ಸಚಿವೆ ಹೆಬ್ಬಾಳಕರ್ ಹೆಸರಲ್ಲಿ ವಂಚನೆ : ಸರಕಾರಿ ನೌಕರಿ ಆಮಿಷದಿಂದ ಪಂಗನಾಮ : ತಿನೇಕರ್ ಗಂಭೀರ ಆರೋಪ
ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೆಸರಿನಲ್ಲಿ 16 ಜನರಿಂದ 34 ಲಕ್ಷ ದುಡ್ಡು ಪಡೆದು ವಂಚನೆ ಮಾಡಲಾಗಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಸರಕಾರಿ ನೌಕರಿ ಕೊಡಿಸುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗ ಮಂಜುನಾಥನಿಂದ ಮೋಸ ಮಾಡಲಾಗಿದೆ. ರಾಜ್ಯಪಾಲರ ಆದೇಶಾನುಸಾರ ಅಂತಾ ಹೇಳಿ ರಾಜ್ಯಪಾಲರ ಹಾಗೂ ಹೆಬ್ಬಾಳಕರ್ ಹೆಸರಲ್ಲಿ ಸಹಿ ಆದೇಶ ಪತ್ರಗಳನ್ನು ನೀಡಿ ಮೋಸ ಮಾಡಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಜಯಂತ ತಿನೇಕರ್ ಹೇಳಿದ್ದಾರೆ.
ಮಂಗಳವಾರ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಸಹಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನಕಲಿ ಸಹಿ ಮಾಡಿ ಆದೇಶ ಪ್ರತಿ ವಿತರಣೆ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕಂಪ್ಯೂಟರ್ ಆಪರೇಟರ್ ಹುದ್ದೆ ಕೊಡಿಸುವುದಾಗಿ ಮೋಸಮಾಡಲಾಗಿದೆ.
ನಕಲಿ ಆದೇಶ ಪ್ರತಿಯನ್ನೂ ನೀಡಿರುವ ಮಂಜುನಾಥ ಮಲಸರ್ಜ್. ಅವರು ಬೈಲಹೊಂಗಲ, ಖಾನಾಪುರ, ಬೆಳಗಾವಿ ಸೇರಿ ಒಟ್ಟು 16 ಜನರಿಗೆ ವಂಚನೆ ಮಾಡಿದ್ದಾರೆ.
ಪೋನ್ ಪೇ, ಬ್ಯಾಂಕ್ ಅಕೌಂಟ್ ಮೂಲಕ 34 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚನೆಅಮಡಲಾಗಿದೆ.
ವಂಚನೆ ಪ್ರಕರಣದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಖಾಸಗಿ ಪಿಎ ಸಂಗನಗೌಡ ಹೆಸರು ತಳುಕು ಹಾಕಲಾಗಿದೆ.
ಪೊಲೀಸರು ನಾವು ಕೊಟ್ಟದೂರು ಸ್ವೀಕರಿಸಿಕೊಳ್ಳದ ಹಿನ್ನೆಲೆ ಕೋರ್ಟ್ ನಲ್ಲಿ ಕೇಸ್ ಹಾಕಿದ್ದೇವೆ. ಖಾನಾಪುರ ತಾಲೂಕಿನ ಗಂದಿಗವಾಡದ ಕಾವ್ಯಾ ಯಳ್ಳೂರ ಎಂಬ ಯುವತಿಯಿಂದ ದೂರು ದಾಖಲಾಗಿದೆ.
15ಕ್ಕೂ ಹೆಚ್ಚು ಸಲ ಕಿತ್ತೂರು ಪೊಲೀಸ ಠಾಣೆಗೆ ಹೋಗಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಕಿತ್ತೂರು ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿಲ್ಲವಾದರೂ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ.
ತಮ್ಮ ವ್ಯಾಪ್ತಿ ಬರದೇ ಇದ್ರೂ ಕಿತ್ತೂರು ಪೊಲೀಸರಿಂದ ನಿರಂತರ ಕಿರಿಕಿರಿ.
ಲಿಖಿತ ಹೇಳಿಕೆ ಕೊಟ್ಟರೂ ಯಾವುದೇ ನಮ್ಮ ದೂರು ಸ್ವೀಕರಿಸಿಲ್ಲ ಎಂದು
ಬೆಳಗಾವಿಯಲ್ಲಿ ಜಯಂತ್ ತಿನೇಕರ್ ಸುದ್ಧಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.