ಜಿ ಎಂ ರಾಜೇಶ್ವರಿಯವರ "ಹೆಣ್ಣಿನ ತಾಳ್ಮೆ " ಕಾದಂಬರಿ ಬಿಡುಗಡೆ ಕಾರ್ಯಕ್ರಮ
ಬಳ್ಳಾರಿ03: ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಜಿ ಎಂ ರಾಜೇಶ್ವರಿಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ತರವಾಯ ಮೋಕಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಡಿ ಜಿ ಕಲಾವತಿಯವರು ಪುಸ್ತಕ ಬಿಡುಗಡೆ ಮಾಡಿದರು. ನಂತರ ಇವರು ಮಾತನಾಡುತ್ತಾ, ಮಹಿಳಾ ಲೇಖಕರು ಇಂದು ಕೌಟುಂಬಿಕ ಚೌಕಟ್ಟುಗಳಾಚೆ ಮೀರಿ ಸಾಮಾಜಿಕ ಬೆಳವಣಿಗೆಯ ಮುಖ್ಯ ಭಾಗವಾಗಿದ್ದಾಳೆ.
ಹೆಣ್ಣಿನಿಂದಲೇ ಎಲ್ಲವೂ ಹೆಣ್ಣಿಲ್ಲದೆ ಏನೂ ಇಲ್ಲ. ಅದು ಸಾಹಿತ್ಯ ಕ್ಷೇತ್ರಕ್ಕೂ ಸಂಬಂಧಿಸಿದೆ. ಹಾಗೂ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಹಿಳಾ ಲೇಖಕರ ಪಾಲು ಬಹಳ ದೊಡ್ಡದಿದೆ. ಅದರಲ್ಲೂ ತಿರುಮಲಾಂಬ, ಕೊಡಗಿನ ಗೌರಮ್ಮ, ವೀಣಾ ಶಾಂತೇಶ್ವರ, ಶಾಂತಾದೇವಿ ಮಾಳವಾಡ, ಪ್ರತಿಭಾ ನಂದಕುಮಾರ್ ನೀಡಿರುವ ಕೊಡುಗೆಯನ್ನು ಮುಂದುವರೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿ.ಎಂ ರಾಜೇಶ್ವರಿ ಯವರ ಹೆಣ್ಣಿನ ತಾಳ್ಮೆ ಕಾದಂಬರಿ ಬಿಡುಗಡೆ ಮಾಡಿ ಮಾತನಾಡಿದರು.
ಹಾಗೂ ಪಿ.ಎಲ್. ಗಾದಿಲಿಂಗನ ಗೌಡ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಸುಲೇಖಾ ಬಿ ಯವರು ನಮ್ಮ ಕಾಲೇಜಿನಲ್ಲಿ ಕ.ಸಾ.ಪ ದ ಕಾರ್ಯಕ್ರಮಗಳಿಗೆ ಸದಾ ಸ್ವಾಗತ ಸಹಕಾರ ನೀಡುತ್ತೇವೆ. ಇಂಥ ಪುಸ್ತಕ ಬಿಡುಗಡೆಗಳ ಜೊತೆಗೆ ಹಲವು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಿ ಎಂದು ಹಾರೈಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ನಿಷ್ಟಿ ರುದ್ರಪ್ಪನವರು ಪ್ರಾಸ್ತಾವಿಕ ನುಡಿಯುತ್ತಾ ಕ.ಸಾ.ಪ ಚಟುವಟಿಕೆಗಳ ಕುರಿತು ಮಾಹಿತಿ ನೀಡುತ್ತಾ ಹೊಸಬರ ಕೃತಿಗಳನ್ನು ಹೊರ ತರುವಲ್ಲಿ ವೇದಿಕೆಯಾಗಿ ಕನ್ನಡ ಸಾಹಿತ್ಯ ಪರಿಷತ್ತು ಯಾವತ್ತಿಗೂ ಜೊತೆಗಿರುತ್ತೆ ಎಂದು ಹೇಳಿದರು.ಹಾಗೂ ಕಾದಂಬರಿಯ ಕತೃ ಬಿ.ಎಂ.ರಾಜೇಶ್ವರಿ ಯವರು ಕಾದಂಬರಿ ರಚನೆ, ವಿನ್ಯಾಸ, ಅನುಭವಗಳನ್ನು ಹಂಚಿಕೊಂಡರು.ಉಪನ್ಯಾಸಕರಾದ ಚಾಂದ್ ಪಾಷಾ ನಿರೂಪಿಸಿ, ಕ.ಸಾ.ಪ ಗೌರವ ಕಾರ್ಯದರ್ಶಿಯಾದ ಡಾ. ಕೆ.ಶಿವಲಿಂಗಪ್ಪ ಹಂದಿಹಾಳು ಸ್ವಾಗತಿಸಿದರೆ, ಲೇಖಕ ಯು. ಶ್ರೀನಿವಾಸ ಮೂತರ್ಿ ವಂದಿಸಿದರು. ಅತಿಥಿಗಳಾದ ಶಿಕ್ಷಕಿ ಮಾಧವಿ ಲತಾ,ಡಾ.ದಸ್ತಗೀರ್ ಸಾಬ್ ದಿನ್ನಿ, ಅಜಯ ಬಣಕಾರ, ವೀರೇಂದ್ರ ರಾವಿಹಾಳ್, ಹೆಚ್.ಎಂ. ಜ್ಯೋತಿ ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು