ಮುದ್ದೆಬಿಹಾಲ್

ಬಡಮಕ್ಕಳಿಗೆ ಉಚಿತ ಶಿಕ್ಷಣ ಇದೊಂದು ಸಾಮಾಜಿಕ ಸೇವೆಯಷ್ಟೇ :ಮಲ್ಲಿಕಾರ್ಜುನ ಮದರಿ

ಬಡಮಕ್ಕಳಿಗೆ ಉಚಿತ ಶಿಕ್ಷಣ ಇದೊಂದು ಸಾಮಾಜಿಕ ಸೇವೆಯಷ್ಟೇ :ಮಲ್ಲಿಕಾರ್ಜುನ ಮದರಿ

ಮುದ್ದೇಬಿಹಾಳ: ಮಧ್ಯಮ ಹಾಗೂ ಬಡಮಕ್ಕಳ ಪ್ರತಿಭೆಯನ್ನು ಗುರ್ತಿಸುವ ಉದ್ದೇಶದಿಂದ ಪ್ರಥಮ ಪಿಯುಸಿ ಪಾದಾರೆ​‍್ಣ ಮಾಡುವ ವಿದ್ಯಾರ್ಥಿಗಳಿಗೆ ಟ್ಯಾಲೇಂಟ್ ಅವಾರ್ಡ ಅರ್ಹತಾ ಪರೀಕ್ಷೆ ನಡೆಸುವ ಮೂಲಕ ಪ್ರವೇಶಾತಿ ಪಡೆಯಲಾಗುತ್ತಿದ್ದು ಈ ವೇಳೆ ಪರೀಕ್ಷೆಯಲ್ಲಿ ಪಾಸಾದ ಅರ್ಹ 10 ಜನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾತಿ ಹಾಗೂ ವಸತಿ, ಶಿಕ್ಷಣ ನೀಡಲಾಗುವುದು ಎಂದು ಅಭ್ಯೂದಯ ಪಿಯು ಸಾಯನ್ಸ್‌ ಕಾಲೇಜಿನ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ ಹೇಳಿದರು. 

ಪಟ್ಟಣದ ಅಹಿಲ್ಯಾದೇವಿ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆಯ ಅಭ್ಯೂದಯ ಪಿಯು ಸಾಯ್ಸ್‌ ಕಾಲೇಜಿನಲ್ಲಿ ಭಾನುವಾರ ನಡೆದ  ಟ್ಯಾಲೇಂಟ್ ಅವಾರ್ಡ ಪಿಯುಸಿ ಪ್ರಥಮ ವರ್ಷದ ಅರ್ಹತಾ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿ ಅವರು ಮಾತನಾಡಿದರು. 

ಕಳೇದ ಕೋರೋನಾ ಸಂದರ್ಭದಲ್ಲಿ ಪಾಲಕರು ತಮ್ಮ ಮಕ್ಕಳನ್ನು ಶಿಕ್ಷಣ ಕೊಡಿಸುವುದೇ ಒಂದು ದೊಡ್ಡ ಸಮಸ್ಯೆಯಾಗಿತ್ತು ಆ ವೇಳೆ ಸುಮಾರು ಎರಡು ಸಾವಿರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿದ ಹೆಮ್ಮೆ ನಮ್ಮ ಅಹಿಲ್ಯಾದೇವಿ ಶಿಕ್ಷಣ ಸಂಸ್ಥೆಗಿದೆ ಎಂದರೆ ತಪ್ಪಾಗಲಾರದು. ಸಧ್ಯ ಪ್ರತಿವರ್ಷ ಎಸ್‌ಎಸ್‌ಎಲ್‌ಸಿ ಪಾಸಾದ ವಿದ್ಯಾರ್ಥಿಗಳಿಗೆ ಟ್ಯಾಲೇಂಟ್ ಅವಾರ್ಡ ಅರ್ಹತಾ ಪರೀಕ್ಷೆ ಮೂಲಕ ಪಿಯುಸಿ ಪ್ರಥಮ ವರ್ಷ ಪ್ರವೇಶಾತಿ ಪಡೆದುಕೊಳ್ಳಲಾಗುತ್ತಿದೆ ಈ ವೇಳೆ ಸುಮಾರು 20 ವಿದ್ಯಾರ್ಥಿಗಳಿಗೆ ಉಚಿತ ವಸತಿ ಸಹಿತ ಶಿಕ್ಷಣ ನೀಡುತ್ತಲೇ ಬಂದಿದ್ದೇವೆ. 

ಸಧ್ಯ 2023-24ನೇ ಸಾಲಿನ ಪಿಯುಸಿ ಪ್ರಥಮ ವರ್ಷದ ಪ್ರವೇಶಾತಿಗಾಗಿ ಟ್ಯಾಲೇಂಟ್ ಅವಾರ್ಡ ಅರ್ಹತಾ ಪರೀಕ್ಷೆಯಲ್ಲಿ ಒಟ್ಟು 442 ವಿದ್ಯಾರ್ಥಿಗಳು ಬಾಗವಹಿಸಿದ್ದರು ಇದರಲ್ಲಿ ಅತಿ ಹೆಚ್ಚು ಅಂಕಗಳಿಸಿ ಪ್ರಥಮಸ್ಥಾನ ಪಡೆದ 10 ವಿದ್ಯಾರ್ಥಿಗಳಿಗೆ ಉಚಿತ ವಸತಿ ಸಹಿತ ಶಿಕ್ಷಣ ನೀಡಲಾಗುತ್ತದೆ ಜೊತೆಗೆ  ಎರಡನೆ 18 ವಿದ್ಯಾರ್ಥಿಗಳಿಗೆ ಶೇ. 50 ರಷ್ಟು ಶುಲ್ಕ ಮಾತ್ರ ಭರಿತಕ್ಕದ್ದು. ಇನ್ನುಳಿದ ವಿದ್ಯಾರ್ಥಿಗಳು ಪ್ರವೇಶಾತಿ ಪಡೇದುಕೊಳ್ಳಲು ಇಚ್ಚಿಸಿದರೇ ಪ್ರತಿ ವಿದ್ಯಾರ್ಥಿಗೆ ಶೇ.15 ರಷ್ಟು ಶುಲ್ಕ ಕಡಿತಗೊಳಸಲಾಗುವುದು. 

ಈ ವೇಳೆ ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಆರ್ಥಿಕವಾಗಿ ತೀರಾ ಬಡತನ ರೇಖೆಗಿಂತ ಕಡಿಮೆ ಇದ್ದು ಅಂಗವಿಕಲರಾಗಿದ್ದು ಇನ್ನೇನು ಶಾಲೆಗೆ ಕಲಿಸಲು ಸಾಧ್ಯವಾಗುವುದಿಲ್ಲ ಎನ್ನುವ ಬಡಕುಟುಂಭದ ಮಕ್ಕಳನ್ನು ಯಾವೂದೇ ಒಂದು ನೈಯಾಪೈಸೆ ಶುಲ್ಕ ಪಡೆದುಕೊಳ್ಳದೇ ಅಹಿಲ್ಯಾದೇವಿ ಶಿಕ್ಷಣ ಸಂಸ್ಥೆಯಿಂದ ಉಚಿತ ಶಿಕ್ಷಣ ನೀಡಲಾಗುವುದು ಎಂದರು. 

ಈ ವೇಳೆ ಪ್ರಾಂಶುಪಾಲರು ಬಿ ಜಿ ಬಿರಾದಾರ, ಉಪನ್ಯಾಸಕರಾದ ಶಿವಾನಂದ ಮೇಟಿ, ರವಿ ಜಗಲಿ, ಯಮನಪ್ಪ ಕುರಿ, ಭೀಮಣ್ಣ ಪಣೇದಕಟ್ಟಿ, ಕಿರಣ ಮದರಿ, ಎಚ್ ಎಸ್ ಗೌಡ,ರಮೇಶ ಹರನಾಳ, ಬಸವರಾಜ ಗೂಡಲಮನಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು. 


ಕೋಟ್ 

ಕಳೇದ ನಾನು ಸಾಕಷ್ಟು ಅರ್ಹತಾ ಪರೀಕ್ಷೇಗಳನ್ನು ಎದುರಿಸಿದ್ದೇನೆ ಆದರೆ ಅಭ್ಯೂದಯ ಕಾಲೇಜಿನ ಆಡಳಿತ ಮಂಡಳಿ ಹಾಗೂ ಉಪನ್ಯಾಸಕರ ವೃಂದದವರು ನಡೆಸಿದ ಪರೀಕ್ಷೇ ನನಗೆ ಬಹಳ ಖುಷಿಯನ್ನು ತಂದುಕೊಟ್ಟಿದೆ. ಇಂದು ವ್ಯಾಪಾರಿಕರಣಗೊಳ್ಳುತ್ತಿರುವ ಶಿಕ್ಷಣ ಸಂಸ್ಥೆಗಳ ವ್ಯಾಪಾರಿಕರಣಗೊಳ್ಳುತ್ತಿವೆ ಎನ್ನುವ ಕಾಲಘಟ್ಟದಲ್ಲಿ ಅಹಿಲ್ಯಾದೇವಿ ಶಿಕ್ಷಣ ಸಂಸ್ಥೆಯನಮುಖ್ಯಸ್ಥರಾದ ಮಲ್ಲಿಕಾರ್ಜುನ ಮದರಿಯವರು ಮಕ್ಕಳ ಪ್ರತಿಭೆ ಗುತ್ತಿಸಲು ಟ್ಯಾಲೇಂಟ್ ಅವಾರ್ಡ ಮೂಲಕ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಕಾರ್ಯ ನೀಜಕ್ಕೂ ಶ್ಲಾಘನಿಯ, 

-ವಾಣಿಶ್ರೀ ಬಸವರಾಜ ಹಳ್ಳದ, ಟ್ಯಾಲೇಂಟ್ ಅವಾರ್ಡನಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ. 

ಕಳೇದ ಎರಡು ವರ್ಷಗಳ ಕಾಲ ಅಭ್ಯೂದಯ ಪಿಯುಸಿ ಕಾಲೇಜಿನಲ್ಲಿ ಶಿಕ್ಷಣ ಪಡೆದು ಇಂದು ಶೇಕಡಾ 75 ರಷ್ಟು ಅಂಕ ಪಡೆದ ಉತ್ತಿರ್ಣಳಾಗಿದ್ದೇನೆ ಎಂದರೆ ಇಲ್ಲಿನ ಗುಣಮಟ್ಟ ಶಿಕ್ಷಣ ಹಾಗೂ ಉಪನ್ಯಾಸಕರ ಗುಣಮಟ್ಟ ಬೋದನೆಯಿಂದ ಸಾಧ್ಯವಾಗಿದೆ. ಈ ಕಾಲೇಜಿನಲ್ಲಿ ಮಕ್ಕಳನ್ನು ಕಲೆ ಸಾಂಸ್ಕೃತಿಕ, ಯೋಗ, ಕ್ರೀಡೆ ಸೇರಿದಂತೆ ಎಲ್ಲರಂಗದಲ್ಲೂ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬುತ್ತಾರೆ ಜೊತೆಗೆ ಎಲ್ಲ ಬಗೆಯ ಸ್ಪರ್ಧಾತ್ಮಕ ಪರೀಕ್ಷೇಗಳನ್ನು ಹೇಗೆ ಎದುರಿಸಬೇಕು ಮತ್ತು ಹೇಗೆ ಸಿದ್ದತೇ ಮಾಡಿಕೊಳ್ಳಬೇಕು ಎಂಬುದನ್ನು ಸಹಿತ ತರಬೇತಿ ನೀಡುತ್ತಾರೆ ಇಂತಹ ಕಾಲೇಜಿನಲ್ಲಿ ಶಿಕ್ಷಣ ಪಡೇದ ನಾವುಗಳೆ ಧನ್ಯರು. 

-ಅಕ್ಷತಾ ಸುರೇಶ ವಿಠ್ಠಪ್ಪನವರ ಪಿಯುಸಿ ಪಾಸಾದ ಹಳೆ ವಿದ್ಯಾರ್ಥಿನಿ. 

ಮುದ್ದೇಬಿಹಾಳ ಪಟ್ಟಣದ ಅಹಿಲ್ಯಾದೇವಿ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆಯ ಅಭ್ಯೂದಯ ಪಿಯು ಸಾಯ್ಸ್‌ ಕಾಲೇಜಿನಲ್ಲಿ ಭಾನುವಾರ ನಡೆದ  ಟ್ಯಾಲೇಂಟ್ ಅವಾರ್ಡ ಪಿಯುಸಿ ಪ್ರಥಮ ವರ್ಷದ ಅರ್ಹತಾ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಅಭ್ಯೂದಯ ಪಿಯು ಸಾಯನ್ಸ್‌ ಕಾಲೇಜಿನ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ ಸನ್ಮಾನಿಸಿಗೌರವಿಸಿದರು. 


ಸುದ್ದಿ ಓದಿ