ಮಕ್ಕಳಿಗೆ ಉಚಿತ ಲಸಿಕಾ ಅಭಿಯಾನ
ಶಿಗ್ಗಾವಿ 06: ಮೆದುಳು ಜ್ವರ ಕ್ಯುಲೆಕ್ಸ್ ಎಂಬ ಸೊಳ್ಳೆಗಳ ಮೂಲಕ ಹರಡುತ್ತಲಿದ್ದು, ಇದು ಮಕ್ಕಳಲ್ಲಿ ಮೆದುಳು ಜ್ವರದ ಮೂಲಕ ಶಾಸ್ವತ ಅಂಗವೈಕಲ್ಯ, ನರ ದೌರ್ಬಲ್ಯ, ಬುದ್ಧಿಮಾಂದ್ಯತೆ ಉಂಟಾಗುವ ಸಾಧ್ಯತೆಯಿದ್ದು, ಇದನ್ನು ತಡೆಯಲು ಸರ್ಕಾರ ಡಿ.5 ರಿಂದ ಮಕ್ಕಳಿಗೆ ಉಚಿತ ಲಸಿಕಾ ಅಭಿಯಾನವನ್ನು ಪ್ರಾರಂಭಿಸಿದೆ ಎಂದು ಪಿಎಚ್ಸಿಒ ಎಸ್.ಜಿ.ಸಿದ್ದಾಪುರ ಹೇಳಿದರು.
ಬಂಕಾಪೂರ ಪಟ್ಟಣದ ಖನೋಜಗಲ್ಲಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ, ವಿದ್ಯಾರ್ಥಿಗಳಿಗೆ ಮೆದಳು ಜ್ವರ ತಡೆಯಲು ಉಚಿತ ಲಸಿಕಾ ಕಾರ್ಯಕ್ರಮವನ್ನುದ್ದೇಸಿಸಿ ಮಾತನಾಡಿದರು.
ಮಕ್ಕಳಿಗೆ ಮೆದಳು ಜ್ವರ ಪ್ಲೇವಿ ವೈರಸ್ ವೈರಾಣುವಿನಿಂದ ಹರಡುತ್ತಲಿದ್ದು, ಇದು 1 ರಿಂದ 15 ವರ್ಷದೋಳಗಿನ ಮಕ್ಕಳಲ್ಲಿ ಕಂಡು ಬರುತ್ತಿದ್ದು, ಮುಂಜಾಗೃತೆಯಾಗಿ ಸರಕಾರ ಉಚಿತ ಲಸಿಕಾ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಇದರ ಸದುಪಯೋಗವನ್ನು ಮಕ್ಕಳು ಪಡೆದುಕೋಂಡು ಆರೋಗ್ಯಯುತ ಜೀವನ ನಡೆಸುವಂತೆ ಮಕ್ಕಳಿಗೆ ಕರೆ ನೀಡಿದರು.
ಕೆಲವು ಪಾಲಕರು ಮಕ್ಕಳಿಗೆ ಲಸಿಕೆ ಹಾಕಿಸಲು ಹಿಂದೇಟು ಹಾಕುತ್ತಿದ್ದು, ಲಸಿಕೆ ಪಡೆಯುವುದರಿಂದ ಮಕ್ಕಳಲ್ಲಿ ಯಾವುದೇ ದುಷ್ಫರಿಣಾಮ ಬೀರದು. ನಿಮ್ಮ ಹದಿನೈದು ವರ್ಷದೊಳಗಿನ ಮಕ್ಕಳನ್ನು ಕರೆತಂದು ಸ್ವಯಂ ಪ್ರೇರಣೆಯಿಂದ ಲಸಿಕೆ ಹಾಕಿಸುವಮೂಲಕ ನಿಮ್ಮ ಮಕ್ಕಳಿಗೆ ಮುಂದೆ ಬರಬಹುದಾದ ಖಾಯಿಲೆಯನ್ನು ತಡೆಯುವಂತೆ ಪಾಲಕರಿಗೆ ಕರೆ ನೀಡಿದರು.
ಪುರಸಭೆ ಸದಸ್ಯರಾದ ರಾಜೇಂದ್ರ ಟೊಪಣ್ಣವರ, ಶೋಭಾ ಹಳವಳ್ಳಿ, ಶಿಕ್ಷಕಿಯರಾದ ಎಸ್.ಬಿ.ಬೆಟಗೇರಿ, ಎಸ್.ಎನ್.ರಜಪೂತ, ಎಸ್.ಡಿ.ಎಂ.ಸಿ.ಅಧ್ಯಕ್ಷ ರಮೇಶ ಚವ್ಹಿ, ಸದಸ್ಯರಾದ ಸುಜಾತಾ ಭವಾನಿ, ರೇಷ್ಮಾ ಮನ್ನಂಗಿ, ಲಕ್ಷ್ಮೀ ಕಲ್ಲವಡ್ಡರ, ಸಿ.ಎಚ್.ಒ. ಸುವರ್ಣಾ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು, ಪಾಲಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.