ಕಾರವಾರ

ಗಣೇಶ ವಿಸರ್ಜನೆ: ಮದ್ಯ ಮಾರಾಟ ನಿಷೇಧ

ಗಣೇಶ ವಿಸರ್ಜನೆ: ಮದ್ಯ ಮಾರಾಟ ನಿಷೇಧ
Gaṇēśa visarjane: Madya mārāṭa niṣēdha

ಲೋಕದರ್ಶನ ವರದಿ 

  

  

ಗಣೇಶ ವಿಸರ್ಜನೆ: ಮದ್ಯ ಮಾರಾಟ ನಿಷೇಧ  

ಕಾರವಾರ 12: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಿಗದಿತ ದಿನಾಂಕ ಹಾಗೂ ಸಮಯದಲ್ಲಿ ಮದ್ಯ ಮಾರಾಟ ಮತ್ತು ಸಾಗಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.  

ಭಟ್ಕಳ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆ.16ರ ಬೆಳಗ್ಗೆ 6ರಿಂದ 24 ಗಂಟೆ, ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಸೆ.14ರ ಬೆಳಗ್ಗೆ 6ರಿಂದ 24 ಗಂಟೆ, ಮುರ್ಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ಸೆ.24ರ ಬೆಳಗ್ಗೆ 6ರಿಂದ 24 ಗಂಟೆ ಹಾಗೂ ಮಂಕಿ ಠಾಣಾ ವ್ಯಾಪ್ತಿಯಲ್ಲಿ ಸೆ.16ರ ಬೆಳಗ್ಗೆ 6ರಿಂದ 48 ಗಂಟೆ ಮತ್ತು ಸೆ.20ರ ಬೆಳಗ್ಗೆ 6ರಿಂದ 24 ಗಂಟೆ ಮದ್ಯ ಮಾರಾಟ ನಿಷೇಧಿಸಲಾಗಿದೆ.  

ಹೊನ್ನಾವರ ಠಾಣಾ ವ್ಯಾಪ್ತಿಯಲ್ಲಿ ಸೆ.18 ಹಾಗೂ ಸೆ.22ರಂದು ಬೆಳಗ್ಗೆ 6ರಿಂದ ತಲಾ 24 ಗಂಟೆ, ಕುಮಟಾ ಠಾಣಾ ವ್ಯಾಪ್ತಿಯಲ್ಲಿ ಸೆ.18 ಹಾಗೂ ಸೆ.20ರಂದು ಬೆಳಗ್ಗೆ 6ರಿಂದ ತಲಾ 24 ಗಂಟೆ ಮತ್ತು ಗೋಕರ್ಣ ಠಾಣಾ ವ್ಯಾಪ್ತಿಯಲ್ಲಿ ಸೆ.17ರ ಬೆಳಗ್ಗೆ 6ರಿಂದ 48 ಗಂಟೆ ಮದ್ಯ ಮಾರಾಟ ಹಾಗೂ ಸಾಗಾಟ ನಿಷೇಧಿಸಲಾಗಿದೆ.  

ಕಾರವಾರ ಶಹರ ಠಾಣಾ ವ್ಯಾಪ್ತಿಯಲ್ಲಿ ಸೆ.18, 20, 22 ಹಾಗೂ 24ರಂದು ಬೆಳಗ್ಗೆ 6ರಿಂದ ತಲಾ 24 ಗಂಟೆ, ಮಲ್ಲಾಪುರ ಠಾಣಾ ವ್ಯಾಪ್ತಿಯಲ್ಲಿ ಸೆ.20 ಹಾಗೂ 22ರಂದು ಬೆಳಗ್ಗೆ 6ರಿಂದ ತಲಾ 24 ಗಂಟೆ ಮತ್ತು ಅಂಕೋಲಾ ಠಾಣಾ ವ್ಯಾಪ್ತಿಯಲ್ಲಿ ಸೆ.15, 18 ಹಾಗೂ 20ರಂದು ಬೆಳಗ್ಗೆ 6ರಿಂದ ತಲಾ 24 ಗಂಟೆ ಹಾಗೂ ಸೆ.22ರ ಬೆಳಗ್ಗೆ 6ರಿಂದ ಸೆ.25ರ ಬೆಳಗ್ಗೆ 6ರವರೆಗೆ ನಿಷೇಧ ಜಾರಿಯಲ್ಲಿರುತ್ತದೆ.  

ಶಿರಸಿ ತಾಲೂಕು ವ್ಯಾಪ್ತಿಯಲ್ಲಿ ಸೆ.18ರ ಬೆಳಗ್ಗೆ 6ರಿಂದ ಸೆ.20ರ ಬೆಳಗ್ಗೆ 6ರವರೆಗೆ, ಸೆ.23 ಹಾಗೂ 25ರಂದು ಬೆಳಗ್ಗೆ 6ರಿಂದ ತಲಾ 24 ಗಂಟೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಸಿದ್ದಾಪುರ ತಾಲೂಕು ವ್ಯಾಪ್ತಿಯಲ್ಲಿ ಸೆ.18ರ ಬೆಳಗ್ಗೆ 6ರಿಂದ 24 ಗಂಟೆ ಹಾಗೂ ಸೆ.20ರ ಬೆಳಗ್ಗೆ 6ರಿಂದ ಸೆ.21ರ ಬೆಳಗ್ಗೆ 6ರವರೆಗೆ ನಿಷೇಧವಿದೆ.  

ಮುಂಡಗೋಡ ಠಾಣಾ ವ್ಯಾಪ್ತಿಯಲ್ಲಿ ಸೆ.18, 20, 22 ಹಾಗೂ 26ರಂದು ಬೆಳಗ್ಗೆ 6ರಿಂದ ತಲಾ 24 ಗಂಟೆ, ಯಲ್ಲಾಪುರ ಪಟ್ಟಣ, ಮಂಚಿಕೇರಿ ಮತ್ತು ಕಿರವತ್ತಿ ವ್ಯಾಪ್ತಿಯಲ್ಲಿ ಸೆ.18, 20 ಹಾಗೂ 24ರಂದು ಬೆಳಗ್ಗೆ 6ರಿಂದ ತಲಾ 24 ಗಂಟೆ ಮದ್ಯ ಮಾರಾಟ ನಿಷೇಧಿಸಲಾಗಿದೆ.  

ದಾಂಡೇಲಿ ತಾಲೂಕು ವ್ಯಾಪ್ತಿಯಲ್ಲಿ ಸೆ.18, 20, 22 ಹಾಗೂ 25ರಂದು ಬೆಳಗ್ಗೆ 6ರಿಂದ ತಲಾ 24 ಗಂಟೆ, ಹಳಿಯಾಳ ತಾಲೂಕು ವ್ಯಾಪ್ತಿಯಲ್ಲಿ ಸೆ.18, 20, 22 ಹಾಗೂ 24ರಂದು ಬೆಳಗ್ಗೆ 6ರಿಂದ ತಲಾ 24 ಗಂಟೆ ನಿಷೇಧ ಜಾರಿಯಲ್ಲಿರುತ್ತದೆ.  

ಜೋಯಿಡಾ ತಾಲೂಕು ವ್ಯಾಪ್ತಿಯಲ್ಲಿ ಸೆ.20 ಹಾಗೂ 22ರಂದು ಬೆಳಗ್ಗೆ 6ರಿಂದ 24 ಗಂಟೆ ಮತ್ತು ಸೆ.24ರ ಬೆಳಗ್ಗೆ 6ರಿಂದ 48 ಗಂಟೆ, ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆ.20, 22 ಹಾಗೂ 25ರಂದು ಬೆಳಗ್ಗೆ 6ರಿಂದ ತಲಾ 24 ಗಂಟೆ ಮದ್ಯ ಮಾರಾಟ ಹಾಗೂ ಸಾಗಾಟ ನಿಷೇಧಿಸಲಾಗಿದೆ.  

ಈ ಅವಧಿಯಲ್ಲಿ ವೈನ್ ಶಾಪ್, ಬಾರ್ ಸೇರಿದಂತೆ ಎಲ್ಲ ರೀತಿಯ ಮದ್ಯ ಮಾರಾಟ ಮತ್ತು ಸಾಗಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸಾರ್ವಜನಿಕರು ಆದೇಶ ಪಾಲಿಸಿ ಗಣೇಶ ವಿಸರ್ಜನಾ ಕಾರ್ಯಕ್ರಮಗಳನ್ನು ಶಾಂತಿಯುತವಾಗಿ ನಡೆಸಲು ಸಹಕರಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. 


ಸುದ್ದಿ ಓದಿ