ಮಾಜಿ ಮಂತ್ರಿ ಮಲ್ಹಾರಗೌಡಾ ಪಾಟೀಲ ಅವರ ಧರ್ಮಪತ್ನಿ ಸುಮಿತ್ರಾದೇವಿ ವಿಧಿವಶ

ಮಾಜಿ ಮಂತ್ರಿ ಮಲ್ಹಾರಗೌಡಾ ಪಾಟೀಲ ಅವರ ಧರ್ಮಪತ್ನಿ ಸುಮಿತ್ರಾದೇವಿ ವಿಧಿವಶ

ಸಂಕೇಶ್ವರ : ರಾಜ್ಯ ಸರಕಾರದ ಮಾಜಿ ಮಂತ್ರಿ ಹಾಗೂ ಸಂಕೇಶ್ವರ‌ ಮಾಜಿ ಶಾಸಕರಾಗಿದ್ದ ಮಲ್ಹಾರಗೌಡಾ ಪಾಟೀ ಅವರ ಧರ್ಮಪತ್ನಿ ಶ್ರೀಮತಿ ಸುಮಿತ್ರಾದೇವಿ ಮಲ್ಹಾರಗೌಡಾ ಪಾಟೀಲ (78) ಅವರು ಶನಿವಾರ ಬೆಳಿಗ್ಗೆ ವಿಧಿವಶವಾಗಿದ್ದಾರೆ.

    ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು‌ ಮಾಡಲಾಗಿತ್ತು. ಆದರೆ ಶನಿವಾರ ಮುಂಜಾನೆ ಚಿಕಿತ್ಸೆ ಫಲಿಸದೆ ವಿಧಿವಶವಾಗಿದ್ದಾರೆ. 

  ಮಾಜಿ ಮಂತ್ರಿ ಮಲ್ಹಾರಗೌಡಾ ಪಾಟೀಲ ಅವರು ಕೂಡಾ ಕಳೆದ‌‌ ಎರಡ್ಮೂರು ವರ್ಚಗಳ ಹಿಂದಷ್ಟೇ ವಿಧಿವಶವಾಗಿದ್ದರು.

   ಸುಮಿತ್ರಾದೇವಿ ಅವರ ಅಂತ್ಯಕ್ರಿಯೆ ಯು ಅವರ ತೋಟದಲ್ಲಿ ಶನಿವಾರ ಸಂಜೆ 6 ಗಂಟೆಗೆ ನೆರವೇರಲಿದೆ.

ಸುದ್ದಿ ಓದಿ