ಬಳ್ಳಾರಿ

ಉಚಿತ CET, NEET ತರಬೇತಿ ಶಿಬಿರ ಉದ್ಘಾಟನೆ

ಉಚಿತ CET, NEET ತರಬೇತಿ ಶಿಬಿರ ಉದ್ಘಾಟನೆ

ಬಳ್ಳಾರಿ. 01: ಅ.ಭಾ.ವಿ.ಪರಿಷತ್ ಜಗತ್ತಿನ ಅತಿ ದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿದೆ. ಇದಕ್ಕೆ ಕಾರಣ ವಿದ್ಯಾರ್ಥಿ ಪರಿಷತ್ತಿನ ಚಿಂತನೆಗಳು, ಆದರ್ಶಗಳು ಎಂದು ಟಿ.ಪ್ರಸನ್ನ ಜಿ ರವರು ಹೇಳಿದರು.  

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಬಳ್ಳಾರಿ ವಿಭಾಗದಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದ್ವಿತೀಯ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು, ಇಂಜಿನಿಯರಿಂಗ್, ಮೆಡಿಕಲ್ ಕೋರ್ಸ್‌ಗಳಿಗೆ ಸೇರಬಯಸುವ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ CET, NEET ತರಬೇತಿ ಶಿಬಿರದ ಉದ್ಘಾಟನೆಯನ್ನು ಬಳ್ಳಾರಿ ನಗರದ ಗಾಂಧಿನಗರದಲ್ಲಿರುವ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ದಿ. 30 ರಂದು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಅತಿಥಿಗಳಾದ ಟಿ.ಪ್ರಸನ್ನ ಜಿ, ರಾಷ್ಟ್ರೀಯ ಸ್ವಯಂ ಸೇವಕ ಮತ್ತು ಅಲ್ಲಂ ಗುರುಬಸವರಾಜ, ವೀ.ವಿ.ಸಂಘದ ಅಧ್ಯಕ್ಷರು, ಹಾಗೂ ವಿದ್ಯಾರ್ಥಿ ಪರಿಷತ್ ವಿಭಾಗ ಕಾರ್ಯದರ್ಶಿಯಾದ ನಾಗರಾಜ ಬಟ್ಟಕೇರ ಹಾಗೂ ನಗರಾಧ್ಯಕ್ಷರಾದ ಜಗದೀಶ ರವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. 

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಟಿ.ಪ್ರಸನ್ನ ಜಿ ರವರು ಕಾಲೇಜಿನ ಕ್ಯಾಂಪಸ್‌ಗಳಲ್ಲಿ ದೇಶ ವಿರೋಧಿ ಚಟುವಟಿಕೆಗಳು ಇತ್ತೀಚೆಗೆ ಕಂಡುಬರುತ್ತಿವೆ ಕಾರಣ ವಿದ್ಯಾರ್ಥಿ ಸಮುದಾಯ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು. ಅದೇ ರೀತಿ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಾಗರಾಜ ಬಟ್ಟಕೇರ ರವರು ಮಾತನಾಡಿ, ವಿದ್ಯಾರ್ಥಿ ಸಮುದಾಯಕ್ಕೆ ರಾಷ್ಟ್ರೀಯತೆ ವಿಚಾರ ಮೂಡಿಸುವಲ್ಲಿ ಕಾಲೇಜಿನ ಕ್ಯಾಂಪಸ್‌ನಲ್ಲಿ ಹತ್ತಾರು ವಿಭಿನ್ನ ಕಾರ್ಯಕ್ರಮಗಳು, ಸ್ವತಂತ್ರ್ಯ ಹೋರಾಟಗಾರರ ಚಿಂತನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಾ, ಕಳೆದ 75 ವರ್ಷಗಳಿಂದ ಯಶಸ್ವಿಯಾಗಿ ಅ.ಭಾ.ವಿ.ಪರಿಷತ್ ಕಾಲೇಜು ಕ್ಯಾಂಪಸ್‌ಗಳಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದೆ ಎಂದು ತಿಳಿಸಿಕೊಟ್ಟರು. ವೀ.ವಿ.ಸಂಘದ ಅಧ್ಯಕ್ಷರಾದ ಅಲ್ಲಂ ಗುರುಬಸವರಾಜ ರವರು ಮಾತನಾಡಿ, ವಿದ್ಯಾರ್ಥಿಗಳು ಅ.ಭಾ.ವಿ.ಪರಿಷತ್ತು ಕಲ್ಪಿಸಿಕೊಟ್ಟ ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಮುಂದಿನ ಜೀವನವನ್ನು ಕಟ್ಟಿಕೊಳ್ಳುವಂತೆ ಸೂಚಿಸಿದರು. ವಿದ್ಯಾರ್ಥಿ ಪರಿಷತ್ತಿನ ಉತ್ತರ ಕರ್ನಾಟಕ ರಾಜ್ಯ ಸಹಕಾರ್ಯದರ್ಶಿಯಾದ ವಿನೋದ್ ಅವರು ಮಾತನಾಡಿ ಕಳೆದ ಬಾರಿ ಉಚಿತ ಸಿ.ಇ.ಟಿ. ಶಿಬಿರನ್ನು ಹಮ್ಮಿಕೊಂಡು 3 ಮೆಡಿಕಲ್, 40ಕ್ಕೂ ಹೆಚ್ಚು ಇಂಜಿನಿಯರ್ ಸರ್ಕಾರಿ ಸೀಟುಗಳನ್ನು ನಮ್ಮ ವಿದ್ಯಾರ್ಥಿಗಳು ಪಡೆದಿದ್ದಾರೆ. ಅದೇ ರೀತಿ ಬಾರಿ ಅದಕ್ಕಿಂತ ಹೆಚ್ಚು ಸರ್ಕಾರಿ ಸೀಟುಗಳನ್ನು ಪಡೆಯಬೇಕೆಂದು ಕರೆ ನೀಡಿದರು. ಈ ಉದ್ಘಾಟನಾ ಸಮಾರಂಭದಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. 


ಸುದ್ದಿ ಓದಿ