ಹಗರಿಬೊಮ್ಮನಹಳ್ಳಿ

ಜಾನಪದ ಕಲೆ, ಕಲಾವಿದರಿಗೆ ಬೇಕಿದೆ ಪ್ರೋತ್ಸಾಹ : ಮೇಟಿ ಕೊಟ್ರಪ್ಪ

ಜಾನಪದ ಕಲೆ, ಕಲಾವಿದರಿಗೆ ಬೇಕಿದೆ ಪ್ರೋತ್ಸಾಹ : ಮೇಟಿ ಕೊಟ್ರಪ್ಪ

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 15: ಜನಪದ ಕಲೆಗಳ ತವರೂರಾದ ಹಳ್ಳಿಗಳಲ್ಲಿ ಬೆರಳೆಣಿಕೆಯಷ್ಟು ಕಲೆ ಹಾಗೂ ಕಲಾವಿದರ ತಂಡಗಳು ಕಾಣಬಹುದಾಗಿದೆ, ಕಲಾವಿದರಿಗೆ ಸೂಕ್ತ ವೇದಿಕೆ ನಿರ್ಮಿಸಿ ಪ್ರೋತ್ಸಹದ ಅವಶ್ಯಕತೆಯಿದೆ ಎಂದು ಹಿರಿಯ ಸಾಹಿತಿ ಮೇಟಿ ಕೊಟ್ರ​‍್ಪ ಅಭಿಪ್ರಾಯ ವ್ಯಕ್ತಪಡಿಸಿದರು. 

ತಾಲೂಕಿನ ಹಂಪಾಪಟ್ಟಣ ಗ್ರಾಮದ ಶ್ರೀಪಾಂಡುರಂಗ ದೇಗುಲದ ಆವರಣದಲ್ಲಿ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ದಿ.ಗೊಂದಲಿಗರ ದೇವೇಂದ್ರ​‍್ಪರ ಕುಟುಂಬದವರು ಶುಕ್ರವಾರ ಹಮ್ಮಿಕೊಂಡಿದ್ದ, ದೇವೇಂದ್ರ​‍್ಪನವರ 31ನೇ ಪುಣ್ಯಸ್ಮರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಬೆಳೆದ ದಿ.ದೇವೇಂದ್ರ​‍್ಪ ಅವರು ತೋರುವ ಆಟಗಳು ರಾಜ್ಯಾಧ್ಯಾಂತ ಹೆಸರು ಮಾಡಿದ್ದರು. ಅವರ ಜೀವಿತ ಅವಧಿಯಲ್ಲಿ ಸನ್ಮಾನ, ಪುರಸ್ಕೃತ ಹಾಗೂ ರಾಜ್ಯ ಪ್ರಶಸ್ತಿ ಲಭಿಸಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದರು. ಈಗ ಅವರ ಕುಟುಂಬದವರು ದೇವೇಂದ್ರ​‍್ಪನವರ ಹೆಸರಿನಲ್ಲಿ ಪ್ರತಿಷ್ಠಾನ ಮಾಡುತ್ತಿರುವುದು ಮುಂದೆ ಗ್ರಾಮೀಣ ಕಲೆಗಳಿಗೆ ಪ್ರೋತ್ಸಹ ದೊರೆಯುವಂತಾಗಲಿ ಎಂದರು. 

ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ನಾಗರಾಜ್ ಮಾತನಾಡಿ, ಹಿರಿಯರು ನಡೆಸಿಕೊಂಡು ಬಂದಿರುವ ಕಲೆ, ಸಂಸ್ಕೃತಿ ಉಳಿಯಬೇಕು. ಮುಂದೆ ಇಂತಹ ಗೊಂದಲಿಗರ ಹಾಗೂ ಜಾನಪದ ಕಲೆಗಳಿಗೆ ಮನ್ನಣೆ ದೊರೆಯಲಿದೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದರು. 

ಇದೇ ಸಂದರ್ಭದಲ್ಲಿ ಗ್ರಾ.ಪಂ.ಯ ನೂತನ ಸದಸ್ಯರಿಗೆ ಕಾರ್ಯಕ್ರಮ ನಿರ್ವಹಕರಿಂದ ಸನ್ಮಾನಿಸಲಾಯಿತು. ಈ ವೇಳೆ ಜಾನಪದ ಅಕಾಡೆಮಿ ಪುರಸ್ಕೃತರಾದ ಗೊಂದಲಿಗರ ರಾಮಣ್ಣ ಅಧ್ಯಕ್ಷತೆ ವಹಿಸಿದ್ದರು, ಮುಖಂಡರಾದ ಗೆದ್ಲಿಗಟ್ಟಿ ತಿಮ್ಮಣ್ಣ, ಬಂಟರ ಕುಬೇರ, ಬಡಿಗೇರ ಪಂಪಣ್ಣ, ರಾಘವೇಂದ್ರ, ಮಂಜುನಾಥ, ಜಿ.ದೇವೇಂದ್ರ, ಜಿ.ಪಕ್ಕೀರ​‍್ಪ, ಗಂಟಿ ನಾಗರಾಜ್, ಶ್ರೀನಿವಾಸ ಶೆಟ್ರು, ಮೈನಾಸಾಬ್, ಮತ್ತು ಸುಡುಗಾಡು ಸಿದ್ದರ ತಂಡ, ಸೋಬಾನೆ ಪದ, ಮತ್ತು ಭಜನಾ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು. 

ಗೊಂದಲಿಗರ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಜಿ.ಗೋಪಾಲ ಸ್ವಾಗತಿಸಿ, ನಿರ್ವಹಿಸಿದರು. 


ಸುದ್ದಿ ಓದಿ