ಬಳ್ಳಾರಿ

ಗಂಗಾವತಿ-ದರೋಜಿ ಸಂಪರ್ಕಿಸುವ ರೈಲ್ವೆ ಕಾಮಗಾರಿ ಆರಂಭಿಸಿಲು ಒತ್ತಾಯ

ಗಂಗಾವತಿ-ದರೋಜಿ ಸಂಪರ್ಕಿಸುವ ರೈಲ್ವೆ ಕಾಮಗಾರಿ ಆರಂಭಿಸಿಲು ಒತ್ತಾಯ

ಕಂಪ್ಲಿ25:  ಈಶಾನ್ಯ ಪದವೀಧರ ವಿಧಾನಪರಿಷತ್ ಚುನಾವಣೆಯ ಹಿನ್ನಲೆಯಲ್ಲಿ, ಗಂಗಾವತಿಯ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಇಲಾಖೆ ಸಚಿವ ಪ್ರಹ್ಲಾದ್ ಜೋಷಿಗೆ ಕಂಪ್ಲಿ ತಾಲೂಕು ರೈಲ್ವೆ ಮಾರ್ಗಕ್ಕಾಗಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಶುಕ್ರವಾರ ಮನವಿ ಸಲ್ಲಿಸಿದರು.   

ಕಂಪ್ಲಿ ತಾಲೂಕು ರೈಲ್ವೆ ಮಾರ್ಗಕ್ಕಾಗಿ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಮಾತನಾಡಿ, ಕಂಪ್ಲಿ ಮೂಲಕ ಗಂಗಾವತಿ-ದರೋಜಿ ಸಂಪರ್ಕಿಸುವ ರೈಲ್ವೆ ಬ್ರಾಡ್‌ಗೇಜ್ ಕಾಮಗಾರಿಯ ಸರ್ವೇ ಕಾರ್ಯ ಮುಗಿದಿದ್ದು, 30ಕಿ.ಮೀ.ರೈಲ್ವೆ ಮಾರ್ಗಕ್ಕಾಗಿ ಅಂದಾಜು ವೆಚ್ಚ 982 ಕೋಟಿ ರೂಪಾಯಿಗಳಲ್ಲಿ ಕಾಮಗಾರಿ ನಿರ್ವಹಿಸಲು ಯೋಜಿಸಿದೆ. ಅಂದಾಜು ವೆಚ್ಚ ಕಡತ ವಿಲೇವಾರಿ ಬಗ್ಗೆ ಗಮನಹರಿಸಿ ಕೂಡಲೇ ರೈಲ್ವೆ ಸಂಪರ್ಕ ಕಾಮಗಾರಿ ಆರಂಭಿಸುವಂತೆ ತಾವು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು. ಮನವಿ ಸಲ್ಲಿಸುವಲ್ಲಿ ಕಂಪ್ಲಿ ತಾಲೂಕು ರೈಲ್ವೆ ಮಾರ್ಗಕ್ಕಾಗಿ ಕ್ರಿಯಾ ಸಮಿತಿ ಉಪಾಧ್ಯಕ್ಷ ನಾರಾಯಣ ಇಂಗಳಗಿ, ಕಾರ್ಯದರ್ಶಿ ಹಾದಿಮನಿ ಕಾಳಿಂಗವರ್ಧನ ಇತರರಿದ್ದರು. 


ಸುದ್ದಿ ಓದಿ