ಮಹಲಿಂಗಪುರ

ಯುವಕನೋರ್ವನಿಂದ ದೀಡ ನಮಸ್ಕಾರ, 135ಕಿಮಿ ಪಾದಯಾತ್ರೆ

ಯುವಕನೋರ್ವನಿಂದ ದೀಡ ನಮಸ್ಕಾರ, 135ಕಿಮಿ ಪಾದಯಾತ್ರೆ
ತೇರದಾಳ ಮತ ಕ್ಷೇತ್ರದಲ್ಲಿ ಅಂಬಾದಾಸ ಅವರಿಗೆ ಚುನಾವಣೆಯಲ್ಲಿ ಗೆಲುವು ದೊರೆಯಲಿ ಎಂದು ದೀಡ ನಮಸ್ಕಾರ ಹಾಕಲು ನಿರ್ಧರಿಸಿದ

ಮಹಾಲಿಂಗಪುರ: ತೇರದಾಳ ಮತ ಕ್ಷೇತ್ರದಲ್ಲಿ ಅಂಬಾದಾಸ ಅವರಿಗೆ ಚುನಾವಣೆಯಲ್ಲಿ ಗೆಲುವು ದೊರೆಯಲಿ ಎಂದು ದೀಡ ನಮಸ್ಕಾರ ಹಾಕಲು ನಿರ್ಧರಿಸಿದ ಯುವಕನನ್ನು ಮಹಾಲಿಂಗಪುರ ಪಟ್ಟಣದ ಕುರುಹಿನಶೆಟ್ಟಿ ಸಮಾಜದ ಬಾಂಧವರು ಮತ್ತು ಚುನಾವಣಾ ಅಭ್ಯರ್ಥಿ ಅಂಬಾದಾಸ ಕಾಮೂರ್ತಿ  ಸ್ಥಳೀಯ ನೀಲಕಂಠೇಶ್ವರ ದೇವಸ್ಥಾನದಲ್ಲಿ ಯುವಕನನ್ನು ಸನ್ಮಾನಿಸಿ ಬೀಳ್ಕೊಟ್ಟರು. 

ನೇಕಾರ ಸಮುದಾಯದ ಏಳಿಗೆಯ ವಿಷಯದಲ್ಲಿ ಸರ್ಕಾರಗಳು ಅಥವಾ ಜನಪ್ರತಿನಿಧಿಗಳಾಗಲಿ ಬೆನ್ನಿಗೆ ನಿಂತಿಲ್ಲ ಎಂದು ಖ್ಯೇದ ವ್ಯಕ್ತಪಡಿಸುತ್ತ, ತೇರದಾಳ ಪಟ್ಟಣದ ಕುರುಹಿನಶೆಟ್ಟಿ ಸಮಾಜದ ಶ್ರೀಶೈಲ ಮಲ್ಲಪ್ಪ. ಖವಾಸಿ ಎಂಬ ಯುವಕ, ತೇರದಾಳ ಮತ ಕ್ಷೇತ್ರಕ್ಕೆ ಬರುವ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಆಯ್ಕೆ ಬಯಸಿ ಬಂದಿರುವ ಅಂಬಾದಾಸ ಕಾಮೂರ್ತಿ  ಗೆಲುವಿಗೆ ಮಾರ್ಗ ಸುಗಮವಾಗಿ ಸಮುದಾಯದ ಕಷ್ಟ ಕಾರ್ಪಣ್ಯಗಳು ದೂರಾಗಲಿ ವಸುದೈವ ಕುಟುಂಬಕಂ ಎಂಬ ಸದುದ್ದೇಶ ಈಡೇರಬೇಕೆಂದು, ಶನಿವಾರ ತೇರದಾಳದ ವಿರಕ್ತ ಮಠದಿಂದ ಪ್ರಯಾಣ ಬೆಳೆಸಿ ಅಮಾವಾಸ್ಯೆಯಂದು ಬಾದಾಮಿಯ ಶಿವಯೋಗ ಮಂದಿರವರೆಗೆ ತಮ್ಮ ಸ್ವಂತ ಖರ್ಚಿನಲ್ಲಿ ದೀಡ್ ನಮಸ್ಕಾರ ಮತ್ತು 135ಕಿಮಿ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾನೆ.

ಈ ಸಂದರ್ಭದಲ್ಲಿ ಯುವಕನನ್ನು ಸನ್ಮಾನಿಸಿ ಮಾತನಾಡಿದ ಅಂಬಾದಾಸ ಕಾಮೂರ್ತಿ ನನ್ನ ಕಾರ್ಯಕ್ಷಮತೆ, ನನಗಿರುವ ಸ್ವಾಭಿಮಾನಿ ಸಮಾಜದ ಒಟ್ಟು ಬಲ ಮತ್ತು ಮಿತ್ರ ಸಮಾಜಗಳ ಬೆಂಬಲವನ್ನು ಗುರುತಿಸಿ ರಾಷ್ಟ್ರೀಯ ಪಕ್ಷಗಳೇನಾದರೂ ಚುನಾವಣಾ ಟಿಕೆಟ್ ನೀಡಿದರೆ ಸ್ವ-ಸಂತೋಷದಿಂದ ಸ್ಪರ್ಧೆಸಲು ಸಿದ್ಧನಿದ್ದೇನೆ. ಗುರುತಿಸದೆ ಇದ್ದರೂ ನಾನು ತೇರದಾಳ ಮತ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿಯೇ ಕಣಕ್ಕೆ ಇಳಿದು ಕೊನೆಯ ವರೆಗೂ ಗೆಲುವುಗಾಗಿ ಶ್ರಮಿಸುತ್ತೇನೆ. ಈ ಕ್ಷೇತ್ರದಲ್ಲಿ ಆಡಳಿತ ನಡೆಸಿರುವ ಅಭ್ಯರ್ಥಿಗಳ ಬಗ್ಗೆ ಸ್ವಾಭಿಮಾನಿ ಸಮಾಜಗಳಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ. ಈ ಮಧ್ಯೆ ಕ್ಷೇತ್ರಕ್ಕೆ ಒಳ್ಳೆಯ ಅಭ್ಯರ್ಥಿ  ಸಿಕ್ಕಿದ್ದಾನೆ ಎಂದು ಹೋದಲೇಲ್ಲ ಬೆಂಬಲ ದೊರೆಯುತ್ತಿದೆ.ಈ ಬಾರಿ ಗೆಲುವು ನನ್ನದೆ ಆಗುತ್ತದೆ ಎಂದು ಬಲವಾದ ಆತ್ಮ ವಿಶ್ವಾಸದಿಂದ ಹೇಳಿದರು. 

ಅಭ್ಯರ್ಥಿ  ಪರ ಪ್ರಚಾರ ಕಣದಲ್ಲಿರುವ ಮುಖಂಡ ಚೇತನ್ ಹುಣಿಶ್ಯಾಳ ದೀಡ್ ನಮಸ್ಕಾರ ಹಾಕುವ ಯುವಕನಿಗೆ ಹಾಗೂ ಅಭ್ಯರ್ಥಿ ಕಾಮೂರ್ತಿಯವರಿಗೆ ಶುಭ ಹಾರೈಸಿದರು.

ಈ ಸಮಯದಲ್ಲಿ ಕುರುಹಿನಶೆಟ್ಟಿ ಕೇಂದ್ರ ಸಂಘದ ನಿರ್ದೇಶಕ ಡಿ.ಮದನಕುಮಾರ, ಎಂ ಎಸ್.ಮುಗಳಖೋಡ, ಮಹಾದೇವಪ್ಪ ಬರಗಿ,ಪ್ರಕಾಶ ಮರೆಗುದ್ದಿ, ಬಸವರಾಜ ಗೋಲಭಾವಿ, ಸುರೇಶ ಗೋಲಭಾವಿ, ಗುರುಲಿಂಗಪ್ಪ ಮುಂಡಗನೂರ, ಮಲ್ಲಿಕಾರ್ಜುನ ಜಂಬಗಿ, ಮಂಜುನಾಥ ಬಾಡಗಿ, ಮಹಾಂತೇಶ ಸೊನ್ನದ, ಬಸು ಯಾದವಾಡ, ಅಪ್ಪು ಕಾರಜೋಳ ಮತ್ತು ಸಮಾಜದ ಮಹಿಳೆಯರು ಉಪಸ್ಥಿತರಿದ್ದರು. 


ಸುದ್ದಿ ಓದಿ