ಅಲಿಗದ್ದ ಕಡಲತೀರ ಸ್ವಚ್ಛತಾ ಅಭಿಯಾನ

ಅಲಿಗದ್ದ ಕಡಲತೀರ ಸ್ವಚ್ಛತಾ ಅಭಿಯಾನ  Aligadda Beach Clean-up Drive

ಲೋಕದರ್ಶನ ವರದಿ 

  ಕಾರವಾರ 25 : ಕಡಲತೀರಗಳ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಕಡಲ ಪರಿಸರ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು  ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ  ಯ ಹಿರಿಯ ವಿಜ್ಞಾನಿ ಡಾ. ಮಹೇಶ್ ಹೇಳಿದರು. ಕಾರವಾರದ ಅಲಿಗದ್ದ ಕಡಲತೀರದಲ್ಲಿ  ್ಕ್ರ ಕಾರವಾರ ಪ್ರಾದೇಶಿಕ ಕೇಂದ್ರ ಹಾಗೂ ರಿಲಯನ್ಸ್‌ ಫೌಂಡೇಶನ್ ಸಹಯೋಗದಲ್ಲಿ ‘ಸ್ವಚ್ಛತಾ ಹಿ ಸೇವಾ’ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಪ್ಲಾಸ್ಟಿಕ್ ತ್ಯಾಜ್ಯ, ಬಳಕೆಯಲ್ಲದ ಮೀನುಗಾರಿಕಾ ಬಲೆಗಳು ಸೇರಿದಂತೆ ಸಮುದ್ರ ತ್ಯಾಜ್ಯಗಳು ಸಮುದ್ರ ಜೀವವೈವಿಧ್ಯಕ್ಕೆ ಅಪಾಯ ಉಂಟುಮಾಡುತ್ತವೆ. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ಸಮರ​‍್ಕವಾಗಿ ವಿಲೇವಾರಿ ಮಾಡುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು. ಸಿಎಂಎಫ್‌ಆರ್‌ಐ ಪ್ರಧಾನ ವಿಜ್ಞಾನಿ ಡಾ. ಕಾಳಿದಾಸ್ ಮಾತನಾಡಿ, ಕಡಲತೀರಗಳ ಸ್ವಚ್ಛತೆಯಿಂದ ಪ್ಲಾಸ್ಟಿಕ್ ಹಾಗೂ ಇತರ ಮಾಲಿನ್ಯಕಾರಕ ವಸ್ತುಗಳು ಸಮುದ್ರ ಸೇರುವುದನ್ನು ತಡೆಯುವ ಮೂಲಕ ಸಮುದ್ರ ಜೀವಿಗಳು ಮತ್ತು ಅವುಗಳ ಆವಾಸಸ್ಥಾನಗಳನ್ನು ರಕ್ಷಿಸಬಹುದು ಎಂದರು.  

ಕಾರ್ಯಕ್ರಮದಲ್ಲಿ ರಿಲಯನ್ಸ್‌ ಫೌಂಡೇಶನ್ ಸಂಯೋಜಕ ಸಂತೋಷ, ಸಿಎಂಎಫ್‌ಆರ್‌ಐ ಸಿಬ್ಬಂದಿ, ಕಾರವಾರ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಎನ್ಸಿಸಿ ಕೆಡೆಟ್ಗಳು, ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಮೀನುಗಾರರು ಭಾಗವಹಿಸಿ ಕಡಲತೀರ ಸ್ವಚ್ಛಗೊಳಿಸಿದರು. ಸಿಎಂಎಫ್‌ಆರ್‌ಐ ವಿಜ್ಞಾನಿಗಳಾದ ಡಾ. ರಘು ರಾಮುಡು ಹಾಗೂ ಡಾ. ತನ್ವೀರ್ ಹುಸೇನ್ ಅಭಿಯಾನವನ್ನು ಸಂಯೋಜಿಸಿದರು.