ಮಹಲಿಂಗಪುರ

ಡಿ.6ರಿಂದ ಮಾನವ ಅಂಗಾಂಗಗಳ ವೈಫಲ್ಯಗಳಿಗೆ ಉಚಿತ ಚಿಕಿತ್ಸೆ

ಡಿ.6ರಿಂದ ಮಾನವ ಅಂಗಾಂಗಗಳ ವೈಫಲ್ಯಗಳಿಗೆ ಉಚಿತ ಚಿಕಿತ್ಸೆ

ಮಹಾಲಿಂಗಪುರ : ಪಟ್ಟಣದ ಸಿ ಎಂ. ಹುರಕಡ್ಲಿ ಪೌಂಡೇಶನ್ ವತಿಯಿಂದ ಲಿಂ ಮಹಾದೇವಪ್ಪ ಹುರಕಡ್ಲಿ, ಲಿಂ ಶಾಂತವ್ವ ಮ.ಹುರಕಡ್ಲಿ ಸ್ಮರಣೆಯಲ್ಲಿ ಹಾನಗಲ್ ಕುಮಾರೇಶ್ವರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಬಾಗಲಕೋಟ ಇವರ ಸಹಯೋಗದಲ್ಲಿ ಸ್ಥಳೀಯ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಡಿ. 6,7ರಂದು ಮುಂ 9ಗಂಟೆಯಿಂದ ಮಾನವ ಅಂಗಾಂಗಗಳ ವೈಫಲ್ಯಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ಪೌಂಡೇಶನ್ ಅಧ್ಯಕ್ಷ ಚನಬಸು ಹುರಕಡ್ಲಿ ತಿಳಿಸಿದ್ದಾರೆ.

ಡಿಶೆಂಬರ್ 6ರಂದು ಬುಧವಾರ ಮುಂಜಾನೆ 9ಗಂಟೆಗೆ ರಕ್ತದಾನ ಶಿಬಿರ ಮತ್ತು ಅಂಗವಿಕಲರಿಗೆ ಕೃತಕ ಕೈ ಕಾಲು ಜೋಡಣೆ, ನೇತ್ರ ತಪಾಸಣೆ (ಮಸೂರ ಅಳವಡಿಕೆ),ಕಿವಿ, ಮೂಗು, ಗಂಟಲು ಇವುಗಳಿಗೆ ಮತ್ತು ಹೊನ್ನಾವರ ವೈದ್ಯ ಪ್ರಕಾಶ್ ರಾಯಸ್ ಇವರು ಕ್ಯಾನ್ಸರ್, ಬಿಪಿ, ಶುಗರ್, ಗಂಟಲು ಬಾವು, ದೇಹದ ಗಂಟು ಇವುಗಳಿಗೆ ಗಿಡ ಮೂಲಿಕೆಗಳಿಂದ ಚಿಕಿತ್ಸೆ ನೀಡಲಿದ್ದಾರೆ.

 ನವಂಬರ 22ರಂದು ಅಳತೆ ನೀಡಿದ ಫಲಾನುಭವಿಗಳಿಗೂ ಇದೆ ಸಮಯದಲ್ಲಿ ಹಲ್ಲಿನ ಸೆಟ್ ಗಳನ್ನು ಅಳವಡಿಕೆ ಮಾಡಲಾಗುತ್ತದೆ. ದಿ.7ರಂದು ಮುಂಜಾನೆ 9ಗಂಟೆಗೆ ಬಿವಿವಿ ಸಂಘದ ಪಿ ಎಂ ಎನ್ ಎಂ ದಂತ ವೈದ್ಯಕೀಯ ಮಹಾವಿದ್ಯಾಲಯ ಬಾಗಲಕೋಟ ಇವರಿಂದ ದಂತ ಚಿಕಿತ್ಸಾ ಶಿಬಿರದಲ್ಲಿ ಹಲ್ಲು ಸ್ವಚ್ಛಗೊಳಿಸುವುದು, ಕೆಟ್ಟ ಹಲ್ಲು ಕೀಳುವುದು, ಸಿಮೆಂಟ್ ತುಂಬುವುದು ಹಾಗೂ ಸಂದಿ, ವಾತ, ತಲೆ, ಸೊಂಟ್, ಬೆನ್ನು, ಕೈ ಕಾಲು ನೋವುಗಳಿಗೆ ಮಸಾಜ ಕಾರ್ಯ ನಡೆಯಲಿದೆ.

ಈ ಸ್ಮರಣಾರ್ಥ ಕಾರ್ಯಕ್ರಮಕ್ಕೆ ಶುಭಾಶಿರ್ವಾದ ನೀಡಲು ಮನಿಪ್ರ ಜಗದ್ಗುರು ಶ್ರೀ ಗುರು ಮಹಾಲಿಂಗೇಶ್ವರ ದೇವಸ್ಥಾನದ ರಾಜೇಂದ್ರ ಶ್ರೀಗಳು ಆಗಮಿಸಲಿದ್ದಾರೆ.ಉದ್ಘಾಟಕರಾಗಿ ಬಬಲಾದಿಯ ಸಿದ್ಧರಾಮಯ್ಯ ಶ್ರೀಗಳು, ಸಮ್ಮುಖ ಧಾರವಾಡದ (ಮನಗುಂಡಿ) ಬಸವಾನಂದ ಶ್ರೀಗಳು, ಸ್ಥಳೀಯ ಸಿದ್ಧಾರೂಢ ಮಠದ ಸಹಜಾನಂದ ಶ್ರೀಗಳು, ಹಳೆ ಹುಬ್ಬಳ್ಳಿಯ ಶಿವಶಂಕರ ಶ್ರೀಗಳು ಮತ್ತು ಪ್ರಕಾಶ್ ರಾಯಸ್ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಉನ್ನತ ಶಿಕ್ಷಕಿ ಪ್ರಶಸ್ತಿ ವಿಜೇತ ಶಿಕ್ಷಕಿ ವಿಶೇಷ ಸನ್ಮಾನ ಅತಿಥಿಗಳಾಗಿ ಸಾಹಿತಿ ಅಶೋಕ ಹಂಚಲಿ, ಉಪನ್ಯಾಸಕ ಗಂಗಾಧರ ಅಂಗಡಿ, ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಠಾಣಾಧಿಕಾರಿ ಪ್ರವೀಣ ಬಿಳಿಗಿ, ಸೀನಿಯರ್. ಟೆ ಎಂ ಎಚ್ ನಾಯ್ಕರ, ನೇತ್ರಾಧಿಕಾರಿ ವಿಜಯ ಡೋಮನಾಳ ಇನ್ನೂ ಮುಂತಾದವರು ಉಪಸ್ಥಿತರಿರುವರು. 

ನವೆಂಬರ್ 7ರಂದು ಮಧ್ಯಾಹ್ನ 3.30ಕ್ಕೆ ಎರಡು ದಿನಗಳ ಕಾರ್ಯಕ್ರಮಕ್ಕೆ ತೆರೆ ಬೀಳಲಿದ್ದು ಸಾರ್ವಜನಿಕರು ಕಾರ್ಯಕ್ರಮಕ್ಕೆ ಸಹಕರಿಸಿ ಸದುಪಯೋಗ ಪಡೆದುಕೊಳ್ಳಬೇಕೆಂದು ಮತ್ತೊಮ್ಮೆ ರೂವಾರಿ ಚನಬಸು ಹುರಕಡ್ಲಿ ಪುನರುಚ್ಚರಿಸಿ ಫಲಾನುಭವಿಗಳು ಶಿಬಿರಕ್ಕೆ ಆಗಮಿಸುವಾಗ ಸಹಾಯಕರೊಬ್ಬರು ಆಧಾರ್, ರೇಷನ್ ಕಾರ್ಡ್  ಹೊಂದಿರಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ 9986239549 ಈ ಮೋ ಸಂಖ್ಯೆಗೆ ಸಂಪರ್ಕಿಸಲು ಕೋರಿದ್ದಾರೆ 

ಸುದ್ದಿ ಓದಿ