ಸಿ. ಎಂ. ಹುರಕಡ್ಲಿ ಪೌಂಡೇಶನ್ನಿಂದ ಆಹಾರ ಸಾಮಗ್ರಿ ವಿತರಣೆ
ಮಹಾಲಿಂಗಪುರ 15: ಚನ್ನಬಸು ಹುರಕಡ್ಲಿಯವರು ಒಂದು ಸರ್ಕಾರ ಮಾಡಬಹುದಾದ ಕೆಲಸ ಮಾಡುವುದರೊಂದಿಗೆ ಒಂದು ಶಕ್ತಿಯಾಗಿ ಹೊರಹೊಮ್ಮಿ, ಇತರರಿಗೆ ಮಾದರಿಯಾಗಿದ್ದಾರೆ ಎಂದು ಅವರ ಕಾರ್ಯ ಶೈಲಿಯನ್ನು ಪ್ರಶಂಸಿಸುತ್ತಾ ಪುರಸಭಾ ಸದಸ್ಯ ಜಾವೇದ್ ಭಾಗವಾನ ಹೇಳಿದರು.
ಸ್ಥಳೀಯ ಬಸವನಗರದ 6ನೇ ವಾರ್ಡಿನ ಸುಮಾರು 100 ಕ್ಕೂ ಹೆಚ್ಚು ನೇಕಾರ ಹಾಗೂ ಬಡ ಕುಟುಂಬಗಳಿಗೆ ರವಿವಾರ ದಿವಸ ಪುರಸಭಾ ಮಾಜಿ ಉಪಾಧ್ಯಕ್ಷ ಚನ್ನಬಸು ಹುರಕಡ್ಲಿಯವರ ಸಿ. ಎಂ. ಹುರಕಡ್ಲಿ ಪೌಂಡೇಶನ್ ವತಿಯಿಂದ ಒಂದು ವಾರಕ್ಕಾಗುವಷ್ಟು ಆಹಾರ ಸಾಮಗ್ರಿಗಳ ಕಿಟ್ ನೊಂದಿಗೆ 20ಲೀಟರ್ ನೀರಿನ ಕ್ಯಾನ್, ಕಸದ ಡಬ್ಬಿ, ಕಷಾಯ ಪುಡಿ, ಕನೇರಿಮಠದ ಸಿದ್ಧೌಷಧ, ಸ್ಯಾನಿಟೈಸರ್, ಮಾಸ್ಕ್ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಜಿಲ್ಲಾ ಹಿಂದುಳಿದ ವರ್ಗದ ಉಪಾಧ್ಯಕ್ಷ ಮಲ್ಲಪ್ಪ ಬಾವಿಕಟ್ಟಿ ಹಾಗೂ ಸೈದಾಪುರ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ ಸನದಿ ಮಾತನಾಡಿ ಸಮಾಜದಲ್ಲಿ ಸಂಕಷ್ಟದಲ್ಲಿರುವ ಫಲಾನುಭವಿಗಳಿಗೆಯೇ ಸಹಾಯ ಸಹಕಾರ ನೀಡುತ್ತಿರುವುದು ಎಲ್ಲರೂ ಮೆಚ್ಚುವಂತ ಕೆಲಸವೇ ಆಗಿದೆ. ಇದಕ್ಕೂ ಮೊದಲು ಕೊರೋನಾ ಉಲ್ಬಣಗೊಂಡು ಜನರು ಸಂಕಷ್ಟಕ್ಕೆ ಒಳಗಾದಾಗ ಅವರಿಗೆ ಪ್ರಾಥಮಿಕ ಹಂತದ ಮಾತ್ರೆಗಳ ಕಿಟ್ ವಿತರಿಸಿ ಹಾಗೂ ಅವಶ್ಯವಿದ್ದಲ್ಲಿ ಅವರನ್ನು ಆಸ್ಪತ್ರೆಗಳಿಗೂ ದಾಖಲಿಸಿ ಅಸಹಾಯಕರ ಪ್ರೀತಿಗೆ ಪಾತ್ರರಾಗಿದ್ದಾರೆಂದು ಹೇಳಿದರು.
ಮಹಾಲಿಂಗಪುರ ಮತ್ತು ಸುತ್ತಮುತ್ತಲಿನ 9ಹಳ್ಳಿಗಳ ಅಂಗನವಾಡಿ, ಆಶಾ ಕಾರ್ಯಕರ್ತೆಯರು,ಸವಿತಾ ಸಮಾಜ, ಮಡಿವಾಳರು, ಆಟೋ ಚಾಲಕರು, ಅರ್ಚಕರು, ಹಮಾಲರು, ಕಾರಕೂನರು, ವೇಮನ್ನರು, ಪೋಲಿಸ್ ಇಲಾಖೆ, ಆರೋಗ್ಯ ಇಲಾಖೆ, ಪುರಸಭಾ ಸಿಬ್ಬಂದಿ ಮುಂತಾದ ವರ್ಗಗಳಿಗೆ ಸಹಾಯ ಹಸ್ತವನ್ನು ಚಾಚಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು.
ಪುರಸಭಾ ಸದಸ್ಯರಾದ ಯಲ್ಲನಗೌಡ ಪಾಟೀಲ, ಬೆಳಗಲಿ ಪಪಂ ಅಧ್ಯಕ್ಷ ಸಿದ್ದುಗೌಡ ಪಾಟೀಲ, ಬಸವರಾಜ ಕರೆಹೊನ್ನ, ಈಶ್ವರ ಚಮಕೇರಿ, ನಿಂಗಪ್ಪ ಬಾಳಿಕಾಯಿ, ಮಹಾಲಿಂಗಪ್ಪ ತಟ್ಟಿಮನಿ, ಸಂಜು ಬಾರಕೋಲ, ಚನ್ನಬಸು ಹುರಕಡ್ಲಿ, ರವಿ ಬಿದರಿ, ಸುರೇಶ ಜಾಧವ, ಎಸ್.ಎಸ್ ಈಶ್ವರ್ಪಗೋಳ, ಮಹಾಲಿಂಗಪ್ಪ ಮಾಳಿ, ಅರ್ಜುನ ದೊಡಮನಿ, ಬಸವರಾಜ್ ಗಿರಿಸಾಗರ, ಶ್ರೀಶೈಲ ಬಾಡನವರ, ಬಸಯ್ಯ ಚಟ್ಟಿಮಠ, ಮಹಾದೇವಪ್ಪ ಟಿರಿಕಿ, ಈರ್ಪ ಕಡಕೋಳ, ಅರುಣಾ ಮೋಕಾಶಿ, ಮಹಾನಂದ ಗುಣಾರಿ, ಮಂಜುಳಾ ಜಾಧವ ಇದ್ದರು.