ಕೆಎಲ್ಇ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ
ಮಹಾಲಿಂಗಪುರ: ಕೆಎಲ್ಇ ಸಂಸ್ಥೆಯ ಎಸ್ಸಿಪಿ ಕಲಾ,ವಿಜ್ಞಾನ ಮತ್ತು ಡಿ.ಡಿ ಶಿರೋಳ ವಾಣಿಜ್ಯ ಪದವಿ ಮಹಾವಿದ್ಯಾಲಯದ ಸಭಾ ಭವನದಲ್ಲಿ ಕೆ.ಎಲ್.ಇ ಅಂಗ ಸಂಸ್ಥೆಗಳಿಂದ ಕೆ.ಎಲ್.ಇ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಜಮಖಂಡಿಯ ಕನ್ನಡ ಪ್ರಾಧ್ಯಾಪಕರು ಡಾ.ಎಸ್.ಬಿ.ಮಟೋಳಿಯವರು ಮಾತನಾಡಿ ಕೆ.ಎಲ್.ಇ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಕೊಂಡ ಸಂಸ್ಥೆಯಾಗಿದೆ, ಈ ಸಂಸ್ಥೆಯ ಸ್ಥಾಪನೆ ಉದ್ದೇಶ ಅದಕ್ಕಾಗಿ ಸಂಸ್ಥಾಪಕರು ಪಟ್ಟ ಪರಿಶ್ರಮ ಹಾಗೂ ತ್ಯಾಗದಿಂದ ವಿಶ್ವ ವಿಖ್ಯಾತವಾಗಿದೆ. ಸಮಕಾಲಿನ ವಿದ್ಯಮಾನಗಳಿಗೆ ಸ್ಪಂದಿಸುತ್ತಾ ಹೊಸ ಹೊಸ ಕೋರ್ಸಗಳನ್ನು ಆರಂಭಿಸುತ್ತಾ ಬಂದಿದೆ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಸಂಸ್ಥೆ ನಮ್ಮದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಆಯ್.ಕುಂದಗೋಳ ಅವರು ಕೆ.ಎಲ್.ಇ ಸಂಸ್ಥೆಗೆ ಸಂಸ್ಥಾಪಕರು ದಾನಿಗಳ ಕೊಡುಗೆ ಅಪಾರವಾಗಿದೆ. ಸಪ್ತರ್ಷಿಗಳ ತ್ಯಾಗ ಮತ್ತು ದಾನದಿಂದ ಇಂದು ನಮ್ಮ ಸಂಸ್ಥೆ ಹೆಮ್ಮರವಾಗಿ ಬೆಳದಿದೆ ಎಂದರು.
ಸ್ಥಳೀಯ ಆಡಳಿತ ಮಂಡಳಿ ಸದಸ್ಯ ಸಂತೋಷ ಹುದ್ದಾರ, ಡಾ.ಕೆ.ಎಮ್.ಅವರಾದಿ, ಎಲ್.ಬಿ.ತುಪ್ಪದ, ಬಿ.ಎನ್.ಅರಿಕೇರಿ, ಎಸ್.ಎಸ್.ಅಂಗಡಿ. ಎ.ಆರ್.ಚೌವ್ವಾಣ, ಡಾ. ಎಸ್.ಡಿ.ಸೊರಗಾಂವಿ, ಎಮ್.ಎಮ್.ನಿಂಬರಗಿ,ದೈಹಿಕ ನಿರ್ದೇಶಕ ವಿ.ಎಸ್.ಅಂಗಡಿ, ಆರ್.ವಿ.ಚೌಗಲಾ, ಡಾ.ಎಸ್.ಸಿ.ಬಿಜ್ಜರಗಿ, ಆಯ್.ಸಿ.ಶಿರೋಳ, ಜೈಮಂಗಲಾ ಪಾಟೀಲ ಡಿ.ಎನ್.ನಾಯ್ಕ, ಕುಮಾರಿ ಎ.ಜಿ.ಯಾದವಾಡ ಕಾಲೇಜಿನ ಎಲ್ಲ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.