ಗೌಳಿವಾಡ ಗ್ರಾಮದಲ್ಲಿ ಮನೆಗಳ ಮೇಲೆ ಅರಣ್ಯ ಅಧಿಕಾರಿಗಳ ದಾಳಿ : ಸಾಗವಾನಿ ಕಟ್ಟಿಗೆ, ಕಾಡು ಹಂದಿ ಮಾಂಸ ವಶಕ್ಕೆ

ಗೌಳಿವಾಡ ಗ್ರಾಮದಲ್ಲಿ ಮನೆಗಳ ಮೇಲೆ ಅರಣ್ಯ ಅಧಿಕಾರಿಗಳ ದಾಳಿ : ಸಾಗವಾನಿ ಕಟ್ಟಿಗೆ, ಕಾಡು ಹಂದಿ ಮಾಂಸ ವಶಕ್ಕೆ

ಬೆಳಗಾವಿ : ಜಿಲ್ಲೆಯ ಖಾನಾಪೂರ ತಾಲೂಕಿನ ಗೌಳಿವಾಡ (ಕೃಷ್ಣಾ ನಗರ) ಗ್ರಾಮದ ಕೆಲ ಮನೆಗಳ ಮೇಲೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ಸಾವಿರಾರು ಮೌಲ್ಯದ ಸಾಗವಾನಿ ಕಟ್ಟಿಗೆ ಹಾಗೂ ಅಲ್ಪ‌ಪ್ರಮಾಣದ ಕಾಡು ಹಂದಿ ಮಾಂಸವನ್ನು ವಶಪಡಿಸಿ, ಮೂವರನ್ನು ಬಂಧಿಸಿರುವ ಘಟನೆ ನಡೆದಿದೆ. 

    ಖಾನಾಪೂರ ತಾಲೂಕಿನ ಗೌಳಿವಾಡ (ಕೃಷ್ಣಾ ನಗರ) ದಲ್ಲಿ ಖಚಿತ ಮಾಹಿತಿ‌ ಮೇರೆಗೆ ಬೆಳಗಾವಿ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಮಂಜುನಾಥ ಚವ್ಹಾಣ ಇವರ ನಿರ್ದೇಶನದಂತೆ ಎಸ್.ಕೆ.ಕಲ್ಲೋಳಿಕರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಬೆಳಗಾವಿ ವಿಭಾಗ, ಎಮ್.ಬಿ.ಕುಸನಾಳ ಸಹಾಯಕಅರಣ್ಯ ಸಂರಕ್ಷಣಾಧಿಕಾರಿಗಳು ನಾಗರಗಾಳಿ ಉಪ ವಿಭಾಗ ಇವರ ಮಾರ್ಗದರ್ಶನದ ಮೆರೆಗೆ ರತ್ನಾಕರ ಒಬಣ್ಣವರ ವಲಯ ಅರಣ್ಯಾಧಿಕಾರಿ ನಾಗರಗಾಳಿ ಇವರ ನೆತೃತ್ವದಲ್ಲಿ ಕುಂಬಾರ್ಡಾ ಶಾಖೆಯ ಸಿಬ್ಬಂದಿಗಳು ಮತ್ತು ವಲಯದ ಸಿಬ್ಬಂದಿಗಳು ತಂಡವನ್ನು ರಚಿಸಿ ಖಚಿತ ಮಾಹಿತಿ ಮೆರೆಗೆ ನಾಗರಗಾಳಿ ವಲಯದ ಕುಂಬಾರ್ಡಾ ಶಾಖೆಯ ಕೃಷ್ಣಾ ನಗರ (ಗೌಳಿವಾಡ)ದಲ್ಲಿರುವ ಗಂಗಾರಾಮ ದಾವು ಬೋಡಕೆ ಇವರ ಮನೆಯಲ್ಲಿ ತಪಾಸಣೆ ನಡೆಸಿದಾಗ ಇವರ ಮನೆಯಲ್ಲಿದ್ದ ಸಾಗವಾನಿಯ 6 ನಗಗಳನ್ನು ( 7,088 ಘನ ಸೂಟ್) ಕಟ್ಟಿಗೆ ಮತ್ತು ಅಂದಾಜು 500 ಗ್ರಾಂ ರಷ್ಟು ಬೆಯಿಸಿದ ಕಾಡುಹಂದಿ ಮಾಂಸವನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಲಾಗಿರುತ್ತದೆ.

    ಅದೇ ರೀತಿ ದೊಂಡು ಗಾವಡೆ (ಸಾ.ಕೃಷ್ಣಾ ನಗರ) ಇವರ ಮನೆ ಮೇಲೆ ದಾಳಿ ಮಾಡಿ ಅವರ ವನೆಯಲ್ಲಿದ್ದ ಸಾಗವಾನಿಯ 10 ತುಂಡಗಳನ್ನು (3.463ಘನ ಫೂಟ್) ಕಟ್ಟಿಗೆ ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಲಾಗಿರುತ್ತದೆ.   ಅದೇ ಸಮಯದಲ್ಲಿ ಜ್ಞಾನೆಶ್ವರ ಬಮ್ಮು ವರಕ (ಸಾ. ಕೃಷ್ಣಾ ನಗರ) ಇವರ ಮನೆ ಮೇಲೆ ದಾಳಿ ಮಾಡಿ ಅವರ ಮನೆಯಲ್ಲಿದ್ದ ಸಾಗವಾನಿಯ 71 ಸೋಪಾ ಪಟ್ಟಿಗಳನ್ನು ವಶಕ್ಕೆ ತಗೆದುಕೊಂಡು ಪ್ರಕರಣ ದಾಖಲಿಸಲಾಗಿರುತ್ತದೆ. ಸದರಿ ಪ್ರಕರಗಳ ಕುರಿತು ತನಿಖೆ ಮುಂದುವರಿಸಲಾಗಿದೆ.

  ಈ ಸಂದರ್ಭದಲ್ಲಿ ಎಮ್.ಎಸ್.ಲಚ್ಯಾಣ ಉಪ ವಲಯ ಅರಣ್ಯಾಧಿಕಾರಿ, ಕೆ.ಎಮ್.ತನಂಗಿ ಉಪ ವಲಯ ಅರಣ್ಯಾಧಿಕಾರಿ, ಎಮ್.ಬಿ. ಮೆಟಗುಡ್ ಉಪ ವಲಯ ಅರಣ್ಯಾಧಿಕಾರಿ, ಹಾಗೂ ಘಸ್ತು ಅರಣ್ಯ ಪಾಲಕರಾದ ಫಕಿರಪ್ಪ ಬಾಂಗಿ ಪ್ರಧಾನಿ ಸಿಂಗೆ, ಪುಂಡಲಿಕ ಲಾಡ, ಅರಣ್ಯ ವೀಕ್ಷಕ ಲಕ್ಷ್ಮಣ ದೆವರಕೊಂಡ ಈ ಸಿಬ್ಬಂದಿಗಳು ದಾಳಿಯಲ್ಲಿ ಬಾಗವಹಿಸಿದ್ದರು.

ಸುದ್ದಿ ಓದಿ