ಡಾ ಕನಕರಡ್ಡಿ ಇಡೀ ಕುಟುಂಬವೆ ವೈದಕಿಯ ಕ್ಷೇತ್ರದ ಕಣ್ಣು : ಹೊಸೂರ
ನಂದಗಾಂವ ಗ್ರಾಮದಲ್ಲಿ ಉಚಿತ ಕಣ್ಣು ತಪಾಸಣೆ ಮತ್ತು ಶಸ್ತ್ರಿ ಚಿಕಿತ್ಸೆ ಶಿಬಿರ
ಮಹಾಲಿಂಗಪುರ 09: ಮನುಷ್ಯನ ಅತೀ ಮುಖ್ಯ ಅಂಗಗಳಲ್ಲಿ ಕಣ್ಣು ಕೂಡಾ ಒಂದು ಮನುಷ್ಯನಿಗೆ ಕಣ್ಣು ಇಲ್ಲಾ ಅಂದರೆ ಏನು ಇಲ್ಲಾ ಕಣ್ಣು ಅತ್ಯಂತ ಸೂಕ್ಷ್ಮ ಅಂಗ ಅದರ ರಕ್ಷಣೆ ಮಾಡಿಕೊಳ್ಳುವುದು ಬಹಳ ಮುಖ್ಯ,ಅದ್ದರಿಂದಲೇ ಡಾ. ಸಂದೀಪ ಕನಕರಡ್ಡಿ ಮತ್ತು ಡಾ.ಸೌಮ್ಯ ಕನಕರಡಡಿಯವರು ಇಂಥ ಉಚಿತ ಶಿಬಿರಗಳ ಮೂಲಕ ಗ್ರಾಮೀಣ ಜನರ ಕಣ್ಣು ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಅಂದರ ಬಾಳಿನ ಬೆಳಕಾಗಿ ಪರಿಣಮಿಸುತ್ತಿದ್ದಾರೆ ಎಂದು ನಂದಗಾಂವ ಗ್ರಾಮ ಪಂಚಾಯತ್ ಅಧ್ಯಕ್ಷ ರಂಗಪ್ಪ ಹೊಸೂರ ಹೇಳಿದರು.
ನಂದಗಾಂವ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ವಿಶ್ವ ಕಣ್ಣಿನ ದಿನಾಚರಣೆ ಹಾಗೂ ದಿ ತಂದೆ ಡಾ ವೆಂಕಪ್ಪ ಕನಕರಡ್ಡಿ ಮತ್ತು ದಿ ತಾಯಿ ರಾಜೇಶ್ವರಿ ಇವರ ಸ್ಮರಣಾರ್ಥ ಕನಕರಡ್ಡಿ ಪರಿವಾರದ ವಿರಿಂಚಿ ಆಸ್ಪತ್ರೆ ವತಿಯಿಂದ ಆಯೋಜಿಸಿದ ಉಚಿತ ನೇತ್ರ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ದೀಪ ಬೆಳಗುವ ಮೂಲಕ ಉದ್ಘಾಟಸಿ ಮಾತನಾಡಿದ ಅವರು ಡಾ. ಸಂದೀಪ ಕನಕರಡ್ಡಿ ಮತ್ತು ಶ್ರೀನಿವಾಸ ಕನಕರಡ್ಡಿಯವರು ತಮ್ಮ ತಂದೆಯ ಕನಸ್ಸನ್ನು ನನಸು ಮಾಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಅವರ ತಂದೆ-ತಾಯಿ ಸವಿನೆನಪಿಗಾಗಿ ಗ್ರಾಮೀಣ ಭಾಗದ ಜನರ ಸೇವೆ ಮಾಡುತ್ತಾ ಬಂದಿದ್ದು ಮತ್ತು ಪ್ರತಿ ವರ್ಷ್ ಈ ಭಾಗದ ಜನರಿಗೆ ಅನುಕೂಲವಾಗುವಂತೆ ಉಚಿತ ನೇತ್ರ ಚಿಕಿತ್ಸೆ ಶಿಬಿರ ಏರಿ್ಡಸಿ ಜನರಿಗೆ ನೇರವಾಗುವುದು ಅವರ ಮುಖ್ಯ್ ಉದ್ದೇಶವಾಗಿತ್ತು ಎಂದರು.
ನಂತರ ಮಾತನಾಡಿದ ಶ್ರೀನಿವಾಸ ಕನಕರಡ್ಡಿ ನಮ್ಮ ಮಾತೃ ಭೂಮಿ ನಂದಗಾಂವ ಗ್ರಾಮದ ಋಣ ತೀರಿಸುವ ಸಣ್ಣ ಪ್ರಯತ್ನವಾಗಿ ಸಾಗಿದ್ದೇವೆ ಅದಕ್ಕೆ ನಮ್ಮ ಜನರ ಪ್ರೀತಿ ವಿಶ್ವಾಸ ನಮ್ಮ ಮೇಲಿದೆ. ಇಂದು ವಿಶ್ವದಲ್ಲಿ ಸುಮಾರು 2.2 ಶತಕೋಟಿ ಕೋಟಿ ಜನ ಹಲವು ರೀತಿಯ ದೃಷ್ಟಿ ದೌರ್ಬಲ್ಯದಿಂದ ಬಳಲುತ್ತಿದ್ದಾರೆ.ದೃಷ್ಟಿ ದೌರ್ಬಲ್ಯವು ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬಿರುತ್ತದೆ. ಆದರೆ ಕಣ್ಣಿನ ಪೊರೆಗಳು ಮತ್ತು ವಯಸ್ಸಿಗೆ ಸಂಭಂದಿಸಿದ ಮ್ಯಾಕ್ಯುಲರ್ ಡಿಜೆನರೇಶನ ನಂತಹ ಪರಿಸ್ಥಿತಿಗಳಿಂದ ವಯಸ್ಸಾದವರು ಮತ್ತು ಮಕ್ಕಳು ಬಳಲುತ್ತಿದ್ದಾರೆ. ವಕ್ರಿಕಾರಕ ದೋಷಗಳು ಮತ್ತು ಜನ್ಮಜಾತ (ಅನುವಂಷಿಯ ) ಕಣ್ಣಿನ ಅಶ್ವಸ್ತತೆಗಳಂತಹ ಪರಿಸ್ಥಿತಿಗಳು ಅವರ ಬೆಳವಣಿಗೆ ಮತ್ತು ಶಿಕ್ಷಣದ ಮೇಲೆ ಪರಿಣಾಮ ಬಿರುತ್ತವೆ.ಇಂಥ ತೋಂದರೆಗಳನ್ನು ಮನಗಂಡ ನಮ್ಮ ಕುಟುಂಬ ಬಡಜನರ ಒಳಿತಿಗಾಗಿ ಈ ಉಚಿತ ಶಿಬಿರ ಹಮ್ಮಿಕೊಳ್ಳುವ ಮೂಲಕ ನಮ್ಮ ಭಾಗದ ಜನರು ಕಣ್ಣಿನ ದೋಷದಿಂದ ಬಳಲಬಾರದು ಎಂಬುದು ನಮ್ಮ ಈ ಶಿಬಿರದ ಉದ್ದೇಶವಾಗಿದೆ ಎಂದರು.
ನಂತರ ಮಾತನಾಡಿದ ಖ್ಯಾತ ಮಕ್ಕಳ ತಜ್ಞ ಡಾ. ಆನಂದ ಕನಕರಡ್ಡಿ ಈ ಉಚಿತ ನೇತ್ರ ಚಿಕ್ಸಿತಾ ಶಿಬಿರ ಅವರ ತಂದೆ ಹುಟ್ಟುರಿನ ಮೇಲಿನ ಪ್ರೀತಿಯನ್ನು ಎತ್ತಿ ತೋರಿಸುತ್ತದೆ. ಈ ದಿನಮಾನಗಳಲ್ಲಿ ಇಂತಹ ನೇತ್ರ ಚಿಕಿತ್ಸಾ ಶಿಬಿರಗಳ ಅವಶ್ಯಕತೆ ಇದ್ದು ಇದನ್ನು ಆಯೋಜಿಸಿದ ಕನಕರಡ್ಡಿ ಬಂದುಗಳ ಕಾರ್ಯಕ್ರಮ ದೇವರ ಪ್ರೀತಿಗೂ ಪಾತ್ರವಾಗುವಂತಹದ್ದು. ಅತಿಯಾದ ಜನಸಂಖ್ಯೆ ದೇಶದ ಅರೋಗ್ಯವನ್ನು ಕೆಡಿಸುತ್ತಿದ್ದೂ ಅದಕ್ಕಾಗಿ ಜನಸಂಖ್ಯೆ ನಿಯಂತ್ರಣ ಮಾಡುವುದು ಇಂದಿನ ಸರ್ಕಾರಗಳಿಗೆ ಬಹು ದೊಡ್ಡ ತಲೆ ನೋವಾಗಿದೆ. ಬೆಳದ ಜನಸಂಖ್ಯೆಗೆ ಆಹಾರ ಅರೋಗ್ಯ ಒದಗಿಸುವದು ಸರ್ಕಾರಗಳ ಬಹು ದೊಡ್ಡ ಜವಾಬ್ದಾರಿಯಾಗಿದೆ.ಪ್ರತಿ ವರ್ಷ ನಂದಗಾಂವ ಗ್ರಾಮದ 5 ಜನರಿಗೆ ಮತ್ತು ಮಹಾಲಿಂಗಪುರ ಸುತ್ತಮುತ್ತ ಗ್ರಾಮಗಳ 5 ಜನರಿಗೆ ಪ್ರತಿವರ್ಷ ಉಚಿತ ನೇತ್ರ ಶಸ್ತ್ರ ಚಿಕಿತ್ಸೆ ಮಾಡುವ ಗುರಿ ಹೊಂದಿದ್ದು ಶ್ಲಾಘನೀಯ ಕಾರ್ಯ ಎಂದರು.
ಈ ಸಂಧರ್ಭದಲ್ಲಿ ಪಿ ಕೆ ಪಿ ಎಸ್ ಸಂಘದ ಮಾಜಿ ಅಧ್ಯಕ್ಷರಾದ ಸಂಜು ಬಾರಕೋಲ, ಭೀಮಶಿ ಹೊಸೂರು, ವೆಂಕಣ್ಣ ಗೊಬ್ಬರದ,ಯಲ್ಲಪ್ಪ ಉಪ್ಪಾರ, ಡಾ. ಸಂದೀಪ ಕನಕರಡ್ಡಿ,ಡಾ.ನೇತ್ರತಜ್ಞೆ ಡಾ ಸೌಮ್ಯಾ ಕನಕರಡ್ಡಿ, ಮಲ್ಲಪ್ಪ ಗುರವ, ಬಸವರಾಜ ಹ್ಯಾಗಾಡಿ, ಯಲ್ಲಪ್ಪ ಉಪ್ಪಾರ, ಮಹೇಶ ಮಣ್ಣಯ್ಯನವರಮಠ, ಮಹೇಶ ಆರಿ, ಮಹಾದೇವ ಮಣ್ಣನ್ನನವರ, ಪುಟ್ಟಪ್ಪ ಪೂಜೇರಿ, ಮಹದೇವ ನಂದಿಗೋಣಿ, ಮಹಾಂತೇಶ ಬುರುಡ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಇಂದಿನ ಕಾರ್ಯಕ್ರಮದಲ್ಲಿ ಸುಮಾರು 79 ಕ್ಕೂ ಅಧಿಕ ಜನ ತಪಾಸಣೆಗೆ ಒಳಗಾಗಿ 19 ಜನರಗಿಗೆ ಶಸ್ತ್ರ ಚಿಕಿತ್ಸೆ ಮಾಡಲು ತಿಳಿಸಲಾಗಿದೆ. ಕಾರ್ಯಕ್ರಮವನ್ನು ಶಿಕ್ಷಕರಾದ ನರನಗೌಡ ಉತ್ತಂಗಿ ನಿರೂಪಿಸಿ ವಂದಿಸಿದರು.