ಮಹಲಿಂಗಪುರ

ಕೊಟ್ಟೂರಿನಲ್ಲಿ ನ್ಯಾಯಾಲಯ ಸ್ಥಾಪಿಸಲು ಒತ್ತಾಯ

ಕೊಟ್ಟೂರಿನಲ್ಲಿ ನ್ಯಾಯಾಲಯ ಸ್ಥಾಪಿಸಲು ಒತ್ತಾಯ

ಕೊಟ್ಟೂರು 21 : ಕೊಟ್ಟೂರು ತೀವ್ರವಾಗಿ ಬೆಳೆಯುತ್ತಿದ್ದು, ಅಭಿವೃದ್ದಿಯಲ್ಲಿ ಬಹಳ ಹಿಂದೆ ಬಿದ್ದಿದೆ, ವಾಣಿಜ್ಯ ನಗರಿ ಶೈಕ್ಷಣಿಕ ನಗರಿ ಎಂಬ ಹೆಗ್ಗಳಿಕೆ ಹೊಂದಿದೆ. ಈಗಾಗಲೇ ಕೊಟ್ಟೂರು ತಾಲ್ಲೂಕು ಕೇಂದ್ರವಾಗಿ ಹತ್ತು ವರ್ಷಗಳಿಗಿಂತಲೂ ಹೆಚ್ಚಾಗಿದ್ದು, ಇದುವರೆಗೂ ಇಲ್ಲಿ ನ್ಯಾಯಾಲಯ ಸ್ಥಾಪನೆಯಾಗಿಲ್ಲ,  ಇದನ್ನು ಮನಗಂಡು ಭಾನುವಾರ ಕೊಟ್ಟೂರಿನ ಪ್ರವಾಸಿ ಮಂದಿರದಲ್ಲಿ 70 ಕ್ಕೂ ಹೆಚ್ಚು ವಕೀಲರು ಸಭೆ ಸೇರಿದ್ದರು.  

ಸಾರ್ವಜನಿಕರು ಸಹ ಒತ್ತಾಯ ಮಾಡಿದ್ದು,  ಸರ್ಕಾರದ ಮೇಲೆ ತೀವ್ರ ಒತ್ತಡ ತಂದು ಶೀಘ್ರದಲ್ಲೇ ಬೆಂಗಳೂರಿಗೆ ನಿಯೋಗ ಹೋಗಿ ಕಾನೂನು ಸಚಿವರು ಹಾಗೂ ಕ್ಷೇತ್ರದ ಶಾಸಕರಾದ ನೇಮಿರಾಜ್ ನಾಯ್ಕ ರವರ ಗಮನ ಸೆಳೆದು ಕೂಡಲೇ ಕೊಟ್ಟೂರು ವಾಣಿಜ್ಯ ನಗರಿಯಲ್ಲಿ ನ್ಯಾಯಾಲಯ ಸ್ಥಾಪಿಸಲು ಪ್ರಕ್ರಿಯೆ ಪ್ರಾರಂಭಿಸುವಂತೆ  ಒತ್ತಡ ತರಬೇಕೆಂದು ಸಾರ್ವಜನಿಕರು ವಕೀಲರಲ್ಲಿ ಮನವಿ ಮಾಡಿದ್ದಾರೆ. 

ಇದೇ ಸಂಧರ್ಭದಲ್ಲಿ ತಾಲೂಕು ವಕೀಲರ ನ್ಯಾಯಾಲಯ ಹೋರಾಟ ಸಮಿತಿ ರಚಿಸಿಕೊಂಡಿದ್ದು, ಅಧ್ಯಕ್ಷರನ್ನಾಗಿ ಉಜ್ಜಿನಿ ಗ್ರಾಮದ ಹಿರಿಯ ನ್ಯಾಯಾವಾದಿಗಳು ಹಾಗೂ ರಾಜಕೀಯ ಮುಖಂಡರಾದ ಎಂ. ಗುರುಸಿದ್ದನಗೌಡ ಇವರನ್ನು ನೇಮಕ ಮಾಡಲಾಯಿತು, ನಂತರ ಪದಾಧಿಕಾರಿಗಳನ್ನು ಅಯ್ಕೆ ಮಾಡಿಕೊಂಡು ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ ಗುರುಸಿದ್ದನಗೌಡ, ಕೊಟ್ಟೂರು ನಗರದಲ್ಲಿ ನ್ಯಾಯಾಲಯದ ಅವಶ್ಯಕತೆ ತೀವ್ರವಾಗಿದ್ದು, ಈ ಭಾಗದ ಅನೇಕು ವಕೀಲರು ದಿನಪ್ರತಿ ಕೂಡ್ಲಿಗಿ ನ್ಯಾಯಾಲಯಕ್ಕೆ ಹೋಗುತ್ತಿದ್ದು, ದಿನದಿಂದ ದಿನಕ್ಕೆ ಕೇಸ್ ಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ದೊಡ್ಡ ತಾಲ್ಲೂಕು ಆಗಿರುವುದರಿಂದ ಒಂದೇ ಬೆಂಚ್ ಮೇಲೆ ತೀವ್ರ ಒತ್ತಡ ಬೀಳುತ್ತಿದ್ದು, ಸಾರ್ವಜನಿಕರಿಗೆ ಅನಾನುಕೂಲವಾಗಿ ದಿನ ಪ್ರತಿ ಕೂಡ್ಲಿಗಿ ತಾಲ್ಲೂಕಿನ ಕೊನೆ ಭಾಗದಿಂದ ಅಲೆದಾಡುವ ಪರಸ್ಥಿತಿ ನಿರ್ಮಾಣವಾಗಿದ್ದು, ಇದನ್ನು ಮನಗಂಡು ಶೀಘ್ರದಲ್ಲೇ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ ಬಳ್ಳಾರಿ ಹಾಗೂ ಜಿಲ್ಲಾ ಆಡಳಿತ್ಮಾಕ ನ್ಯಾಯಾಧೀಶರಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಹಾಗೂ ನ್ಯಾಯಾಲಯ ಸ್ಥಾಪನೆಯಾಗುವರೆಗೂ ಹೋರಾಟ ನಿಲ್ಲದುಯೆಂದು ತೀರ್ಮಾನಿಸಲಾಯಿತು.  

 ಇದೇ ಸಂದರ್ಭದಲ್ಲಿ ಸಮಿತಿಯನ್ನು ರಚಿಸಲಾಯಿತು ಉಪಾಧ್ಯಕ್ಷರಾಗಿ ವಕೀಲರು ಮಾಜಿ ಪ.ಪಂ. ಸದಸ್ಯರು,  ಪಿ. ಪ್ರಭುದೇವ, ಕಾರ್ಯದರ್ಶಿಗಳಾಗಿ ವಕೀಲರು ಪಟ್ಟಣ ಪಂಚಾಯ್ತಿ ಸದಸ್ಯರಾದ  ಶಿವಾನಂದ ಬಾವಿಕಟ್ಟೆ ,  ಜಂಟಿ ಕಾರ್ಯದರ್ಶಿಗಳಾಗಿ ಗುರುಬಸವರಾಜ.ಕೆ.  ಟಿ.ಹನುಮಂತಪ್ಪ , ಖಜಾಂಚಿಯಾಗಿ ಹಿರಿಯ ನ್ಯಾಯವಾದಿಗಳಾದ ಟಿ.ಯಂ. ಸೋಮಯ್ಯ,  ಸಭೆಯಲ್ಲಿ ವಕೀಲರುಗಳಾದ ನಾಗರಾಜ್, ನಾಗನಗೌಡ, ಲಿಂಗರಾಜ್, ಎಸ್‌.ಎಂ. ಶಿವಪ್ರಕಾಶ್, ಟಿ.ರಮೇಶ್, ಹೆಚ್‌.ರವಿ, ಸಿದ್ದವೀರ​‍್ಪ. ನಾಗರಾಜ್, ಕರಿಬಸವರಾಜ, ಮದ್ದಾನಪ್ಪ, ಕೊಟ್ರೇಶ್, ಹನುಮಂತಪ್ಪ, ಪ್ರಕಾಶ್, ಕಾಳಾಚಾರಿ, ನಾಗಪ್ಪ, ಸಿದ್ದೇಶ್ ಗುರುಪ್ರಸಾದ್, ಮಂಜುನಾಥಗೌಡ, ಬಸವರಾಜ, ಜಯಶ್ರೀ , ನೇತ್ರಾವತಿ, ಡಿ.ಚೈತ್ರ, ಮಂಜುಳ ಸೇರಿದಂತೆ ಅನೇಕ ವಕೀಲರು ಇದ್ದು, ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. 


ಸುದ್ದಿ ಓದಿ