ದಿ. 14ರಂದು ಉಚಿತ ಅರೋಗ್ಯ ತಪಾಸಣಾ ಶಿಬಿರ
ಮಹಾಲಿಂಗಪುರ 13: ಇಂದಿನ ಆಧುನಿಕ ಯುಗದಲ್ಲಿ ಮನುಷ್ಯ ವೇಗವಾಗಿ ಅಭಿವೃದ್ಧಿ ಹೊಂದುವ ಕಡೆ ಗಮನ ಹರಿಸಿ ತನ್ನ ಆರೋಗ್ಯದ ಕಡೆ ನೀರ್ಲಕ್ಷ್ಯ ತೋರುತ್ತಿದ್ದಾನೆ. ವೇಗವಾಗಿ ಓಡುವ ಮಷಿನಗಳು ಕೂಡಾ ಸುಸ್ತಾಗಿ ನಿಲ್ಲುತ್ತವೆ, ಇನ್ನು ನರ ಮನುಷ್ಯರಾದ ನಾವು ಇಂದಿನ ಓಷಧಯುಕ್ತ ವಿಷ ಆಹಾರ ತಿಂದು ಬದುಕು ಸಾಗಿಸುವುದು ಕಷ್ಟವಾಗಿದೆ. ಆಯುಷ್ಯ ಕಡಿಮೆಯಾಗಿದೆ ಭಾರತೀಯರ ಸರಾಸರಿ ಆಯುಷ್ಯ ಇಂದು ಕೇವಲ 62 ರಿಂದ 64 ವರ್ಷ ಇದೆ. ಇಷ್ಟರಲ್ಲೇ ಜೀವನ ಸಾಗಿಸಿ ಬದುಕಬೇಕು ಅದಕ್ಕಾಗಿ ವೇಗದ ಜೀವನ ನಡೆಯುತ್ತಿದೆ. ಇದರ ಮಧ್ಯ ಆರೋಗ್ಯದ ಕಡೆ ಹೆಚ್ಚು ಗಮನ ಕೊಡುವುದು ಇಂದಿನ ಅಗತ್ಯವಾಗಿದೆ ಎಂದು ಜಂಗಮಸಮಾಜದ ಅಧ್ಯಕ್ಷ ಗುರುಪಾದಯ್ಯ ಚಟ್ಟಿಮಠ ಹೇಳಿದರು.
ದಿ. 14ರಂದು ನಗರದ ಆಯಿಲ್ ಪ್ಲಾಟಿನಲ್ಲಿರುವ ಪ್ರಗತಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಆರ್ಎನ್ಸಿ ಆಸ್ಪತ್ರೆ ಬಾಗಲಕೋಟ ಹಾಗೂ ಜಂಗಮ ಕ್ಷೇಮಾಭಿವೃದ್ಧಿ ಸಂಘ ಮಹಾಲಿಂಗಪುರ ಇವರ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ಉಚಿತ ಅರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದು, ನರರೋಗ, ಎಲುಬು ಕೀಲು ಮತ್ತು ಕಿಡ್ನಿ ತಜ್ಞ ವೈದ್ಯರಾದ ಡಾ. ಎ ವಿ ರಾಕೇಶ ಡಾ. ಸಚಿನ್ ಕಟ್ಟಿ ಮತ್ತು ಡಾ. ಗಂಗಾಧರ ಚಿರಾಗ ಭಾಗವಹಿಸುವರು. ಸಾರ್ವಜನಿಕರು ಈ ಕೆಳಗಿನ ನಂಬರಗಳಿಗೆ ಫೋನ ಮಾಡಿ ವಿವರ ಪಡೆಯಬೇಕು ಮತ್ತು ಈ ಶಿಬಿರದ ಲಾಭ ಪಡೆದುಕೊಳ್ಳಬೇಕು ಎಂದರು.
ಶಿಬಿರದಲ್ಲಿ ಭಾಗವಹಿಸಲು ಬಯಸುವವರು ಈ ಫೋನ್ ನಂಬರಗಳಿಗೆ ಸಂಪರ್ಕಿಸಲು ಕೋರಲಾಗಿದೆ. ಚನ್ನಯ್ಯ 8618022287 ಮತ್ತು ಸಾಗರ 9845533416
ಸ್ಥಳೀಯ ಅರಸು ಹೋಟೆಲಿನಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಜಂಗಮ ಸಮಾಜದ ಬಸವರಾಜ ಹಿಟ್ಟಿನಮಠ, ಮಹಾಲಿಂಗಯ್ಯ ಮಠ, ವಿರೂಪಾಕ್ಷಯ್ಯ ಪಂಚಕಟ್ಟಿಮಠ, ಮಹಾಲಿಂಗಯ್ಯ ಮಣ್ಣಯ್ಯನವರ, ಬಸವರಾಜ ಅಯ್ಯನಗೌಡರ, ಗುರುಲಿಂಗಯ್ಯ ಮಠಪತಿ, ಸಿದ್ದಯ್ಯ ಮಠಪತಿ, ಡಾ. ವಿ ಎಸ್ ಮಾಮಾದಾಪುರಮಠ, ಬಸಯ್ಯಾ ಚಟ್ಟಿಮಠ, ಮೃತ್ಯುಂಜಯ ಹಿರೇಮಠ, ಸಾಗರದ ಮಠದ, ಚನ್ನಯ್ಯ ಮಸಗುಪ್ಪಿಮಠ, ಮಹಾಂತೇಶ ಮಣ್ಣಯ್ಯನವರಮಠ ಸೇರಿ ಹಲವರು ಇದ್ದರು.
ನಗರದ ಸುತಮುತ್ತಲಿನ ಹಳ್ಳಿಗಳ ಜನರು ಮತ್ತು ನಗರದ ಜನತೆ ಇದರ ಸದುಪಯೋಗ ಮಾಡಿಕೊಳ್ಳಲು ಕೋರಲಾಗಿದೆ.