ರಾಷ್ಟ್ರೀಯ

ಜಿಡಿಪಿ ದರ ಶೇ 5 : ಎನ್ ಎಸ್ ಒ ಅಂದಾಜು

ಜಿಡಿಪಿ ದರ ಶೇ 5 : ಎನ್ ಎಸ್ ಒ ಅಂದಾಜು
ನವದೆಹಲಿ, ಜ 8, ಭಾರತದ ಆರ್ಥಿಕತೆ 2019-20 ರಲ್ಲಿ ಶೇ 5 ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ (ಎನ್ಎಸ್ಒ) ತಿಳಿಸಿದೆ. ಉತ್ಪಾದನಾ ಕ್ಷೇತ್ರದ ಪ್ರಗತಿ ಕುಸಿತದಿಂದಾಗಿ ಜಿಡಿಪಿ ಪ್ರಮಾಣ ಇಳಿಕೆ ಕಂಡಿದೆ ಎಂದು ಎನ್ ಎಸ್ ಒ ಬಿಡುಗಡೆ ಮಾಡಿದ ರಾಷ್ಟ್ರೀಯ ಆದಾಯದ ಮೊದಲ ಅಂದಾಜು ತಿಳಿಸಿದೆ. ಕಳೆದ ವರ್ಷ ಶೇ 6.2 ರಷ್ಟಿದ್ದ ಉತ್ಪಾದನಾ ವಲಯದ ಪ್ರಗತಿ 2019-20 ರಲ್ಲಿ ಶೇ 2 ಕ್ಕೆ ಇಳಿಕೆಯಾಗುವ ಆತಂಕವಿದ್ದು ಜಿಡಿಪಿ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಕೃಷಿ, ನಿರ್ಮಾಣ ಮತ್ತು ವಿದ್ಯುತ್, ಅನಿಲ ಮತ್ತು ನೀರು ಸರಬರಾಜು ಮುಂತಾದ ಕ್ಷೇತ್ರಗಳಲ್ಲಿಯೂ ಈ ಕುಸಿತ ಕಂಡುಬಂದಿದೆ. ಗಣಿಗಾರಿಕೆ, ಸಾರ್ವಜನಿಕ ಆಡಳಿತ ಮತ್ತು ರಕ್ಷಣಾ ವಲಯ ಸೇರಿದಂತೆ ಕೆಲವು ವಲಯಗಳಲ್ಲಿ ಅಲ್ಪ ಪ್ರಮಾಣದ ಸುಧಾರಣೆಗಳು ಕಂಡು ಬಂದಿವೆ.

ಸುದ್ದಿ ಓದಿ