ರಾಣೆಬೆನ್ನೂರ

ಹೇಮಾವತಿ ಅಮ್ಮನವರ ಜನ್ಮದಿನದ ಪ್ರಯುಕ್ತ ಹಣ್ಣು ಹಂಪಲ ವಿತರಣೆ

ಹೇಮಾವತಿ ಅಮ್ಮನವರ ಜನ್ಮದಿನದ ಪ್ರಯುಕ್ತ ಹಣ್ಣು ಹಂಪಲ ವಿತರಣೆ

ರಾಣೇಬೆನ್ನೂರ 04 : ವೀರೇಂದ್ರ ಹೆಗ್ಗಡೆ ಅವರ ಧರ್ಮಪತ್ನಿ ಹೇಮಾವತಿ ಅಮ್ಮನವರ ಜನ್ಮದಿನದ ಪ್ರಯುಕ್ತ ವಾತ್ಸಲ್ಯ ಯೋಜನೆಯಡಿ ಮನೆ ನಿರ್ಮಾಣ ಮಾಡಿರುವ ಹಾಗೂ ಅಸಹಾಯಕ ಸದಸ್ಯರುಗಳಿಗೆ   ತಾಲೂಕಿನ ಹೊಳೆ ಆನ್ವೇರಿ ಗ್ರಾಮದಲ್ಲಿ ಹಣ್ಣು ಹಂಪಲ ವಿತರಿಸಲಾಯಿತು.  ತಾಲೂಕ ಯೋಜನಾಧಿಕಾರಿ ಮಂಜುನಾಥಗೌಡ ಎಂ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ವಿಭಿನ್ನ ಹಾಗೂ ವಿಶೇಷ ಯೋಜನೆಗಳನ್ನು ರೂಪಿಸಿ ಎಲ್ಲ ವರ್ಗದವರಿಗೂ ಅದರಲ್ಲೂ ನಿರ್ಗತಿಕರಿಗೂ ವಿಶೇಷ ಕಾಳಜಿವಹಿಸುತ್ತಾ ಅವರ ನೆಮ್ಮದಿಯ ಜೀವನಕ್ಕೆ ಯೋಜನೆಯು ಬೆನ್ನೆಲುಬಾಗಿ ನಿಂತಿದೆ ಎಂದರು.

ದೂರದೃಷ್ಟಿಯನ್ನಿಟ್ಟುಕೊಂಡು ಪೂಜ್ಯ ವೀರೇಂದ್ರ ಹೆಗ್ಗಡೆಯವರು ಹಲವಾರು ಯೋಜನೆಗಳನ್ನು ರೂಪಿಸಿದ್ದಾರೆ ಅವರ ಜೊತೆ ಅವರ ಧರ್ಮಪತ್ನಿ ಹೇಮಾವತಿ ಅಮ್ಮನವರ ಸಹಕಾರವು ತುಂಬಾ ಮುಖ್ಯವಾಗಿದೆ ಹೀಗಾಗಿ ಅಮ್ಮನವರ ಜನ್ಮದಿನದ ಪ್ರಯುಕ್ತ ತಾಲೂಕಿನ 48ಕ್ಕೂ ಅಧಿಕ ಸದಸ್ಯರುಗಳ ಮನೆ ಮನೆಗಳಿಗೆ ತೆರಳಿ ಹಣ್ಣು ಹಂಪಲ ವಿತರಿಸಲಾಯಿತು, ಜ್ಞಾನ ವಿಕಾಸ ಯೋಜನಾಧಿಕಾರಿ ಶೋಭಾ ಹೆಚ್ ಸೇರಿದಂತೆ ತಾಲೂಕಿನ ಆಯಾ ವಲಯಗಳಲ್ಲಿ ಜ್ಞಾನ ವಿಕಾಸ ಯೋಜನಾಧಿಕಾರಿಗಳು ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು ಸೇರಿದಂತೆ ಗ್ರಾಮದ ಗಣ್ಯರು ಹಾಗೂ ಸಂಘದ ಸದಸ್ಯರುಗಳು ಮತ್ತಿತರರು ಇದ್ದರು.  ಚಿತ್ರ:- ಹೇಮಾವತಿ ಅಮ್ಮನವರ ಜನ್ಮದಿನದ ಪ್ರಯುಕ್ತ ಹಣ್ಣು ಹಂಪಲ ವಿತರಿಸಿದ ಯೋಜನಾಧಿಕಾರಿ ಮಂಜುನಾಥಗೌಡ ಎಂಸೇವಾಪ್ರತಿನಿಧಿಗಳು ಹಾಗೂ ಗಣ್ಯರು ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ