18ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ
ಬಳ್ಳಾರಿ 26: ನಗರದ ಮ್ಯಾಕ್ಸ್ ಕಾಂಪ್ಲೆಕ್ಸ್ ಹತ್ತಿರದಲ್ಲಿ ಶ್ರೀ ಶಿರಡಿ ಸಾಯಿ ಸತ್ಸಂಗ ಚಾರಿಟೇಬಲ್ ಟ್ರಸ್ಟ್, ಆರ್.ಎಸ್.ಬಿ ಟ್ರಸ್ಟ್ ಹಾಗೂ ರಾಜೀವ್ ಗಾಂಧಿ ಮೇಮೊರಬಲ್ ಟ್ರಸ್ಟ್ ವತಿಯಿಂದ 25ರಂದು ಶುಕ್ರವಾರ 18ವರ್ಷದ ಮೇಲ್ಪಟ್ಟವರಿಗೆ ವಾಕ್ಸಿನ್ ಡ್ರೈವ್ ಹಮ್ಮಿಕೊಳ್ಳಲಾಗಿತ್ತು. ಶಿರಡಿ ಸಾಯಿ ಬಾಬ ಸಾಯಿ ಸತ್ಸಂಗ ಸೇವಾ ಟ್ರಸ್ಟ್ ಅಧ್ಯಕ್ಷರಾದ ಗೋಪಾಲ ಕೃಷ್ಣ ಅವರು ಮಾತನಾಡಿ ಶಿರಡಿ ಸಾಯಿ ಬಾಬ ಸತ್ಸಂಗ, ಆರ್ .ಎಸ್.ಬಿ.ಟ್ರಸ್ಟ್ ,ರಾಜೀವ್ ಗಾಂಧೀ ಮೇಮೂರೇಬಲ್ ಟ್ರಸ್ಟ್, ಈ ಮೂರು ಟ್ರಸ್ಟಗಳ ನೇತೃತ್ವದಲ್ಲಿ ವಾಕ್ಸಿನ್ ಡ್ರೈವ್ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರ ಪ್ರತಿಕ್ರಿಯೇ ಕೂಡ ಉತ್ತಮವಾಗಿದೆ. 300ಕ್ಕೂ ಹೆಚ್ಚಿನ ಜನರು ಈಗಾಗಲೇ ನೋಂದಣಿ ಮಾಡಿಕೊಂಡಿದ್ದರು. 500ಜನರಿಗೆ ಲಸಿಕೆ ಹಾಕಿಸುವ ಗುರಿ ಹೊಂದಿದ್ದೇವೆ. ಜನರಿಗೆ ಮಾಸ್ಕ್ ಉಚಿತವಾಗಿ ನೀಡುತ್ತಿದ್ದೇವೆ ಹಾಗೂ ಸಾಮಾಜಿಕ ಅಂತರ ಕಾಪಡುವಂತೆ ಸಲಹೆ ನೀಡುತ್ತಿದ್ದೇವೆ ಎಂದರು.ರಾಜೀವ್ ಗಾಂಧಿ ಟ್ರಸ್ಟ ಅಧ್ಯಕ್ಷ ಕೆ.ಸಿ ಕೊಂಡಯ್ಯ, ಆರ್.ಎಸ್.ಬಿ ಟ್ರಸ್ಟ್ ಅಧ್ಯಕ್ಷರಾದ ಪೋಲಾ ರಾಧಾಕೃಷ್ಣ,ಪುತ್ತೂರು ವಿಜಯ್ ಕುಮಾರ್, ಅಶ್ವಥ್ ನಾರಾಯಣ,ಗೋವಿಂದಪ್ಪ,ಈರಣ್ಣ, ನೇತೃತ್ವದಲ್ಲಿ ನಡೆಯುತ್ತಿರು ಕಾರ್ಯಕ್ರಮಕ್ಕೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಹಾಗೂ ಜಿಲ್ಲಾಸ್ಪತ್ರೆಯ ಹಾಗೂ ಗಾಂಧಿನಗರ ಪ್ರಥಾಮಿಕ ಆರೋಗ್ಯ ಕೇಂದ್ರದ ವೈದ್ಯರು , ನರ್ಸ್ , ಆಶಾ ಕಾರ್ಯಕರ್ತೆಯರ ಸಹಕಾರ ವಿದೆ ಎಂದರು.
ಸಾರ್ವಜನಿಕರ ಪ್ರತಿಕ್ರಿಯೇ ಕೂಡ ಉತ್ತಮವಾಗಿದೆ. 300ಕ್ಕೂ ಹೆಚ್ಚಿನ ಜನರು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ ಇಂದು 500ಜನರಿಗೆ ಲಸಿಕೆ ಹಾಕಿಸುವ ಗುರಿ ಹೊಂದಿದ್ದೇವೆ. ಜನರಿಗೆ ಮಾಸ್ಕ್ ಉಚಿತವಾಗಿ ನೀಡುತ್ತಿದ್ದೇವೆ ಹಾಗೂ ಸಾಮಾಜಿಕ ಅಂತರ ಕಾಪಡುವಂತೆ ಸಲಹೆ ನೀಡುತ್ತಿದ್ದೇವೆ ಎಂದರು.ಈ ಸಂದರ್ಭದಲ್ಲಿ ಕೆ.ಸಿ ಕೊಂಡಯ್ಯ, ಆರ್.ಎಸ್.ಬಿ ಟ್ರಸ್ಟ್ ಅಧ್ಯಕ್ಷರಾದ ಪೋಲಾ ರಾಧಾಕೃಷ್ಣ,ಪುತ್ತೂರು ವಿಜಯ್ ಕುಮಾರ್, ಅಶ್ವಥ್ ನಾರಾಯಣ,ಗೋವಿಂದಪ್ಪ,ಈರಣ್ಣ, ಉಪಸ್ಥಿತರಿದ್ದರು.