ಬೆಳಗಾವಿಯಲ್ಲಿ ಗೋವಾ ಮಾಜಿ ಶಾಸಕನ ಮೇಲೆ ಮಾರಣಾಂತಿಕ ಹಲ್ಲೆ, ಸಾವು

ಬೆಳಗಾವಿಯಲ್ಲಿ ಗೋವಾ ಮಾಜಿ ಶಾಸಕನ ಮೇಲೆ ಮಾರಣಾಂತಿಕ ಹಲ್ಲೆ, ಸಾವು

ಬೆಳಗಾವಿ : ಗೋವಾ ರಾಜ್ಯದ ಶಾಸಕರೋಬ್ಬರ ಮೇಲೆ ಕ್ಷುಲ್ಲಕ‌ ಕಾರಣದಿಂದ ಮಾರಾಂತಿಕ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಮೃತಪಟ್ಟಿರುವ ಘಟನೆ ಬೆಳಗಾವಿ ನಗರದಲ್ಲಿ ಶನಿವಾರ ನಡೆದಿದೆ. 

      ಬೆಳಗಾವಿಯ ಖಡೇಬಜಾರ್ ಮಾತುಕಟ್ಟೆಯ ಶ್ರೀನಿವಾಸ ವಸತಿ ಗೃಹ (ಲಾಡ್ಜ್) ಈ ಘಟನೆ ನಡೆದಿದೆ. ಅಟೊ ಚಾಲಕ ಹಾಗೂ ಗೋವಾ ರಾಜ್ಯದ ಮಾಜಿ ಶಾಸಕ ಲಾವು ಮಾಮಲೇದಾರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಮಾತಿನ ಚಕಮಕಿ ನಡೆದು ಕೊನೆಯಲ್ಲಿ ಅಟೋ ಚಾಲಕನಿಂದ ಗೋವಾ ಮಾಜಿ ಶಾಸಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಗೋವಾ ಮಾಜಿ ಶಾಸಕ ಕುಸಿದು ಬಿದ್ದು ಸ್ಥಳದಲ್ಲಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

   ಸ್ಥಳದಲ್ಲೇ ಮೃತಪಟ್ಟ ಗೋವಾದ ಮಾಜಿ ಶಾಸಕ ಲಾವೂ ಮಾಮಲೇದಾರ್ (69). ಬೆಳಗಾವಿಯ ಖಡೇಬಜಾರ್ ನಲ್ಲಿ ಇರೋ ಶ್ರೀನಿವಾಸ ಲಾಡ್ಜ್ ಎದುರು ಘಟನೆ.

   ಗೋವಾದ ಪೋಂಡಾ ಕ್ಷೇತ್ರದ ಶಾಸಕರಾಗಿದ್ದ ಲಾವೂ ಮಾಮಲೇದಾರ್. ಖಡೇಬಜಾರ್ ಬಳಿ ಮಾಜಿ ಶಾಸಕರ ಕಾರು ಟಚ್ ಆದ ಹಿನ್ನೆಲೆ.ಬಳಿಕ ಶ್ರೀನಿವಾಸ ಲಾಡ್ಜ್ ಕಡೆಗೆ ಬಂದಿದ್ದ ಲಾವೂ ಮಾಮಲೇದಾರ್. ಆಗ ಲಾಡ್ಜ್ ಎದುರು ಬಂದು ಮಾಜಿ ಶಾಸಕನ ಮೇಲೆ ಚಾಲಕನಿಂದ ಮಾರಣಾಂತಿಕ ಹಲ್ಲೆ ನಡೆದಿದೆ.

   ಹಲ್ಲೆಗೆ ಮೃತಪಟ್ಟ ಲಾವೂ ಮಾಮಲೇದಾರ್. ಲಾವೂ ಮಾಮಲೇದಾರ್ ಮೃತ ದೇಹ ಬೆಳಗಾವಿ ಬಿಮ್ಸ್‌ಗೆ ರವಾನೆ ಮಾಡಲಾಗಿದೆ.ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದ ಮಾರ್ಕೆಟ್ ಠಾಣೆ ಪೊಲೀಸರು. ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ ಭೇಟಿ, ಪರಿಶೀಲನೆ ನಡೆಸಿದ್ದಾರೆ.


ಸುದ್ದಿ ಓದಿ