ಅಂತರಾಷ್ಟ್ರೀಯ ಸೈಮಾ ಅವಾರ್ಡ್ ಗೆ ಜಿಜಿ ನಾಮಿನೇಟೆಡ್ .
ಮಹಾಲಿಂಗಪುರ 04: 2012 ರಿಂದ ಪ್ರತಿವರ್ಷ ನೀಡುವ ದಕ್ಷಿಣ ಭಾರತ ಅಂತರಾಷ್ಟ್ರೀಯ ಚಲನಚಿತ್ರ (ಸೈಮಾ) ಪ್ರಶಸ್ತಿ 2020 ಗೆ ಖ್ಯಾತ ಕಾಮಿಡಿ ಕಿಲಾಡಿ, ಚಲನಚಿತ್ರ ನಟ ಗೋವಿಂದೇಗೌಡ (ಜಿಜಿ) ಅವರ ಹೆಸರು ಸೂಚಿತವಾಗಿದ್ದು ಅಂತರ್ಜಾಲದಲ್ಲಿ ಮತದಾನ ಆರಂಭಗೊಂಡಿದೆ.
ಕನ್ನಡದ ಖ್ಯಾತ ಹಾಸ್ಯ ನಟರಾದ ರಂಗಾಯಣ ರಘು, ಸಾಧುಕೋಕಿಲ, ಕುರಿ ಪ್ರತಾಪ್, ಪ್ರಶಾಂತ ಸಿದ್ಧಿ ಅವರ ಜೊತೆ ಗೋವಿಂದೇಗೌಡ ಅವರ ಹೆಸರು ಸೂಚಿತವಾಗಿದ್ದು ವಿಜಯನಗರ ಜಿಲ್ಲೆಗಲ್ಲದೆ ಉತ್ತರ ಕರ್ನಾಟಕಕ್ಕೂ ಕೀರ್ತಿ ಬಂದಂತಾಗಿದೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಡಬಗೆರೆ ಗ್ರಾಮದ ದಿ. ಉತ್ತಂಗಿ ಬಸವನಗೌಡ ಮತ್ತು ದಿ. ನಾಗಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ಗೋವಿಂದೇಗೌಡ ಕಡು ಬಡತನವನ್ನು ಮೆಟ್ಟಿನಿಂತು ರಂಗಭೂಮಿ, ಬೆಳ್ಳಿತೆರೆ ಹಾಗೂ ಸಿನಿಮಾರಂಗದಲ್ಲಿ ನಿರ್ದೇಶಕ ಮತ್ತು ಹಾಸ್ಯನಟರಾಗಿ ಜನಮನ ಗೆದ್ದಿದ್ದಾರೆ.
ಜೀ ಕನ್ನಡ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಗೋವಿಂದೇಗೌಡ ಖ್ಯಾತ ನಟ ಜಗ್ಗೇಶ್, ಖ್ಯಾತ ನಿರ್ದೇಶಕ ಯೋಗರಾಜ ಭಟ್, ಖ್ಯಾತ ನಟಿ ರಕ್ಷಿತಾ ಮುಂತಾದವರ ಶಹಭಾμï ಗಿರಿ ಪಡೆದು ಕನ್ನಡಿಗರ ಜನ ಮನಸೂರೆಗೊಂಡರು ಮುಂದೆ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿ ಖ್ಯಾತ ನಟ ಯಶ್ ಅವರ ಜೊತೆ ಕೆಜಿಎಫ್ 1 ಮತ್ತು 2, ಪುನೀತ್ ರಾಜಕುಮಾರ್ ಜೊತೆ ಜೇಮ್ಸ್ ಮತ್ತು ಉಪೇಂದ್ರ ಅವರ ತ್ರಿಶೂಲ ಹಾಗೂ ಪ್ರೇಮ್, ಧನಂಜಯ ಅವರೊಂದಿಗೆ ನಟಿಸಿದ್ದು, ಹಿರಿಯ ಖ್ಯಾತ ನಟರಾದ ಅನಂತ ನಾಗ್, ಪ್ರಕಾಶ್ ರೈ, ನಾಗಾಭರಣ, ಉಮಾಶ್ರೀಯವರೊಂದಿಗೆ ತೆರೆ ಹಂಚಿಕೊಂಡು 52 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಹೆಗ್ಗಳಿಕೆ ಇವರದು. ಇವರು ಮುಖ್ಯ ಪಾತ್ರದಲ್ಲಿ ನಟಿಸಿರುವ ಮನೋಜ್ ಕುಮಾರ್ ನಿರ್ದೇಶನದ ಅಕ್ಷಿ ಚಲನಚಿತ್ರ ರಾಷ್ಟ್ರ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ರಂಗಭೂಮಿಯಲ್ಲಿ ನಟನೆ, ನಿರ್ದೇಶನದಲ್ಲಿ ತಮ್ಮದೇ ಆದ ವಿಶೇಷ ಶೈಲಿ ಮೆರೆದು ಚಿತ್ರರಂಗದಲ್ಲಿ ಶ್ರೀಚಕ್ರಂ, ಜಂತರ್ ಮಂತರ್ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ಸ್ವತಃ ತಮಟೆ ಬಡಿಯುತ್ತಾ ಹಳ್ಳಿಗಳಲ್ಲಿ ಹಾಡಿ ಜನಮನಗೆದ್ದ ವಿಜಯನಗರದ ಕುವರ, ಅಗಾಧ ಪ್ರತಿಭೆ ಗೋವಿಂದೇಗೌಡರಿಗೆ ಜಯವಾಗಲು ತಾವು ಸೈಮಾ ಅವಾರ್ಡಿಗೆ ಮತಚಲಾಯಿಸಿ ಗೆಲ್ಲಿಸಬೇಕಾಗಿ ಎಂಬುದು ಅವರ ಅಭಿಮಾನಿಗಳ ಆಶಯವಾಗಿದೆ.
ಲಿಂಕ್ ಬಳಸಿ, ಕನ್ನಡ ಆಯ್ಕೆ ಮಾಡಿ, ಬೆಸ್ಟ್ ಕಾಮಿಡಿ ಆಕ್ಟರ್ ನಲ್ಲಿ ಗೋವಿಂದೇಗೌಡ ಆಯ್ಕೆ ಮಾಡಿ ಮತ ಚಲಾಯಿಸಬಹುದಾಗಿದೆ ಎಂದು ಅಭಿಮಾನಿ ಬಳಗ ತಿಳಿಸಿದೆ.