ಅಂಗನವಾಡಿ ನಿವೃತ್ತ ನೌಕರರಿಗೆ ಉಪಧನ ಪರಿಹಾರ ಒದಗಿಸಲು ಒತ್ತಾಯ
ಬಳ್ಳಾರಿ, ಡಿ.10: ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರಾಗಿ ಹತ್ತಾರು ವರ್ಷಗಳ ಕಾಲ ಸೇವೆ ಸಲ್ಲಿಸಿ, ವಯೋ ನಿವೃತ್ತಿ ಹೊಂದಿದ ತಾಯಂದಿರಿಗೆ ಉಪಧನ ಪರಿಹಾರ ಒದಗಿಸಬೇಕೆಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ಸದರಿ ಆದೇಶದನ್ವಯ ಪ್ರಸ್ತುತ ಹಣಕಾಸು ವರ್ಷದಿಂದಲೇ (2023-24) ನಿವೃತ್ತಿ ಹೊಂದಿದವರಿಗೆ ಉಪಧನ ಪರಿಹಾರ ಒದಗಿಸಬೇಕೆಂದು ಸರ್ಕಾರ ಅಧಿಸೂಚನೆ ಹೊರಡಿಸಿತು. (ಓಠಜಿಛಿಚಿಣಠ ಜಚಿಣಜಜ 04.02.2023) ಆದರೆ ನಂತರ ಬಂದಂತಹ ಸಿದ್ದರಾಮಯ್ಯ ಸರ್ಕಾರ ಈ ಕುರಿತು ಯಾವುದೇ ಕ್ರಮ ಕೈಗೊಳ್ಳದೇ ಇರುವ ಬಗ್ಗೆ ಸರ್ಕಾರಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿ ಸಭೆ ಅಧ್ಯಕ್ಷತೆ ವಹಿಸಿದ ಎ.ಆರ್.ಎಂ.ಇಸ್ಮಾಯಿಲ್ ಅವರು ಮಾತನಾಡಿದರು.
ಸಭೆಯಲ್ಲಿ ಎರಡೂ ಜಿಲ್ಲೆಗಳಲ್ಲಿ ಇರುವ ನಿವೃತ್ತ ನೌಕರರನ್ನು ಪತ್ತೆ ಮಾಡಿ ಅವರಿಗೆ ಉಪಧನ ಪರಿಹಾರ ಕೊಡಿಸುವುದು ಸೇರಿದಂತೆ ಮತ್ತು ಪ್ರತ್ಯೇಕ ತಾಲ್ಲೂಕುವಾರು ಸಂಘಟನೆ ಮಾಡಬೇಕೆಂದು ಸಭೆಯಲ್ಲಿ ನಿರ್ಣಯಿಸಲಾಗಿದೆ. ಪ್ರಧಾನ ಕಾರ್ಯದರ್ಶಿ ಮಂಗಮ್ಮ ಸ್ವಾಗತ ಕೋರಿದರು. ಸಂಘದ ಅಧ್ಯಕ್ಷ ಆರ್ಕಾಣಿ ನಿವೃತ್ತ ನೌಕರರಿಗೆ ಸವಲತ್ತುಗಳು ಒದಗಿಸಲು ವ್ಯಾಪಕ ಹೋರಾಟ ಮಾಡಬೇಕಾದ ಅವಶ್ಯಕತೆ ಕುರಿತು ಮಾತನಾಡಿದರು. ಸಭೆಯಲ್ಲಿ ಸಂಘದ ಜಿಲ್ಲಾ ಸಮಿತಿ ಸದಸ್ಯರಾದ ಎರೆ್ರಮ್ಮ, ಕಲಾವತಿ ಇನ್ನಿತರರು ಉಪಸ್ಥಿತರಿದ್ದರು. ್ಲ ನಿವೃತ್ತ ಅಂಗನವಾಡಿ ನೌಕರರ ಒಕ್ಕೂಟ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಅಧ್ಯಕ್ಷರಾಗಿ ನಾಗರತ್ನಮ್ಮ ಸಂಡೂರು, ಉಪಾಧ್ಯಕ್ಷರು ಶಾಂತ ಪಾಟೀಲ್ ಬಳ್ಳಾರಿ, ಪ್ರಧಾನ ಕಾರ್ಯದರ್ಶಿ ಮಾಕನಡುಕು ತಿಪ್ಪಮ್ಮ ಕೂಡ್ಲಿಗಿ, ಖಜಾಂಚಿಯಾಗಿ ಮಂಗಳ ಸುವರ್ಣ, ಸಹ ಕಾರ್ಯದರ್ಶಿಯಾಗಿ ಜೋಳದ ಕೂಡ್ಲಿಗಿ ನಾಗರತ್ನ, ಸಂಚಾಲಕರಾಗಿ ಅನ್ನಪೂರ್ಣ ಚಿಕ್ಕಸಂಡೂರು ಸೇರಿದಂತೆ ನಾಗರತ್ನಮ್ಮ, ಸರೋಜಮ್ಮ, ಚಂದ್ರಮತಿ, ರಮಾದೇವಿ, ಸುನೀತ, ಕೆ.ಲಲಿತ, ಗೌರಮ್ಮ, ಸುಜಾರತ, ಸಂಪತ್ತು ಭಾಗ್ಯಲಕ್ಷ್ಮಿ ವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.