ಬಳ್ಳಾರಿ

ಮಾಜಿ ಸಚಿವ ಸಿ.ಟಿ. ರವಿ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಬೇಕು

ಮಾಜಿ ಸಚಿವ ಸಿ.ಟಿ. ರವಿ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಬೇಕು

ಬಳ್ಳಾರಿ:29ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಿ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಮಾಜಿ ಸಚಿವ ಸಿ.ಟಿ. ರವಿ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಬೇಕು. ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಸಿ.ಟಿ. ರವಿ ಹೋದಲೆಲ್ಲ ಭೋವಿ ಸಮಾಜದ ವತಿಯಿಂದ ಘೇರಾವ್ ಹಾಕಲಾಗುವುದು ಎಂದು ವಿಜಯನಗರ ಜಿಲ್ಲಾ ಭೋವಿ ಸಮಾಜದ ಮುಖಂಡರಾದ ಪಿ. ಬಾಬು, ವಿ.ಸೋಮಪ್ಪ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಸಚಿವ ಶಿವರಾಜ್ ತಂಗಡಿ ಅವರು ಸಹಜವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಫಲ್ಯದ ಬಗ್ಗೆ ಮಾತನಾಡಿದ್ದಾರೆ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ, ನರೇಗಾ ಯೋಜನೆ ವೈಫಲ್ಯದ ಬಗ್ಗೆಯೂ ಮಾತನಾಡಿದ್ದಾರೆ. ಉತ್ತರ ಕರ್ನಾಟಕ ಭಾಷಾ ಧಾಟಿಯಲ್ಲಿ ಟೀಕಿಸಿದ್ದಾರೆ. ಯುವಕರಿಗೆ ಮೋದಿ ಅವರು ಉದ್ಯೋಗ ಕೊಡುತ್ತೇವೆ ಎಂದು ಮೋಸ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ. ಆದರೆ, ಮಾಜಿ ಸಚಿವ ಸಿ.ಟಿ. ಅವರು ಶಿವರಾಜ್ ತಂಗಡಿ ಅವರ ಪೂರ್ಣ ಭಾಷಣದ ವಿಡಿಯೋ ನೋಡದೇ, ಒಂದು ವಿಡಿಯೋ ತುಣಕು ನೋಡಿ, ಅವರ ತಾಯಿಗೆ ಅವಮಾನ ಮಾಡಿದ್ದಾರೆ. ಇದು ಸಿ.ಟಿ. ರವಿ ಸಂಸ್ಕಾರ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಚಿವ ಶಿವರಾಜ್ ತಂಗಡಿ ಅವರ ತಾಯಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಸಿ.ಟಿ. ರವಿ ಈ ನಾಡಿನ ಭೋವಿ ಸಮಾಜದವರ ಕ್ಷಮೆಯಾಚಿಸಬೇಕು. ಸಚಿವ ತಂಗಡಿಯವರ ತಾಯಿ ಕಾಲಿಗೆ ಬಿದ್ದು ಕ್ಷಮೆಯಾಚಿಸಬೇಕು. ಈಗಾಗಲೇ ಸಿ.ಟಿ. ರವಿಗೆ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಸೋಲಾಗಿದೆ. ಅವರು ಎಲ್ಲಿಯೇ ಚುನಾವಣೆ ನಿಲ್ಲಲಿ ಭೋವಿ ಸಮಾಜ ಅವರ ವಿರುದ್ಧ ಪ್ರಚಾರ ನಡೆಸಲಿದೆ. ಲೋಕಸಭಾ ಚುನಾವಣೆಯಲ್ಲಿ ಪ್ರಚಾರಕ್ಕೆ ಬಂದರೇ ಘೇರಾವ್ ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ. 


ಸುದ್ದಿ ಓದಿ