ಸ್ವಗ್ರಾಮ ನೇಗಿನಾಳಕ್ಕೆ ಆಗಮಿಸಿದ ಮಾಜಿ ಸಚಿವ ಡಿಬಿ ಇನಾಮದಾರ ಪಾರ್ಥಿವ : ಅಂತಿಮ ದರ್ಶನ ಪಡೆದ ಮಾಜಿ ಸಿಎಂ ಸಿದ್ದರಾಮಯ್ಯ

ಸ್ವಗ್ರಾಮ ನೇಗಿನಾಳಕ್ಕೆ ಆಗಮಿಸಿದ ಮಾಜಿ ಸಚಿವ ಡಿಬಿ ಇನಾಮದಾರ ಪಾರ್ಥಿವ : ಅಂತಿಮ ದರ್ಶನ ಪಡೆದ ಮಾಜಿ ಸಿಎಂ ಸಿದ್ದರಾಮಯ್ಯ

ಬೆಳಗಾವಿ : ಅನಾರೋಗ್ಯ ಹಿನ್ನೆಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿನ್ನೆ ನಿಧನರಾದ ಮಾಜಿ ಸಚಿವರಾದ ಡಿ.ಬಿ ಇನಾಮದಾರ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿನಿಂದ  ಸ್ವಗ್ರಾಮ ನೇಗಿನಹಾಳಕ್ಕೆ ಬೆಳಗ್ಗೆ 5 ಗಂಟೆಗೆ ತರಲಾಗಿದೆ.

  ಇನಾಮದಾರ ಮನೆಯಲ್ಲಿ ಪೂಜಾ ವೀಧಾನಗಳನ್ನು ಮುಗಿಸಿ, 8 ಗಂಟೆಗೆ ಮನೆಯಿಂದ ಹೊರಟು ಅವರೇ ಸ್ಥಾಪಿಸಿದ ವಿಜಯ ಶ್ರೀ ವಿದ್ಯಾದಾಯಿನಿ ಸಂಘದ ಹೈಸ್ಕೂಲ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು, ಮಧ್ಯಾಹ್ನ 12 ಗಂಟೆಗೆ ಮೆರವಣಿಗೆ ಮೂಲಕ ಸಂಚರಿಸಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ‌ನಮನ ಸಲ್ಲಿಸಲಾಗುವದು. ಲಿಂಗಾಯತ ಧರ್ಮದ ಪ್ರಕಾರ ಅಂತ್ಯಕ್ರಿಯೆ ನೆರವೇರಲಿದೆ.

   ಮಾಜಿ ಸಚಿವರಾದ ಡಿ ಬಿ ಇನಾಮದಾರ ಅವರ ಪಾರ್ಥೀವ ಶರೀರದ ಮೇಲೆ ಉಪವಿಭಾಗಧಿಕಾರಿ ಪ್ರಭಾವತಿ ಫಕೀರಪುರ, ಡಿವಾಯ ಎಸ್ಪಿ ರವಿ ನಾಯಕ ಅವರು ರಾಷ್ಟ್ರಧ್ವಜವನ್ನು ಹೊದಿಸಿ ಅಂತಿಮ‌ನಮನ ಸಲ್ಲಿಸಿದರು.

ಸಿದ್ದರಾಮಯ್ಯ, ಕೋರೆ ಅಂತಿಮ ನಮನ :

ಸ್ವಗ್ರಾಮಕ್ಕೆ ಆಗಮಿಸಿದಡಿಬಿ ಇನಾಮದಾರ ಅವರ ಪಾರ್ಥಿವಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತಿಮ ನಮನ ಸಲ್ಲಿಸಿದರು. 

 ಬಳಿಕ ಮಾತನಾಡಿದ ಅವರು, ನನಗಿಂತ ವಯಸ್ಸಿನಲ್ಲಿ ಕಿರಿಯರು, ಅತ್ಯಂತ ಉತ್ಸಾಯಿ ಹಾಗೂ ಚಟುವಟಿಕೆಯಿಂದ ಇರುವಂತ ವ್ಯಕ್ತಿ ಅಚಾನಕ್ಕಾಗಿ ಅನಾರೋಗ್ಯಕ್ಕೆ ತುತ್ತಾಗಿರುವದು ನನಗೂ ಶಾಕ್ ಆಗಿದೆ. ಕಿತ್ತೂರಿನ ಧಣಿ ಎಂದೇ ಗುರುತಿಸಿಕೊಂಡಿದ್ದ ಅವರು ಅತ್ಯಂತ ಪ್ರಾಮಾಣಿಕ ಹಾಗೂ ದಕ್ಷ ವ್ಯಕ್ತಿಯಾಗಿದ್ದರು. 

  ಅವರ ಸಾವು ನನಗೆ ಧಿಗ್ರಭಮೆಯನ್ನುಂಟು ಮಾಡಿದೆ. ಪ್ರತಿದಿನ ಮಣಿಪಾಲ ಆಸ್ಪತ್ರೆಯ ವೈದ್ಯರೊಂದಿಗೆ ಮಾತನಾಡಿ ಆರೋಗ್ಯದ ಕುರಿತು ಮಾಹಿತಿ ಪಡೆದು, ಗುಣಮಟ್ಟದ ಚಿಕಿತ್ಸೆ ನೀಡಿ ಅವರಿಗೇ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದಿದ್ದೆ. ಆದರೆ ಪರಿಸ್ಥಿತಿ ಕೈಮೀರಿ ಹೋಗಿದೆ. 

   ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬ ಸದಸ್ಯರಿಗೆ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು. ಬಳಿಕ ಕೆಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರಿಂದ ಅಂತಿಮ ನಮನ ಸಲ್ಲಿಸಿದರು.

ಸುದ್ದಿ ಓದಿ