ಕಾರವಾರ

ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣಪತ್ರ ಕಾರ್ಯಕ್ರಮ

ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣಪತ್ರ ಕಾರ್ಯಕ್ರಮ

ಲೋಕದರ್ಶನ ವರದಿ 

ಕಾರವಾರ 11: ಆಹಾರ ಸುರಕ್ಷತೆ ಮತ್ತು ಓಷಧ ಆಡಳಿತ ಉತ್ತರ ಕನ್ನಡ ಜಿಲ್ಲೆ ಹಾಗೂ ಆಹಾರ ಸುರಕ್ಷತಾ ತರಬೇತಿ ಪ್ರಮಾಣ ಪತ್ರ ಕೇಂದ್ರ ಇವರ ವತಿಯಿಂದ, ವ್ಯಾಪಾರಸ್ಥರ ಸಂಘ ಹೊನ್ನಾವರ ಇವರ ಸಹಯೋಗದಲ್ಲಿ,  ಆಹಾರ ವಹಿವಾಟುದಾರರಿಗೆ ಎರಡನೆಯ ಹಂತದ ಒಂದು ದಿನದ ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣಪತ್ರ ಕಾರ್ಯಕ್ರಮವು ಹೊನ್ನಾವರದ ಸೋಶಿಯಲ್ ಕ್ಲಬ್ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.  

ಹೊನ್ನಾವರ ತಾಲೂಕಾ ಆರೋಗ್ಯಾಧಿಕಾರಿ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ಡಾ. ವೈಶಾಲಿ ನಾಯ್ಕ,   ಕಾರ್ಯಕ್ರಮವನ್ನು ಅಧ್ಯಕ್ಷತೆ ವಹಿಸಿ ಮಾತನಾಡಿ, ಆಹಾರೋದ್ಯಮಿಗಳಿಗೆ ಆಹಾರದ ಗುಣಮಟ್ಟದ ಜೊತೆ ಶುಚಿತ್ವ ಹಾಗೂ ಪರಿಸರ ನೈರ್ಮಲ್ಯತೆ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಹಾಗೂ ಈ ತರಬೇತಿ ಕಾರ್ಯಕ್ರಮವನ್ನು ಗ್ರಾಮೀಣ ಮಟ್ಟದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ನಡೆಸುವಂತೆ ಹಾಗೂ ತಾಲೂಕಿನ ಪ್ರತಿಯೊಬ್ಬ ಆಹಾರ ವಹಿವಾಟುದಾರರು ಪ್ರಮಾಣಪತ್ರವನ್ನು ಪಡೆದುಕೊಂಡು ಕಾರ್ಯ ನಿರ್ವಹಿಸುವಂತೆ ತಿಳಿಸಿದರು. 

ಹೊನ್ನಾವರ ತಾಲೂಕಾ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಂದೀಪ ಪೂಜಾರಿ ಮಾತನಾಡಿ, ಆಹಾರ ವಹಿವಾಟುದಾರರ ದಿನನಿತ್ಯದ ಸಮಸ್ಯೆಗಳನ್ನು ವಿವರಿಸುತ್ತಾ ಮುಂದಿನ ದಿನಗಳಲ್ಲಿ ಎಲ್ಲಾ ಆಹಾರ ವಹಿವಾಟುದಾರರು ಇಲಾಖೆಗೆ ಸಂಬಂಧಿಸಿದ ಪ್ರಮಾಣಪತ್ರ, ಲೈಸೆನ್ಸ್‌ ಪಡೆದುಕೊಳ್ಳುವಂತೆ ಮನವಿ ಮಾಡಿದರು.  

ಕೇಂದ್ರ ಸರ್ಕಾರದ ಆಹಾರ ಸುರಕ್ಷತಾ ತರಬೇತಿ ಪ್ರಮಾಣ ಪತ್ರ ಕೇಂದ್ರದ ತರಬೇತುದಾರ ಯಶವಂತ ಅರುಣ, ಮಾತನಾಡಿ,  ಎಲ್ಲಾ ವಹಿವಾಟುದಾರರಿಗೆ ವಹಿವಾಟುಗಳ ನಿರ್ವಹಣೆ, ಸುರಕ್ಷತಾ ಕ್ರಮ, ಶುಚಿತ್ವ, ಕಲಬೆರಕೆ, ಅನಾವಶ್ಯಕ ಖರ್ಚು ನಿಯಂತ್ರಣ ಮತ್ತು ಕಡ್ಡಾಯ ಪ್ರಮಾಣ ಪತ್ರದ ಮಹತ್ವದ ಕುರಿತು ಮಾಹಿತಿ ಹಾಗೂ ಈಓಖಖಿಂಅ ತರಬೇತಿ ನೀಡಿದರು.  

ಆಹಾರ ನೀರೀಕ್ಷಕಿ ದೀಕ್ಷಾ, ಜಿಲ್ಲಾ ಸಂಯೋಜಕ ಮನೋಜ ನಾಯಕ,ನಿವೃತ್ತ ಆಹಾರ ಸುರಕ್ಷತಾ ಅಧಿಕಾರಿ ಹಾಗೂ ಸಲಹೆಗಾರ ಅರುಣ ಕಾಶಿಭಟ್ಟ ಹಾಗೂ ಹೊನ್ನಾವರ ತಾಲೂಕಿನ ಆಹಾರ ವಹಿವಾಟುದಾರರು ಮತ್ತಿತರರು ಇದ್ದರು. 


ಸುದ್ದಿ ಓದಿ