ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಭರದ ಸಿದ್ದತೆ : ನಗರದ ರಸ್ತೆಗಳಿಗೆ ರಿಪೇರಿ ಭಾಗ್ಯ

ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಭರದ ಸಿದ್ದತೆ : ನಗರದ ರಸ್ತೆಗಳಿಗೆ ರಿಪೇರಿ ಭಾಗ್ಯ

ಬೆಳಗಾವಿ : ಬೆಳಗಾವಿಯ ‌ಸುವರ್ಣ ವಿಧಾನ ಸೌಧದಲ್ಲಿ ಚಳಿಗಾಲದ ಅಧಿವೇಶನದ ಮೂಹರ್ತ ನಿಗದಿಯಾಗುತ್ತಿದ್ದಂತೆ ಸ್ವಚ್ಚತಾ ಕಾರ್ಯಗಳು ಭರದಿಂದ ಸಾಗಿದ್ದು, ಸುವರ್ಣ ಸೌಧ ಸೇರಿದಂತೆ ಬೆಳಗಾವಿಯ ರಸ್ತೆಗಳಿಗೀಗ ರಿಪೇರಿ ಹಾಗೂ ಸ್ವಚ್ಚತೆ, ಸುಣ್ಣ ಬಣ್ಣಗಳ ಭಾಗ್ಯ ದೊರೆತಿದೆ. ಚಳಿಗಾಲದ ಅಧಿವೇಶನವು ಸುಗಮವಾಗಿ ಸಾಗಲು ಬೆಳಗಾವಿ ಜಿಲ್ಲಾಡಳಿತ ಎಲ್ಲ ವ್ಯವಸ್ಥೆಯನ್ನು ಮಾಡಿಕೊಳ್ಳುತಿದೆ. 

     ಹೌದು ಬರುವ ಡಿ. 8ರಿಂದ ಡಿ. 19ರ ವರೆಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಸಲು ಸರಕಾರ ಸಿದ್ದತೆ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ನೂರಾರು ಕಾರ್ಮಿಕರು ಸುವರ್ಣ ಸೌಧ ಹಾಗೂ ರಸ್ತೆಗಳ ಸ್ವಚ್ಚತಾ ಹಾಗೂ ರಿಪೇರಿ ಮಾಡುವಲ್ಲಿ ಅನಿಯಾಗಿದ್ದಾರೆ. 

     ಅತ್ತ ಸುವರ್ಣ ಸೌಧದಲ್ಲಿ ಹಲವಾರು ಕಾರ್ಮೀಕರು ಸೌಧ ಸ್ವಚ್ಚತೆ ಮಾಡುತ್ತಿದ್ದರೆ ಹೊರಗೆ ಸೌಧದ ಮುಂದಿನ ಉದ್ಯಾನವನದಲ್ಲಿಯೂ ಕೂಡ ಸ್ವಚ್ಚತಾ ಕ್ರಮಕೈಗೊಂಡಿದ್ದಾರೆ. 

    ಇವೆಲ್ಲದರ ನಡುವೆ ಬೆಳಗಾವಿ ನಗರದ ರಸ್ತೆಗಳ ರಿಪೇರಿ ಜೊತೆಗೆ ಸ್ವಚ್ಚತೆಗೆ ಆದ್ಯತೆ ನೀಡಲಾಗಿದೆ. ಅತ್ತ ಜಿಲ್ಲಾಧಿಕಾರಿ ಮೊಹಮದ್ ರೋಷನ್ ಹಾಗೂ ಜಿಪಂ ಸಿಇಓ ರಾಹುಲ್ ಶಿಂಧೆ ಅವರು ಎಲ್ಲ ಸೌಕರ್ಯಗಳ ಬಗ್ಗೆ ವ್ಯವಸ್ಥೆ ಮಾಡುತ್ತಿದ್ದರೆ ಇತ್ತ ಬೆಳಗಾವಿ ಪೊಲೀಸ್ ಆಯುಕ್ತ  ಭೋರಸೆ ಅವರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಅವರುಗಳು ಪೊಲೀಸ ಬಂದೋಬಸ್ತ್ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ. 


   ‌‌

ಸುದ್ದಿ ಓದಿ