ದುಪದಾಳ ಜಲಾಶಯದಲ್ಲಿ ಈಜಲು ತೆರಳಿದ್ದ ನಾಲ್ವರು ಯುವಕರು ನೀರುಪಾಲು : ಸ್ನಾನಕ್ಕೆಂದು ನದಿಗೆ ಇಳಿದಾಗ ಕೇಸರಿನಲ್ಲಿ ಸಿಲುಕಿ ಸಾವು

ದುಪದಾಳ ಜಲಾಶಯದಲ್ಲಿ ಈಜಲು ತೆರಳಿದ್ದ ನಾಲ್ವರು ಯುವಕರು ನೀರುಪಾಲು : ಸ್ನಾನಕ್ಕೆಂದು ನದಿಗೆ ಇಳಿದಾಗ ಕೇಸರಿನಲ್ಲಿ ಸಿಲುಕಿ ಸಾವು

ಬೆಳಗಾವಿ : ಈಜಲು ಹೋಗಿದ್ದ ಮುಂಡಗೋಡ ಮೂಲದ 6 ಜನರಲ್ಲಿ ನಾಲ್ವರು ಯುವಕರು ಕೆಸರಿನಲ್ಲಿ ಸಿಲುಕಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಶುಕ್ರವಾರ ಮಧ್ಯಾಹ್ನ ಜಿಲ್ಲೆಯ ಘಟಪ್ರಭಾ ಸಮೀಪದ ದುಪದಾಳ ಜಲಾಶಯದಲ್ಲಿ ಬೆಳಕಿಗೆ ಬಂದಿದೆ.

   ಸಂತೋಷ ಇಡಗೆ, ಅಜಯ ಜೋರೆ, ಕೃಷ್ಣ ಜೋರೆ, ಆನಂದ ಕೋಕರೆ ಇವರೆಲ್ಲರು ಮೃತಪಟ್ಟಿರುವ ದುರ್ಧೈವಿಗಳಾಗಿದ್ದಾರೆ. ವಿಠಲ ಜಾನು ಕೋಕರೆ (18) ಈತ ಪ್ರಾಣಾಪಾಯದಿಂದ ಪಾರಾಗಿದ್ದು, ರಾಮಚಂದ್ರ ಕೋಕರೆ ಎನ್ನುವ ಯುವಕ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ ಎನ್ನಲಾಗಿದೆ. ಆತನನ್ನು ಘಟಪ್ರಭಾ ಕೆಎಚ್ಐ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲ ಯುವಕರು ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕು ಶೃರಗೇರಿಯವರು ಎನ್ನಲಾಗಿದೆ.

   ಮುಂಡಗೋಡ ತಾಲೂಕಿನ ಶ್ರರಗೇರಿ ಮೂಲದ 6 ಜನ ಯುವಕರು ದುಪದಾಳ ನದಿ ನೀರಿನಲ್ಲಿ ಸ್ನಾನ ಮಾಡಲು ಇಳಿದಿದ್ದರು. ಜಲಾಶಯದ ಕೆಸರಿನಲ್ಲಿ 6 ಜನರು ನದಿ ನೀರಿನ ಕೇಸರಿನಲ್ಲಿ ಸಿಲುಕಿದ್ದರು. ಒಬ್ಬನನ್ನು ರಕ್ಷಿಸಲು ಮತ್ತೊಬ್ಬ ಹೀಗೆ ಹೋಗಿ ನಾಲ್ವರು ಮೃತಪಟ್ಟಿದ್ದಾರೆ. ಇದರಲ್ಲಿ ಒಬ್ಬನ ಪರಿಸ್ಥಿತಿ ಗಂಭೀರವಾಗಿದೆ.

    ಸ್ನಾನಕ್ಕೆ ತೆರಳಿದ್ದ 6 ಜನರು ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು, ಬಾರ್ ಗೆ ರಜೆ ಹಿನ್ನಲೆ ಧೂಪದಾಳ ಡ್ಯಾಂಗೆ ಈಜಲೂ ಹೋಗಿದ್ದರು ಎನ್ನಲಾಗಿದೆ. ಒರ್ವ ಪಾರು, ಒರ್ವನ ಸ್ಥಿತಿ ಚಿಂತಾಜನಕ, ಇತರ ನಾಲ್ವರ ಮೃತ್ಯುವಾಗಿದ್ದಾರೆ. ಘಟನಾ ಸ್ಥಳಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಹಾಗೂ ಗೋಕಾಕ ಡಿಎಸ್ ಪಿ‌ ಮುಲ್ಲಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




ಸುದ್ದಿ ಓದಿ