ಚಿಕ್ಕೋಡಿ

ಉಚಿತ ಮಧುಮೇಹ ತಪಾಸಣಾ ಶಿಬಿರ

ಉಚಿತ ಮಧುಮೇಹ ತಪಾಸಣಾ ಶಿಬಿರ

ಲೋಕದರ್ಶನ ವರದಿ 

ಚಿಕ್ಕೋಡಿ 18: ಕೆ ಎಲ್ ಇ ಆಯುರ್ವೇದ ಆಸ್ಪತ್ರೆ, ಬಸವ ಸರ್ಕಲ್, ಚಿಕ್ಕೋಡಿಯಲ್ಲಿ 19ನೇ ಮೇ ರಂದು ಬೆಳಗ್ಗೆ 10 ರಿಂದ ಸಂಜೆ 04 ರವರೆಗೆ ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ಅತಿಯಾದ ಬಾಯಾರಿಕೆ, ತೂಕದಲ್ಲಿನ ವ್ಯತ್ಯಾಸ, ಪದೇ ಪದೇ ಮೂತ್ರ ವಿಸರ್ಜನೆ ಇನ್ನಿತರ ಲಕ್ಷಣಗಳಿದಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಉಚಿತವಾಗಿ ತಪಾಸಿಸಿ ಓಷಧಿಗಳನ್ನು ವಿತರಿಸಲಾಗುವುದು. 

ಶಿಬಿರದಲ್ಲಿ ಆಹಾರ, ವಿಹಾರ ಸಲಹೆ ಯೋಗ ಚಿಕಿತ್ಸೆಯ ಕುರಿತು ಮಾಹಿತಿ ನೀಡಲಾಗುವುದು. ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಕಿರಣ ಮುತ್ನಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಧಿಕ ಮಾಹಿತಿಗಾಗಿ ಸಂಪರ್ಕಿಸಿ 08338275100. 


ಸುದ್ದಿ ಓದಿ