ಮಹಲಿಂಗಪುರ

ಸರ್ಕಾರದ ಮಾರ್ಗದರ್ಶಿ ಸೂತ್ರಗಳನ್ನು ಕಡ್ಡಾಯವಾಗಿ ಪಾಲಿಸಿ

ಸರ್ಕಾರದ ಮಾರ್ಗದರ್ಶಿ ಸೂತ್ರಗಳನ್ನು ಕಡ್ಡಾಯವಾಗಿ ಪಾಲಿಸಿ
ಸೈದಾಪುರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರೋನಾ ವಾರಿಯರ್ಸ್‌ ಗಳಿಗೆ ಕಿಟ್ಟ್‌ ವಿತರಣೆ ಕಾರ್ಯಕ್ರಮದಲ್ಲಿ ಸಚಿವ ಉಮೇಶ್ ಕತ

ಕೊರೊನಾ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ: ಸಚಿವ ಉಮೇಶ ಕತ್ತಿ 

ಮಹಾಲಿಂಗಪುರ 20 : ಕೊರೋನಾ ರೋಗವನ್ನು ತಡೆಗಟ್ಟುವುದು ನಮ್ಮ-ನಿಮ್ಮೆಲ್ಲರ ಕೈಲಿದೆ, ಅದು ಸರ್ಕಾರದ ಮಾರ್ಗದರ್ಶಿ ಸೂತ್ರಗಳನ್ನು ಕಡ್ಡಾಯವಾಗಿ ಪಾಲಿಸುವ ಬಗೆಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದೇಯಾದರೆ ಕೊರೋನಾವನ್ನು ನಿರ್ಮೂಲನೆಗೊಳಿಸಬಹುದಾಗಿದೆ ಎಂದು ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿಯವರು ಸೈದಾಪುರ ಗ್ರಾಮದಲ್ಲಿ ಕೊರೋನಾ ವಾರಿಯರ್ಸ್‌ ಸಭೆಯಲ್ಲಿ ಮಾತನಾಡಿದರು.  

ಬುಧವಾರ ಸಂಜೆ ತೇರದಾಳ ಮತಕ್ಷೇತ್ರದ ಸೈದಾಪೂರ ಗ್ರಾಂ. ಪಂಚಾಯಿತಿಗೆ ಭೇಟಿ ನೀಡಿ ಕೊರೋನಾ ಹರಡುವಿಕೆ, ಚೇತರಿಕೆ, ಸೋಂಕಿತರಿಗೆ ಕೈಗೊಂಡ ವ್ಯವಸ್ಥೆ ಹಾಗೂ ಸೋಂಕು ಹರಡದಿರಲು ಸ್ಥಳೀಯ ಗ್ರಾಮ ಪಂಚಾಯತ್ ಕೈಗೊಂಡಿರುವ ಕ್ರಮಗಳ ಬಗ್ಗೆ ಪರೀಶೀಲಿಸಿ ಮಾತನಾಡುತ್ತಿದ್ದ ಅವರು, ಸಾರ್ವಜನಿಕರು ವಿನಾಕಾರಣ ಗುಂಪುಗುಂಪಾಗಿ, ಮಾಸ್ಕ್‌ ಇಲ್ಲದೆ ಅಡ್ಡಾಡಬಾರದು, ಮದುವೆ ಇನ್ನಿತರ ಸಭೆ-ಸಮಾರಂಭಗಳನ್ನು ಸರಕಾರ ನಿಷೇಧಿಸಿದ್ದು ಶವ ಸಂಸ್ಕಾರದಲ್ಲಿಯೂ ಸಹ ಬೆರಳೆಣಿಕೆಯಷ್ಟು ಜನ ಮಾತ್ರ ಸೇರಿ, ಅಲ್ಲಲ್ಲಿ ಸಾಮಾಜಿಕ ಅಂತರವನ್ನು ಕೂಡ ಕಾಯ್ದುಕೊಳ್ಳಬೇಕು ಮತ್ತು ಸರ್ಕಾರ ತೆಗೆದುಕೊಂಡಿರುವ ಲಾಕ್ಡೌನ್ ಮುಂದುವರಿಸುವ ಬಗ್ಗೆ ಮೇ 23 ನಂತರ ತಿಳಿದು ಬರಲಿದ್ದು ತಮ್ಮ ಪರಿವಾರ ಜೊತೆ ಸುರಕ್ಷಿತವಾಗಿರಲು ತಿಳಿಹೇಳಿದರು.  

ತೇರದಾಳ ಮತ ಕ್ಷೇತ್ರದ ಶಾಸಕ ಸಿದ್ದು ಸವದಿಯವರು ಮಾತನಾಡಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯತ್ ಸರ್ವಸದಸ್ಯರು ತಮ್ಮೆಲ್ಲರ ಉತ್ತಮ ಕಾರ್ಯದಿಂದ ಕ್ಷೇತ್ರದಲ್ಲಿ ಕೊರೋನಾ ಇಳಿಮುಖ ಕಾಣುತ್ತಿದ್ದು ಗ್ರಾಮದ ಇನ್ನಷ್ಟು ಮನೆ ಮನೆಗಳಿಗೆ ತೆರಳಿ, ಜನರಲ್ಲಿ ಕೆಮ್ಮು, ನೆಗಡಿ, ಜ್ವರ ಕಂಡು ಬಂದರೆ ಈಗಾಗಲೇ ಕ್ಷೇತ್ರಾದ್ಯಂತ ನೀಡುತ್ತಿರುವ ನಮ್ಮ ಮಾತ್ರೆಗಳ ಕಿಟ್ ನೀಡಿ ಅವರ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿ ಎಂದು ಕರೆ ನೀಡಿದರು.  

ತಾಪಂ ಇಒ ಮಾತನಾಡಿ, ಸೈದಾಪುರದಲ್ಲಿ ಅಂದಾಜು 7 ಸಾವಿರ ಜನಸಂಖ್ಯೆಯ 1380ಕುಟುಂಬಗಳಿಗೆ, 570 ಮೆಡಿಸಿನ್ ಕಿಟ್ ಗಳು ಬಂದಿದ್ದು, 286 ಸೋಂಕಿತರಿಗೆ ಹಂಚಲಾಗಿದೆ. 364 ಕೋವಿಡ್ ಟೆಸ್ಟ್ನಲ್ಲಿ 48 ಪಾಸಿಟಿವ್, 45 ಗುಣಮುಖ, 3 ಸಾವು, ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು. 

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಕಾ.ಸದಸ್ಯ ಚನ್ನಪ್ಪ ಪಟ್ಟಣಶೆಟ್ಟಿ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ 100 ಮಾಸ್ಕ್‌ ಮತ್ತು ಸ್ಯಾನಿಟೈಜರ್ ಬಾಟಲ್ ಉಚಿಉತವಾಗಿ ವಿತರಿಸಿದರು. ಎಂಎಲ್ಸಿ ಹನಮಂತ ನಿರಾಣಿ, ಎಸಿ ಡಾ. ಸಿದ್ದು ಹುಲ್ಲೋಳಿ, ತಹಸಿಲ್ದಾರ ಸಂಜಯ ಇಂಗಳೆ, ಡಿಎಸ್ಪಿ, ಪಿ ಎಸ್ ಐ ಜಿ.ಎಸ್‌.ಉಪ್ಪಾರ, ಗ್ರಾಪಂ ಅಧ್ಯಕ್ಷೆ ತುಳಸವ್ವ ಲಮಾಣಿ, ಉಪಾಧ್ಯಕ್ಷ ಮಲ್ಲಪ್ಪ ಕೌಜಲಗಿ, ಸದಸ್ಯರಾದ ಮಹಾಲಿಂಗಪ್ಪ ಸನದಿ, ವಿರೂಪಾಕ್ಷ ಉಳ್ಳಾಗಡ್ಡಿ, ಚಿನ್ನಪ್ಪ ಬಾಯಪ್ಪಗೋಳ, ಯಮನಪ್ಪ ಉಪ್ಪಾರ, ಬಸವರಾಜ ಪೂಜಾರಿ, ಪಿಯೂಷ ಓಸ್ವಾಲ, ಆನಂದ್ ಖೇತಗೌಡರ, ಸದಾಶಿವು ತೆಳಗಡೆ, ಶಿವು ಹುಣಶಾಳ, ಪಿಡಿಒ ಯಲ್ಲಪ್ಪ ಮಾಂಗ, , ಗ್ರಾಮ ಸಹಾಯಕ ಪ್ರಕಾಶ ಪಾಶ್ಚಾಪುರ, ಆಶಾ ದೊಡವಾಡ, ಚಂದ್ರವ್ವ ಪೂಜಾರಿ, ಶರ್ಮಿಳಾ ರಂಗನಾಥಸ್ವಾಮಿ ಮತ್ತಿತರರು ಇದ್ದರು. 

ನಮ್ಮ ಕ್ಷೇತ್ರದಲ್ಲಿ ಇದುವರೆಗೂ ಕೈಗೊಂಡಿರುವ ಕೊರೋನಾ ನಿರ್ಮೂಲನಾ ಕ್ರಮ ಮತ್ತು ಮಾತ್ರೆಗಳ ಕಿಟ್ ವಿತರಣೆ ಮಾದರಿಯಾಗಿದ್ದು, ಪಕ್ಕದ ಬೆಳಗಾವಿ ಜಿಲ್ಲೆಯಲ್ಲಿಯೂ ನಮ್ಮ ಮಾದರಿ ಅನುಸರಿಸಲು ಯೋಜನೆ ರೂಪಿಸುತ್ತಿರುವುದು ಹೆಮ್ಮೆಯ ವಿಷಯ 

ಶಾಸಕ. ಸಿದ್ದು ಸವದಿ. 



ಸುದ್ದಿ ಓದಿ