿತ ಮತ್ತು ಪುರಸಭೆ ನೇತೃತ್ವದಲ್ಲಿ ನೇತಾಜಿ ನಗರ ಬಡಾವಣೆಯಲ್ಲಿ ನಡೆದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯನ್ನು ಭಾವ ಚಿತ್ರಕ್ಕೆ ಪುಪ್ಷಾರ್ಚನೆ ಮಾಡುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಗಾಂಧೀಜಿಯವರ ಸಂದೇಶಗಳು ಸರ್ವಕಾಲಿಕ. ಇಡೀ ಜಗತ್ತಿಗೆ ಎಂದೆಂದಿಗೂ ಪ್ರಸ್ತುತ ಎಂದರು.
ದೇಶದಲ್ಲಿ ನಾವೇಲ್ಲರೂ ಒಂದೇ ಮೇಲು ಕೀಳು ಎನ್ನುವ ಬೇದ ಭಾವ ಇರಬಾರದು ನಾವೇಲ್ಲರೂ ಭಾರತೀಯರು ಒಂದೇ ಅಖಂಡ ಭಾರತ ಕಟ್ಟುವ ಗುರಿ ಯೋಂದೇ ನಮ್ಮ ಧ್ಯೇಯವಾಗಬೇಕು ಎನ್ನುವ ಮೂಲ ಉದ್ದೇಶದೊಂದಿಗೆ ಅಹಿಂಸಾ ಚಳುವಳಿ ಮೂಲಕ ಬ್ರೀಟಿಷರಿಂದ ನಮ್ಮ ದೇಶದಿಂದ ಓಡಿಸಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಗಾಂಧೀಜಿ ಇಡಿ ಜಗತ್ತಿಗೆ ಶಾಂತಿಯ ಸಂದೇಶ ಸಾರಿದ್ದಾರೆ. ಪ್ರತಿ ವರ್ಷ ಅ. 2 ರಂದು ಅವರ ಜಯಂತ್ಯೋತ್ಸವ ಆಚರಿಸುವ ಮೂಲಕ ನೆನೆಯುತ್ತಿದ್ದೇವೆ.
ಪ್ರತಿವರ್ಷ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಅಚರಣೆ ಮಾಡುವಂತೆ ನಾವು ಮತ್ತೊಬ್ಬರು ಶ್ರೇಷ್ಠ ಮುತ್ಸದ್ಧಿ ಮಾಜಿ ಪ್ರದಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಆಚರಣೆ ಮಾಡುತ್ತೇವೆ. ಅವರ ಜನ್ಮ ದಿನವು ಸಹ ಇದೇ ಅಕ್ಟೋಬರ್ 02 ರಂದು. ಲಾಲ್ ಬಹದ್ಧೂರ್ ಶಾಸ್ತ್ರಿ ಈ ದೇಶ ಕಂಡ ಅಪ್ರತಿಮ ನಾಯಕ. ಸಜ್ಜನ ನೇತಾರ. ಗಾಂಧೀಜಿಯವರನ್ನು ನೆನೆಯುವಂತೆ, ಈ ದಿನದಂದು ನಾವು ಅವರ ಕೊಡುಗೆಗಳನ್ನು ಸಹ ನೆನೆಯುವ ದಿನವು ಹೌದು. ದೇಶದ ಸ್ವಾತಂತ್ರ್ಯಕ್ಕಾಗಿ ಗಾಂಧೀಜಿ ಅನುಯಾಯಿಯಾಗಿ ಅವರ ಕೊಡುಗೆಯು ಅಪಾರವಾಗಿದೆ. ಬಡತನದಲ್ಲೇ ಹುಟ್ಟಿ, ಬಡತನದಲ್ಲೇ ಬೆಳೆದು, ಯುವ ರಾಜಕಾರಣಿಗಳಿಗೆ ಪ್ರೇರಣೆಯಾದವರು ಲಾಲಬಹಾದ್ದೂರ ಶಾಸ್ತ್ರಿಯವರು ಎಂದರೆ ತಪ್ಪಾಗಲಾರದು.
ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂದು ಗಟ್ಟಿದನಿಯಲ್ಲಿ ಹೇಳಿದವರು ಇವರೇ. ಶಾಸ್ತ್ರೀಜಿ ಪ್ರಧಾನಿಯಾಗಿದ್ದಾಗ ನೆರೆಯ ಚೀನಾದ ಕ್ಯಾತೆಗೆ ಬಗ್ಗಲಿಲ್ಲ. ವಿಶ್ವಸಂಸ್ಥೆಯ ಒತ್ತಡಕ್ಕೂ ಮಣಿಯಲಿಲ್ಲ. ಅಮೆರಿಕದ ಬೆದರಿಕೆಗೆ ಕ್ಯಾರೇ ಎನ್ನದೇ ಎದುತ್ತರ ನೀಡಿ ದೇಶದ ಘನತೆ ಎತ್ತಿ ಹಿಡಿದ ಮಾಹಾನ್ ನಾಯಕರು ಇವರು ಎಂದರು.
ತಹಶಿಲ್ದಾರ ಬಲರಾಮ ಕಟ್ಟಿಮನಿ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಮುಖಂಡರಾದ ವಾಯ್ ಎಚ್ ವಿಜಯಕರ, ವಾಸುದೇವ ಶಾಸ್ತ್ರೀ, ಪಿ.ಎಲ್.ಡಿ ಬ್ಯಾಂಕ ಅಧ್ಯಕ್ಷ ಬಿ ಕೆ ಬಿರಾದಾರ, ಗಣ್ಯ ಉದ್ಯಮಿ ರಮೇಶ ಓಸ್ವಾಲ್, ಮುಖಂಡರಾದ ಗಫೂರಸಾಬ ಮಕಾನದಾರ, ಎಸ್ ಎಸ್ ಯು ಐ ಶಂಘಟನೆಯ ಪ್ರದಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ, ಲಕ್ಷ್ಮಣ ಲಮಾಣಿ, ಯೂಥ್ ಕಾಂಗ್ರೇಸ್ ಅಧ್ಯಕ್ಷ ಮಹಮ್ಮದರಫೀಕ ಶಿರೋಳ, ತಾಲೂಕಾ ಬ್ಲಾಕ್ ಕಾಂಗ್ರೇಸ್ ಮಹಿಳಾ ಘಟದ ಅಧ್ಯಕ್ಷೆ ಶೋಭಾ ಶಳ್ಳಗಿ, ಸೇರಿದಂತೆ ಹಲವರು ಇದ್ದರು.
ಮಾಹಾತ್ಮ ಗಾಂಧೀಜಿ ಹಾಗೂ ಲಾಲ ಬಹಾದ್ದೂರ ಶಾಸ್ತ್ರೀ ಜಿಯವರ ಜಯಂತ್ಯೋತ್ಸವದ ಅಂಗವಾಗಿ ಕರ್ನಾಟಕ ಸರಕಾರದ ಆದೇಶದಂತೆ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಅವರ ನೇತೃತ್ವದಲ್ಲಿ ತಾಲೂಕಾ ಬ್ಲಾಕ್ ಕಾಂಗ್ರೆಸ್ ಘಟಕದಿಂದ ಹಾಗೂ ತಾಲೂಕಾ ಆಡಳಿತದಿಂದ ಹಲವಾರು ಗಣ್ಯರು, ಸಾಹಿತಿಗಳು, ಉದ್ಯಮಿಗಳು, ಕಾರ್ಯಕರ್ತರು ಪಟ್ಟಣದ ಇಂದಿರಾ ವೃತ್ತದಿಂದ ಪಟ್ಟಣದ ನೇತಾಜಿ ನಗರ ಬಡಾವಣೆಯವರೆಗೆ ಪಾದಯಾತ್ರೆ ನಡೆಸುವ ಮೂಲಕ ಸಾರ್ವಜನಿಕರ ಬಹಿರಂಗ ಸಮಾರಂಭ ನಡೆಸಲಾಯಿತು.