ಇಂಡಿ

ಮಾಜಿ ಶಾಸಕ ರವಿಕಾಂತ ಪಾಟೀಲ ಜೆಡಿಎಸ್‍ಗೆ ಸೇರ್ಪಡೆ

ಮಾಜಿ ಶಾಸಕ ರವಿಕಾಂತ ಪಾಟೀಲ ಜೆಡಿಎಸ್‍ಗೆ ಸೇರ್ಪಡೆ

ಇಂಡಿ 26:  ನಾನು ಶಾಸಕನಾಗಿದ್ದಾಗ  ದೇವೇಗೌಡರು ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಗಳಾಗಿದ್ದರು ಆಗ ಇಂಡಿ ತಾಲೂಕಿನ ನೀರಾವರಿ ಯೋಜನೆ ಕಾರ್ಯರೂಪಕ್ಕೆ ತರಲು ಶ್ರಮಿಸಿದೆ.ಇಂಡಿ ತಾಲೂಕಿಗೆ ಜೆಡಿಎಸ್ ಪಕ್ಷದ ಕೊಡುಗೆ ಅಪಾರವಿದೆ ಮಾಜಿ ಶಾಸಕ ರವಿಕಾಂತ ಪಾಟೀಲರು ಹೇಳಿದರು.

ತಾಲೂಕಿನ ಜೆಡಿಎಸ್ ಕಾರ್ಯಾಲಯದಲ್ಲಿ ಮಾಜಿ ಶಾಸಕ ರವಿಕಾಂತ ಪಾಟೀಲರು  ಜೆಡಿಎಸ್  ಪಕ್ಷಕ್ಕೆ ಸೇರ್ಪಡೆಯಾಗಿದ್ದಕ್ಕೆ ಇಂಡಿ ತಾಲೂಕ ಜೆಡಿಎಸ್ ಅಧ್ಯಕ್ಷ ಬಿ ಡಿ ಪಾಟೀಲರು ಹಾಗೂ ಜೆಡಿಎಸ್ ಕಾರ್ಯಕರ್ತರು ಸ್ವಾಗತಿಸಿ ಸನ್ಮಾನಿಸಿದರು.

ಜೆಡಿಎಸ್ ಅಧ್ಯಕ್ಷ ಬಿ ಡಿ ಪಾಟೀಲ ಮಾತನಾಡುತ್ತಾ ರವಿಕಾಂತ ಪಾಟೀಲರು ಪಕ್ಷಕ್ಕೆ ಬಂದದ್ದು ಆನೆ ಬಲ ಬಂದಂತಾಗಿದೆ ಎಂದು ಮಾತನಾಡಿದರು. 

ಮಂಜುನಾಥ ಕಾಮಗೋಂಡ, ಶೈಲಗೌಡ ಪಾಟೀಲ, ಸಿದ್ದು ಡಂಗಾ, ನಾನಾಗೌಡ ಪಾಟೀಲ,ಹಣಮಂತ ಹೂನ್ನಳಿ, ಮಹಿಬೂಬ ಬೇವನೂರ, ಬಸವರಾಜ ಹಂಜಗಿ.ಶಿವಯೋಗಿ ಡೋಮನಾಳ, ಭೀಮ ಪೂಜಾರಿ.ದುಂಡು ಬಿರಾದಾರ.ಶರಣು ಡಂಗಿ, ಬಸವರಾಜ ಇಂಡಿ, ಶ್ರೀಶೈಲ ಪಾಯಕರ, ಬಾಳು ರಾಠೋಡ, ಭೀಮ ಹೂನಗೋಂಡ, ಬಸವರಾಜ ಕವಡಿ ಬಸಗೋಂಡ ಪಾಟೀಲ ಶ್ರೀಕಾಂತ್ ಪೂಜಾರಿ, ಫಜಲು ಮುಲ್ಲಾ ಸೇರಿದಂತೆ ಮುಂತಾದ ಮುಖಂಡರು ಉಪಸ್ಥಿತರಿದ್ದರು. 

ಆಫನಥmಫನ ಕ್ಯಾಪ್ಸನ್26-01: ತಾಲೂಕಿನ ಜೆಡಿಎಸ್ ಕಾರ್ಯಾಲಯದಲ್ಲಿ ಮಾಜಿ ಶಾಸಕ ರವಿಕಾಂತ ಪಾಟೀಲರು  ಜೆಡಿಎಸ್  ಪಕ್ಷಕ್ಕೆ ಸೇರ್ಪಡೆಯಾಗಿದ್ದಕ್ಕೆ ಇಂಡಿ ತಾಲೂಕ ಜೆಡಿಎಸ್ ಅಧ್ಯಕ್ಷ ಬಿ ಡಿ ಪಾಟೀಲರು ಹಾಗೂ ಜೆಡಿಎಸ್ ಕಾರ್ಯಕರ್ತರು ಸ್ವಾಗತಿಸಿ ಸನ್ಮಾನಿಸುತ್ತಿರುವುದು.

ಸುದ್ದಿ ಓದಿ