ಮಹಲಿಂಗಪುರ

ಮಹಿಳೆಯರಿಗೆ ಉಚಿತ ಪ್ರಯಾಣ: ಬಸ್‌ಗಳೆಲ್ಲ ಹೌಸ್ ಫುಲ್

ಮಹಿಳೆಯರಿಗೆ ಉಚಿತ ಪ್ರಯಾಣ: ಬಸ್‌ಗಳೆಲ್ಲ ಹೌಸ್ ಫುಲ್

ದೇವರಹಿಪ್ಪರಗಿ:ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆಯಡಿ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ದೊರೆತ ಬೆನ್ನಲ್ಲೆ? ರವಿವಾರದಂದು ಅಮಾವಾಸ್ಯೆ ಆದಕಾರಣ ರಾಜ್ಯದ ಪ್ರವಾಸಿ ತಾಣಗಳು ಹಾಗೂ ದೇಗುಲಗಳಿಗೆ ತೆರಳಲು ಪಟ್ಟಣದ ಬಸ್ ನಿಲ್ದಾಣದಲ್ಲಿ ಉಚಿತ ಬಸ್ ಪ್ರಯಾಣಕ್ಕಾಗಿ ಬಸ್‌ಗಳು ಮಹಿಳೆಯರಿಂದಲೇ ತುಂಬಿ ತುಳುಕುತ್ತಿದ್ದು, ಪುರುಷ ಪ್ರಯಾಣಿಕರು ಪ್ರಯಾಣಿಸಲು ಪರದಾಡುವಂತಾಯಿತು. ಬಸ್ ನಿಲ್ದಾಣಗಳಲ್ಲಿಯೇ ಬಸ್‌ಗಳು ಹೌಸ್ ಫುಲ್ ಆಗಿದ್ದರೆ, ಇನ್ನೊಂದೆಡೆ ಬಸ್ಸಿಗಾಗಿ ಬಿಸಿಲಿನಲ್ಲಿ ಕಾಯುವ ಪರಿಸ್ಥಿತಿ ನಿಲ್ದಾಣದಲ್ಲಿ ಕಂಡುಬಂತು.ಕಿಟಕಿ ಬದಿಯ ಸೀಟಿಗಾಗಿ ಮಹಿಳೆಯರ ಮಧ್ಯೆ ಬಸ್ಸಿನಲ್ಲಿ ನೂಕಾಟ-ತಳ್ಳಾಟ ನಡೆದಿದ್ದು,ಪ್ರತಿ 30 ನಿಮಿಷಕ್ಕೊಂದು ಬಸ್ ಇದ್ದರೂ ಭಾರೀ ಜನಜಂಗುಳಿ ಕಂಡು ಬಂತು. ಕಾಲಿಡಲೂ ಜಾಗವಿಲ್ಲದಂತೆ ಬಸ್‌ಗಳು ತುಂಬಿದ್ದವು.ಉಚಿತ ಬಸ್ ಯೋಜನೆ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ನಿಲ್ದಾಣದಲ್ಲಿ ಬಸ್ಸಿಗಾಗಿ ಬರೋಬ್ಬರಿ ನೂರಾರು ಪ್ರಯಾಣಿಕರು ಅದರಲ್ಲಿ ಶೇ.90ರಷ್ಟು ಮಹಿಳೆಯರೇ ತುಂಬಿದ್ದರು. ರಾಜ್ಯದ ಹಲವು ದೇವಸ್ಥಾನಗಳು ಸೇರಿದಂತೆ ವಿಜಯಪುರ ಜಿಲ್ಲೆಯ ಆಲಮಟ್ಟಿ, ವಿಶ್ವವಿಖ್ಯಾತ ಗೋಳಗುಮ್ಮಟ, ಇತಿಹಾಸ ಪ್ರಸಿದ್ಧ ಕೂಡಲಸಂಗಮ ದೇವಸ್ಥಾನ ಸೇರಿದಂತೆ ರಾಜ್ಯದ ಇತರೆಡೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಮಹಿಳಾ ಪ್ರಯಾಣಿಕರ ದಂಡು ಹರಿದು ಬಂತು.ಮಿತಿಮೀರಿದ ಪ್ರಯಾಣಿಕರಿಂದಾಗಿ ಬಸ್ ನಿಲ್ದಾಣದಲ್ಲಿ ಜನ ಜಂಗುಳಿ ಕಂಡು ಬಂದಿರುವುದು ವಿಶೇಷವಾಗಿದೆ. 


ಸುದ್ದಿ ಓದಿ