ಕಾರವಾರ

ಹೊಸ ಅಂಗಡಿ ಆರಂಭದ ನೆಪದಲ್ಲಿ ವಂಚನೆ: ಅಂಗಡಿಗಳಲ್ಲಿ ಕಳವು ಮಾಡುವ ಶಂಕಿತರಿಂದ ಎಚ್ಚರಿಕೆ

ಹೊಸ ಅಂಗಡಿ ಆರಂಭದ ನೆಪದಲ್ಲಿ ವಂಚನೆ: ಅಂಗಡಿಗಳಲ್ಲಿ ಕಳವು ಮಾಡುವ ಶಂಕಿತರಿಂದ ಎಚ್ಚರಿಕೆ

ಮುಂಡಗೋಡ 03 : ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಅಂಗಡಿಗಳಿಗೆ ವಿವಿಧ ನೆಪಗಳಲ್ಲಿ ಭೇಟಿ ನೀಡಿ ವ್ಯಾಪಾರಸ್ಥರ ಗಮನ ಬೇರೆಡೆ ಸೆಳೆದು ನಗದು, ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡುತ್ತಿರುವ ಶಂಕಿತ ವ್ಯಕ್ತಿಗಳ ಕುರಿತು ಮುಂಡಗೋಡ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.   ಪೊಲೀಸರು ಬಿಡುಗಡೆ ಮಾಡಿರುವ ಫೋಟೋದಲ್ಲಿರುವ ಇಬ್ಬರು ವ್ಯಕ್ತಿಗಳು ಅಂಗಡಿಗಳಿಗೆ ತೆರಳಿ “ನಾಣ್ಯಗಳನ್ನು ನೀಡಿ ನೋಟು ಕೊಡಿ”, “ಆಐ ಸೀರೀಸ್ನ ನೋಟು ಬೇಕು” ಅಥವಾ “ಹೊಸ ಅಂಗಡಿ ಆರಂಭಿಸುತ್ತಿದ್ದೇವೆ” ಎಂಬ ನೆಪದಲ್ಲಿ ಮಾತುಕತೆ ಆರಂಭಿಸಿ ಅಂಗಡಿ ಮಾಲೀಕರ ಗಮನವನ್ನು ಬೇರೆಡೆ ಸೆಳೆಯುತ್ತಾರೆ ಎನ್ನಲಾಗಿದೆ. 

ಈ ಸಂದರ್ಭವನ್ನು ಬಳಸಿಕೊಂಡು ಅಂಗಡಿಯಲ್ಲಿರುವ ನಗದು, ಚಿನ್ನಾಭರಣ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.  ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಫೋಟೋದಲ್ಲಿರುವ ವ್ಯಕ್ತಿಗಳು ಎಲ್ಲಿಯಾದರೂ ಕಂಡುಬಂದರೆ ಅಥವಾ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಗಮನಕ್ಕೆ ಬಂದರೆ ತಕ್ಷಣ ಮುಂಡಗೋಡ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಅಲ್ಲದೆ 112 ಪೊಲೀಸ್ ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. 


ಸುದ್ದಿ ಓದಿ