ಅಹಿಂದ ವೇದಿಕೆಯಿಂದ ಸೌಹಾರ್ದ ರಂಜಾನ್ ಆಚರಣೆ
ಹಗರಿಬೊಮ್ಮನಹಳ್ಳಿ 04: ರಂಜಾನ್ ಹಬ್ಬದ ನಿಮಿತ್ತ ಮುಸ್ಲಿಂ ಸಮಾಜದ ಬಾಂಧವರ ಕೂಡ್ಲಗಿ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಅಹಿಂದ ವೇದಿಕೆಯಿಂದ ವಿವಿಧ ಸಮಾಜದ ಮುಖಂಡರು ಶುಭ ಹಾರೈಸಿದರು.
ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಅಹಿಂದ ವೇದಿಕೆಯ ಜಿಲ್ಲಾ ಸಂಚಾಲಕ ಬುಡ್ಡಿ ಬಸವರಾಜ ಮಾತನಾಡಿ ನಾವೆಲ್ಲರೂ ಒಂದೇ, ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ, ಸಮಾಜದ ಸಾಮರಸ್ಯವನ್ನು ಹಾಳುಗೆಡುವುದರಲ್ಲಿ ಭಾಗಿಯಾಗಿರುವವರ ವಿರುದ್ಧ ಹೋರಾಟವೇ ಹೊರತು ಯಾವುದೇ ಸಮಾಜ ಅಥವಾ ಪಕ್ಷವಲ್ಲ, ಪ್ರತಿಯೊಂದು ಹಬ್ಬ ಹರಿದಿನಗಳನ್ನು ಸರ್ವರೂ ಶುಭ ಕೋರುವುದರ ಮೂಲಕ ಸಾಮರಸ್ಯದ ಬದುಕು ಕಟ್ಟಿಕೊಳ್ಳಬೇಕಿದೆ ಎಂದು ಕರೆ ನೀಡಿದರು. ಪಟ್ಟಣದಲ್ಲಿರುವ ಎಲ್ಲಾ ಸಮುದಾಯದವರು ಭಾತೃತ್ವ ಭಾವನೆಯೊಂದಿಗೆ ಜೀವನ ಸಾಗಿಸುತ್ತಿದ್ದೇವೆ ವಿಷ ಬೀಜ ಬಿತ್ತಿ ತಮಾಷೆ ನೋಡುತ್ತಿರುವವರ ಬಗ್ಗೆ ಜಾಗರೋಕತೆ ಇಂದ ಇರುವ ಸಮಯ ಇದಾಗಿದೆ, ನಿಮ್ಮೊಂದಿಗೆ ನಾವಿದ್ದೆವೆ ಎಂಬುದನ್ನು ಸಾರುವ ಸಲುವಾಗಿಯೇ ಅಹಿಂದ ವೇದಿಕೆಯ ಸಮಾಜದ ಮುಖಂಡರುಗಳು ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿರುವುದು ಎಂದರು.
ಶಾಸಕರಿಂದ ಶುಭಾಷಯ : ಈದ್ಗಾ ಮೈದಾನದ ಸಾಮೂಹಿಕ ಪ್ರಾರ್ಥನೆಯಲ್ಲಿ ಎಸ್.ಭೀಮಾನಾಯ್ಕ್ ಭಾಗವಹಿಸಿ ಮಾತನಾಡಿ ಪಟ್ಟಣದ ರಾಮನಗರದ ಮಸೀದಿ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ, ಮುಂದಿನ ದಿನಗಳಲ್ಲಿ ಜಿಲ್ಲಾ ಖನಿಜ ನಿಧಿಯಿಂದ ಈದ್ಗಾ ಮೈದಾನಕ್ಕೆ ಗೋಡೆ ನಿರ್ಮಾಣ ಮಾಡಿಸಿ ಅದಕ್ಕೆ ಕಬ್ಬಿಣದ ರಾಡ್ಗಳನ್ನು ಹಾಕಿಸಲಾಗುವುದು ಎಂದು ಭರವಸೆ ನೀಡಿದರು.ಸಮುದಾಯದ ಕಾರ್ಯಗಳಿರಲಿ ಕೈ ಜೋಡಿಸುವ ಭರವಸೆ ನೀಡಿದರು.
ಶಾಂತಿ ಸಂಕೇತವಾದ ಪಾರಿವಾಳಗಳನ್ನು ಅಹಿಂದ ವೇದಿಕೆ ವತಿಯಿಂದ ಶಾಸಕ ಎಸ್.ಭೀಮಾನಾಯ್ಕ್ ಹಾಗೂ ಕುರುಬ ಸಮಾಜದ ಮುಖಂಡ ಮುಟಗನ ಹಳ್ಳಿ ಕೊಟ್ರೇಶ್ ಹಾರಿಸಿದರು. ನಂದೀಪುರದ ಮಹೇಶ್ವರ ಸ್ವಾಮಿಗಳು, ರಾಜ್ಯ ರೈತ ಸಂಘದ ಜೆ.ಎಂ.ವೀರಸಂಗಯ್ಯ ಮಾತನಾಡಿದರು.ಮುಸ್ಲಿಂ ಸಮುದಾಯದಿಂದ ಶುಭ ಕೋರಿದ ಗಣ್ಯರಿಗೆ ಸನ್ಮಾನ ಮಾಡಲಾಯಿತು.
ಈ ಸಂಧರ್ಭದಲ್ಲಿ ಹಾಲಶಂಕರ ಮಠದ ಹಾಲ ಸ್ವಾಮಿಗಳು, ಅಕ್ಕಿ ತೋಟೇಶ್, ಸಿಐಟಿಯು ಜಗನ್ನಾಥ್, ಆರ್.ಎಸ್..ಬಸವರಾಜ,ರೈತ ಸಂಘದ ಸಿದ್ದನಗೌಡ, ಪುರಸಭೆ ಸದಸ್ಯ ಮರಿರಾಮಪ್ಪ, ಗಣೇಶ್ ಲಮಾಣಿ, ಹತ್ತಿ ಅಡಿವೆಪ್ಪ, ವೀರಯ್ಯ ಸೇರಿದಂತೆ ಪಟ್ಟಣದ ವಿವಿಧ ಸಮುದಾಯದ ಮುಖಂಡರು, ಮುಸ್ಲಿಂ ಸಮಾಜದ ಬಾಂಧವರು ಇದ್ದರು.