ಕಟ್ಟಿಕೊಂಡವನೇ ಯಮ ಕಂಟಕನಾದ : ಶ್ರೀಲತಾ ಪೋಷಕರ ಆರೋಪ
ಬಳ್ಳಾರಿ 12: ತಾಳಿಕಟ್ಟಿದವನೇ ಯಮ ಕಂಟಕನಾದ ಘಟನೆ ಬೆಂಗಳೂರಿನ ಆರ್ ಟಿ ನಗರದ ಮಠದಹಳ್ಳಿಯಲ್ಲಿ ನಡೆದಿದೆ. ಬೆಂಗಳೂರಿನ ಆರ್ ಟಿ ನಗರದ ಮಠದಹಳ್ಳಿಯಲ್ಲಿ ನಿವಾಸಿ ರಾಘವೇಂದ್ರನೇ ಬಳ್ಳಾರಿ ಮೂಲದ ನಾಲ್ಕು ತಿಂಗಳ ಗರ್ಭಿಣಿ ಪತ್ನಿ ಶ್ರೀಲತಾಳನ್ನು ಕುತ್ತಿಗೆಗೆ ವೇಲ್ ಬಿಗಿದು ಹತ್ಯೆ ಮಾಡಿದ್ದಾನೆಂದು ಶ್ರೀಲತಾ ಪೋಷಕರು ಆರೋಪಿಸಿ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಳ್ಳಾರಿ ನಗರದ ಕಪ್ಪಗಲ್ಲು ರಸ್ತೆಯಲ್ಲಿನ ನಿವಾಸಿಗಳಾದ ಗಾಂದಿಲಿಂಗಪ್ಪ ಪುಷ್ಪಾವತಿ ದಂಪತಿಯ ಮಗಳು ಕೆ.ಆರಿ್ಡ.ಪಿ.ಆರ್ ಸರ್ಕಾರಿ ಉದ್ಯೋಗಿ ಶ್ರೀಲತಾಳನ್ನು (28) ಗುಲ್ಬರ್ಗಾ ಜಿಲ್ಲೆಯ ಜೀವರ್ಗಿ ತಾಲೂಕಿನ ನಿವಾಸಿ ಖಾಸಗಿ ಕಂಪನಿ ಎಲ್.ಅಂಡ್ ಟಿ ಯಲ್ಲಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ ರಾಘವೇಂದ್ರ ಗುರ್ಜಾಲ್ (34) ಇವನಿಗೆ ಕಳೆದ ಹದಿನಾಲ್ಕು ತಿಂಗಳ ಹಿಂದೆ ಎರಡು ಕುಟುಂಬಗಳ ಹಿರಿಯರ ಸಮ್ಮುಖದಲ್ಲಿ ಆರು ಲಕ್ಷ ಹಣ ಮತ್ತು ಹನ್ನೊಂದು ತೊಲೆ ಬಂಗಾರವನ್ನು ವರದಕ್ಷಿಣೆಯಾಗಿ ನೀಡಿ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾಗಿ ಕೆಲ ತಿಂಗಳವರೆಗೆ ಅನೋನ್ಯವಾಗಿದ್ದ ಇವರು ಬರು ಬರುತ್ತಾ ರಾಘವೇಂದ್ರ ತನ್ನ ಪತ್ನಿ ಶ್ರೀಲತಾಳ ಮೇಲೆ ಹೆಜ್ಜೆ ಹೆಜ್ಜೆಗೂ ಅನುಮಾನದಿಂದ ಆಕೆಯ ಮೇಲೆ ಸಂಶಯಪಡುತ್ತಿದ್ದ. ಇದೇ ಕಾರಣಕ್ಕೆ ಹಲವಾರು ಸಲ ಶ್ರೀಲತಾ ದಂಪತಿಗಳ ಮದ್ಯೆ ಜಗಳ ನಡೆದಿದೆ. ಇತ್ತಿಚೆಗೆ ಕೆಲ ದಿನಗಳ ಹಿಂದೆ ಇದೇ ರೀತಿಯಲ್ಲಿ ಜಗಳ ಮಾಡಿಕೊಂಡಾಗ ಶ್ರೀಲತಾ ತಂದೆ ತಾಯಿ ಮತ್ತು ಬಂಧುಗಳೊಂದಿಗೆ ಬೆಂಗಳೂರಿಗೆ ಹೋಗಿ ಇಬ್ಬರನ್ನು ಸಮಾಧನಾಪಡಿಸಿ ಬಂದಿರುತ್ತಾರೆ. ಶ್ರೀಲತಾ ಪತ್ನಿ ರಾಘವೇಂದ್ರನು ಆಗಾಗ್ಗೆ ತನ್ನ ತವರು ಮನೆಯಿಂದ ಹಣ ಮತ್ತು ಬಂಗಾರವನ್ನು ತರುವಂತೆ ಒತ್ತಾಯ ಮಾಡುತ್ತಿದ್ದ, ಈ ಹಿಂದೆ ಸಹ ಕಾರು ಕೊಳ್ಳುವಾಗ ಮತ್ತು ವರ್ಗಾವಣೆ ಸಂದರ್ಭದಲ್ಲಿ ಸುಮಾರು ಎರಡು ಲಕ್ಷ ರೂಪಾಯಿಗಳನ್ನು ನೀಡಿದ್ದರು. ಆದರೂ ಸಹ ಸಮಾಧಾನಗೊಳ್ಳದೆ ರಾಘವೇಂದ್ರ ಪದೇ ಪದೇ ತವರು ಮನೆಯಿಂದ ಹಣ ತರುವಂತೆ ಕಿರುಕುಳ ನೀಡುತ್ತಿದ್ದ. ಹಣ ತರದೇ ಇದ್ದ ಸಂದರ್ಭದಲ್ಲಿ ಆಕೆಯ ಮೇಲೆ ಸುಖಾ ಸುಮ್ಮನೆ ಅನುಮಾನ ಪಟ್ಟು ದೈಹಿಕ ಹಲ್ಲೆ ಮಾಡುವುದು ಮಾಡುತ್ತಿದ್ದ.ಆದರೂ ಶ್ರೀಳತಾ ತನ್ನ ತವರಿನವರಿಗೆ ಎಲ್ಲಾ ವಿಷಯವನ್ನು ಹೇಳದೇ ತಾನು ನುಂಗಿಕೊಂಡು ಪತಿ ಜೊತೆ ಜೀವನ ಮಾಡುತ್ತಿದ್ದಳು. ಮೊನ್ನೆ ಮೇ 11ರಂದು ತಾವು ವಾಸಿಸುತ್ತಿದ್ದ ಮನೆಯಲ್ಲಿ ಸಣ್ಣ ಕಲಹದಿಂದ ಆರಂಭವಾಗಿ ಕುತ್ತಿಗೆಗೆ ವೇಲ್ ಬಿಗಿದು ಕೊಲೆ ಮಾಡುವಲ್ಲಿಗೆ ನಡೆದು ಹೋಗಿದೆ. ಇದರಿಂದ ಶ್ರೀಲತಾಳ ತವರು ಮನೆ ಬಳ್ಳಾರಿಯಲ್ಲಿ ಶ್ರೀಲತಾಳ ತಂದೆ ತಾಯಿ ಮತ್ತು ಬಂಧುಗಳ ದುಃಖ ಆಕ್ರಂದನದೊಂದಿಗೆ ಮುಗಿಲು ಮುಟ್ಟಿತ್ತು. ನಗರ ಹರಿಶ್ಚಂದ್ರ ಘಾಟ್ನಲ್ಲಿ ಅಂತಿಮ ಸಂಸ್ಕಾರವನ್ನು ಮಾಡಲಾಯಿತು.