ರೈತರ ಜಮೀನಿನಲ್ಲಿನ ಪಂಪಸೇಟ್ ಕಳ್ಳತನ ಮಾಡಿದ್ದ ನಾಲ್ವರು ಖದೀಮರ ಬಂಧನ, 14 ಪಂಪಸೇಟ್, 2 ದ್ವಿಚಕ್ರ ವಾಹನ ವಶ
ಬೆಳಗಾವಿ : ಜಿಲ್ಲೆಯ ಗೋಕಾಕ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರ ಹೊಲಗದ್ದೆಗಳಲ್ಲಿನ ಪಂಪಸೆಟ್ ಗಳನ್ನು ಕಳ್ಳತನ ಮಾಡಿದ್ದ ನಾಲ್ವರು ಖದೀಮರನ್ನು ಖೆಡ್ಡಾಗೆ ಬೀಳಿಸುವಲ್ಲಿ ಜಿಲ್ಲೆಯ ಕುಲಗೋಡ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರಿಂದ ಸುಮಾರು 2.03 ಲಕ್ಷ ಮೌಲ್ಯದ 14 ಪಂಪಸೇಟ್ ಗಳು, ಎರಡು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಈ ಪಂಪಸೆಟ್ ಕಳ್ಳತನ ಮಾಡಿದ ಪ್ರಕರಣದಲ್ಲಿ ಕುಮಾರ ರಮೇಶ ಕಂಬಾರ (21), ಯಲ್ಲಪ್ಪ ಮುದಕಪ್ಪ ನಂದಿ(35), ರವಿ ಅಜಿತ ಕಂಬಾರ( 21), ಭೀಮಪ್ಪ ಹೊಳೆಪ್ಪ ಹಣಮಸಾಗರ, (27) ಇವರೆಲ್ಲರೂ ಗೋಕಾಕ ತಾಲೂಕಿನ ಕೈತನಾಳ ಗ್ರಾಮದವಾಗಿದ್ದು, ಇವರೆಲ್ಲರು ಬಂಧಿತ ಆರೋಪಿತರಾಗಿದ್ದಾರೆ.
ಈ ಆರೋಪಿಗಳ ತಂಡವು ಗೋಕಾಕ ತಾಲೂಕಿನ ಕೈತನಾಳ, ವಡೇರಹಟ್ಟಿಯಲ್ಲಿ ತಲಾ ಎರಡು, ಸಜ್ಜಿಹಾಳ, ಖನಗಾಂವ, ತವಗ, ಬೆಣಚಿನಮರಡಿ, ಗಿಳಿಹೊಸೂರು, ಕೇಶಪ್ಪನಹಟ್ಟಿ, ಮೆಳವಂಕಿ, ಹಡಗಿನಾಳ, ಕೊಳವಿ, ಮಿಡಕನಟ್ಟಿಯಲ್ಲಿ ತಲಾ ಒಂದೊಂದು ಪಂಪ್‌ಸೆಟ್ ಕಳವು ಮಾಡಿದ್ದರು ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ತಿಳಿಸಿದ್ದಾರೆ.
ಕಳ್ಳರು ಕಳವು ಮಾಡಲು ಬಳಸಿದ ಎರಡು ಮೊಟಾರ ಸೈಕಲ್‌ಗಳನ್ನು ವಶಪಡಿಸಿಕೊಂಡು ಪ್ರಕರಣವನ್ನು ಬೇಧಿಸಿ ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪಂಪ್‌ಸೆಟ್ ಕಳವಾದ ಬಗ್ಗೆ ಹಡಗಿನಾಳದ ರೈತ ಮಲ್ಲಪ್ಪ ಯಮನಪ್ಪ ಲಾಡಿ ಎನ್ನುವವರು ಈಚೆಗೆ ಕುಲಗೋಡ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ, ಹೆಚ್ಚುವರಿ ಎಸ್ ಪಿ ವೇಣುಗೋಪಾಲ, ಗೋಕಾಕ ಡಿಎಸ್ ಪಿ ಮುಲ್ಲಾ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಜಿ.ಎಸ್.ಪಾಟೀಲ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿ ಕಾರ್ಯಾಚರಣೆ ನಡೆಸಲಾಯಿತು.
ವೃತ್ತ ನಿರೀಕ್ಷಕರು ಮೂಡಲಗಿ ಇವರ ಮಾರ್ಗದರ್ಶನದಲ್ಲಿ ಕುಲಗೋಡ ಠಾಣೆಯ ಸಿಬ್ಬಂದಿಗಳಾದ ಎಲ್. ಎಮ್.ನಾಯಿಕ, ಎಸ್.ಬಿ.ಪಾಟೀಲ, ಎಮ್.ಎಸ್.ಕುರೆನ್ನವರ, ಎ.ಎಚ್.ವೇಶದಾರಿ ಸಿಪಿಸಿ, ಕೆ.ಸಿ.ಬಾಗ, ಎಸ್.ಎನ್.ಬಡಬಡೆ, ಎಸ್.ಎಲ್.ಮಂಗಿ, ಎಸ್.ಪಿ.ಮುಗ್ಗನ್ನವರ, ಎಮ್.ಬಿ.ಆಡಿನ, ವಿ.ಎಲ್.ದೂಳಪನ್ನವರ ಇವರು ಕಾರ್ಯಾಚರಣೆ ಯಲ್ಲಿ ಭಾಗಿಯಾಗಿದ್ದರು. ಈ ವಿಶೇಷ ತನಿಖಾ ತಂಡದ ಕಾರ್ಯವನ್ನು ಪೊಲೀಸ್ ವರಿಷ್ಠಾಧಿಕಾರಿಗಳು ಇವರು ಶ್ಲಾಘಿಸಿರುತ್ತಾರೆ.