ಹಗರಿಬೊಮ್ಮನಹಳ್ಳಿ

ಮಕ್ಕಳಿಗೆ ಸಿಗದ ಪ್ಲೋರೈಡ್ ಮುಕ್ತ ನೀರು

ಮಕ್ಕಳಿಗೆ ಸಿಗದ ಪ್ಲೋರೈಡ್ ಮುಕ್ತ ನೀರು

ಹಗರಿಬೊಮ್ಮನಹಳ್ಳಿ 22:  ಹಗರಿಬೊಮ್ಮನಹಳ್ಳಿ ಪಟ್ಟಣದ 12ನೇ ವಾರ್ಡ್‌ನ ರಾಮ್‌ರಹೀಂ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಫ್ಲೋರೈಡ್ ನೀರು ಕುಡಿಯದಂತೆ ಇತಿಶ್ರೀ ಹಾಡುವುದಕ್ಕೆ ಶಾಸಕರ ಅನುದಾನದಡಿ ಶುದ್ಧ ಕುಡಿಯುವ ನೀರಿನ ಘಟಕದ ವ್ಯವಸ್ಥೆ ಮಾಡಿ ವರ್ಷ ಕಳೆದರೂ ಶಾಲೆಯ ಮುಖ್ಯ ಗುರುಗಳು ಮಾತ್ರ ಘಟಕವನ್ನು ಕಾರ್ಯರೂಪಕ್ಕೆ ತರದೇ ಕೋಣೆಯಲ್ಲಿ ಅಲಂಕಾರಿಕ ವಸ್ತುವನ್ನಾಗಿಟ್ಟಿರುವುದು ಮಕ್ಕಳ ದುರ್ದೈವಾಗಿದೆ. 

ಮಕ್ಕಳಿಗಿಲ್ಲ ಶುದ್ಧ ಕುಡಿಯುವ ನೀರು: ಇಲ್ಲಿನ ಶಾಲೆಯಲ್ಲಿ ಒದುತ್ತಿರುವ ಮಕ್ಕಳಿಗೆ ಶುಧ್ಧ ಕುಡಿಯು ನೀರಿನ ಘಟಕವಿದ್ದರೂ ನೀರಿನ ಸಂಪರ್ಕವಿಲ್ಲದೆ ಯಂತ್ರಗಳು ತುಕ್ಕು ಹಿಡಿಯುತ್ತಿದ್ದುಶಾಲೆಯ ಆಡಳೀತ ಮಂಡಳಿಯ ನಿರ್ಲಕ್ಷ್ಯದಿಂದ ಮಕ್ಕಳಿಗೆ ಫ್ಲೋರೈಡ್ ನೀರೆ ಗತಿಯಾಗಿದೆ.  

ಶಾಲೆಗಿಲ್ಲ ಕಾಂಪೌಂಡ್‌: ಶಾಲೆ ಸುಮಾರು ವರ್ಷಗಳಿಂದ ಕಾಂಪೌಡ್ ಇಲ್ಲದೆ ಅನೈತಿಕ ಚಟುವಟಿಕೆಯ ತಾಣವಾಗಿದ್ದು, ಕುಡುಕರ, ಪೋಲಿ ಪುಂಡರ ಹಾವಳಿ ಹೆಚ್ಚಾಗಿದ್ದು ಇದಕ್ಕೆ ಶಾಲಾ ಸಿಬ್ಬಂದಿ ಸೇರಿದಂತೆ ತಾಲೂಕು ಶಿಕ್ಷಣ ಇಲಾಖೆ, ಎಸ್‌ಡಿಎಂಸಿಯ ನಿರ್ಲಕ್ಷ್ಯ ವಹಿಸಿರುವುದಾದರೂ ಎಕೆ ಎಂಬ ಆತಂಕ ಮೂಡಿದೆ.  

ಪೋಷಕರ ಪ್ರಶ್ನೆಗಳಿಗಿಲ್ಲ ಉತ್ತರ: ಇದೇ ಶುಕ್ರವಾರ ಶಾಲೆಯಲ್ಲಿ ಪೋಷಕರ ಸಭೆ ಕರೆದಿದ್ದು, ಶಾಲೆಯಲ್ಲಿ ಮಕ್ಕಳಿಗೆ ನೀಡುತ್ತಿರುವ ಬಿಸಿ ಊಟ ಉತ್ತಮ ಗುಣಮಟ್ಟ ಹೊಂದಿಲ್ಲ ಎಂದು ಕೇಳಿದ ಪ್ರಶ್ನೆಗೆ, ಮುಖ್ಯ ಗುರುಗಳು ಅಡುಗೆ ಮಾಡುವವರನ್ನೆ ಸಭೆಗೆ ಕರೆಸಿ ಪೋಷಕರ ಹಾಗೂ ಬಿಸಿ ಊಟದ ಸಿಬ್ಬಂದಿ ನಡುವೆ ವಾಗ್ವಾದ ನಡೆದ ಪರಿಸ್ಥಿತಿ ಎರ​‍್ಪಟಟಿದ್ದು ಕಂಡುಬಂದಿತು.ಪೋಷಕರ ಈ ಪ್ರಶ್ನೆಗೆ ಸೂಕ್ತ ಉತ್ತರ ದೊರೆಯಲಿಲ್ಲ. 

ಜಯಂತಿಗಳಿಗಿಲ್ಲ ನಾಯಕರ ಭಾವಚಿತ್ರ: ಶುಕ್ರವಾರ ಅಂಬಿಗರ ಚೌಡಯ್ಯನವರ ಜಯಂತಿ ಇದ್ದು ಅವರ ಭಾವಚಿತ್ರವಿಲ್ಲದೇ ಪೆನ್ಸಿಲ್‌ನಿಂದ ಬಿಡಿಸಿದ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ್ದು ಸೊಜಿವೆನಿಸದ್ದು ಸತ್ಯ, ಅಂಬಿಗರ ಚೌಡಯ್ಯನವರ ಬಗ್ಗೆ ಸ್ವಲ್ಪ ವಿಷಯ ತಿಳಿಸಿ ಎಂದು ಪೋಷಕರು ಕೇಳಿದಾಗ, ಕಾಲ್ಕಿತ್ತ ಮುಖ್ಯ ಶಿಕ್ಷಕಿ ಮಹಾನ್ ವ್ಯಕ್ತಿ ಬಗ್ಗೆ ಮಾಹಿತಿ ಇರುವ ಎರೆಡು ಪುಟಗಳ ಹಿಡಿದು ಬಂದಿದ್ದು ಉಂಟು. ನಮ್ಮ ಶಾಲೆಯಲ್ಲಿ ಜಯಂತಿ ಆಚರಿಸುವ ವ್ಯಕ್ತಿಗಳ ಭಾವಚಿತ್ರ ಎಲ್ಲವೂ ಇಲ್ಲ, ಕೆಲವೊಂದಿವೆ ನಮ್ಮದು ಸರಕಾರಿ ಶಾಲೆ, ಖಾಸಗಿ ಶಾಲೆಯಲ್ಲ ಎಂದು ಇವರು ಹೇಳಿದ್ದು ಕೇಳಿ ಪೋಷಕರು ತಬ್ಬಿಬ್ಬಾಗಿದ್ದಾರೆ. 

ಮಕ್ಕಳ ರೇಷನ್ ದುರ್ಬಳಕೆ ಆರೋಪ: ಸರಕಾರದಿಂದ ಕೊರೊನಾ ವೇಳೆಯಲ್ಲಿ ಮಕ್ಕಳಿಗೆ ಶಾಲೆಯಲ್ಲಿ ಅಡುಗೆ ಮಾಡದೇ, ಮನೆಗೆ ಕಳಿಸುವ ಆಹಾರ ಸಾಮಾಗ್ರಿಗಳನ್ನು ಮಕ್ಕಳಿಗೆ ಸಮರ​‍್ಕವಾಗಿ ವಿತರಣೆ ಮಾಡಿಲ್ಲ ಎಂಬ ಆರೋಪವಿದೆ, ಪೋಷಕರು ಶಿಕ್ಷಕರ ಜೊತೆ ವಾಗ್ವದಕ್ಕೆ ಇಳಿದರೆ ಮಾತ್ರ ರೆಷನ್ ಕಿಟ್ ನೀಡಿದ್ದಾರೆ ಎಂದು ಕೆಲ ಪೋಷಕರು ಸಭೆಯಲ್ಲಿಯೇ ಮಾತನಾಡಿದರು. 

ಮಕ್ಕಳ ಕೈಯಲ್ಲಿ ಊಟದ ಬಾಕ್ಸ್‌ : ಶಾಲೆಯಲ್ಲಿ ಒದುತ್ತಿರುವ ಮಕ್ಕಳು, ಶಾಲೆಯ ಬಿಸಿಊಟ ಉತ್ತಮ ಗುಣಮಟ್ಟದಲ್ಲಿಲ್ಲ ಹಾಗಾಗಿ ನಮ್ಮ ಮಕ್ಕಳು ಮನೆಯಿಂದಲೇ ಊಟದ ಬಾಕ್ಸ್‌ಗಳನ್ನು ಕಳಿಸುಸತ್ತಿದ್ದೆವೆ ಎಂದು ಕೆಲ ಪೋಷಕರು ಸಭೆಯಲ್ಲಿ ಚರ್ಚಿಸಿದ್ದು, ಸರಕಾರದ ಬಿಸಿಊಟದ ಯೋಜನೆಯನ್ನು ನಾಚಿಸುವಂತಿತ್ತು. 

ಅಲುಗಾಡುತ್ತಿರುವ ಧ್ವಜಸ್ಥಂಭ, ಕ್ರ್ಯಾಕ್ ಬಿಟ್ಟ ಶಾಲಾ ಗೋಡೆಗಳು: ಶಾಲೆಯ ಮುಂಭಾಗದಲ್ಲಿರುವ ಧ್ವಜಸ್ಥಂಭವು ಮುರಿದಿದ್ದು ಅದನ್ನು ವೆಲ್ಡಿಂಗ್ ಮಾಡಿಸಿ ಜೋಡಿಸಲಾಗಿದೆ ಅದು ಅಲುಗಾಡುತ್ತಿದ್ದು ಅದರ ಮೇಲೆಯೇ ಮಕ್ಕಳನ್ನು ಹತ್ತಿಸಿ ಧ್ವಜ ಕಟ್ಟಿಸುತ್ತಿದ್ದು, ಮಕ್ಕಳಿಗೆ ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಜವಾಬ್ದಾರಿ ಎಂಬ ಮಾತುಗಳು ಪರಸ್ಪರ ಪೋಷಕರಲ್ಲಿ ಚರ್ಚಿತವಾಗಿದ್ದವು. 

ಮುಖ್ಯ ಶಿಕ್ಷಕರ ಇಚ್ಛಾಶಕ್ತಿ ಕೊರತೆ: ಶಾಲೆಯನ್ನು ಅಭಿವೃಧ್ಧಿ ಪಡಿಸಿ ಮಕ್ಕಳ ಮುಂದಿನ ಭವಿಷ್ಯ ರೂಪಿಸಬೇಕಿದ್ದ ಮುಖ್ಯ ಶಿಕ್ಷಕರು ಸೇರಿದಂತೆ ಸಿಬ್ಬಂದಿಯ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದ್ದು, ಶಾಲೆಗೆ ಬರುತ್ತಿರುವ ಅನುದಾನವು ಸಮರ​‍್ಕವಾಗಿ ಶಾಲೆಗೆ ಬಳಸದೇ, ಯಾವ ಹಾದಿ ಹಿಡಿದಿದೆ ಎಂಬ ಅನುಮಾನವು ಪೋಷಕರಲ್ಲಿ ಕಾಡುತ್ತಿರುವುದು ಸಹಜವಾಗಿದೆ. 

ಒಟ್ಟಾರೆಯಾಗಿ ಮಕ್ಕಳ ಶಿಕ್ಷಣದಿಂದ ವಂಚಿತರಾಗದಂತೆ ಸರಕಾರವು ಹತ್ತಾರು ಸವಲತ್ತುಗಳನ್ನು ಶಾಲೆಗಳಿಗೆ ನೀಡುತ್ತಿದ್ದು, ಖಾಸಗಿ ಶಾಲೆಗಳ ಸರಿಸಮನಾಗಿ ನಿಲ್ಲುವಂತೆ ಪ್ರಯತ್ನ ಮಾಡುತ್ತಿದ್ದರೆ ಪಟ್ಟಣದ 12ನೇ ವಾರ್ಡ್‌ನ ರಾಮ್‌ರಹಿಂ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಡಿಜಿಟಲ್ ಯುಗವನ್ನು ಅಣುಕಿಸುವಂತಿದೆ, ಶಾಸಕರು ನೀಡಿದ ಶುಧ್ಧ ಕುಡಿಯುವ ನೀರಿನ ಘಟಕಕ್ಕೆ ನೀರಿನ ಕನೆಕ್ಷನ್ ಇಲ್ಲ, ಶೌಚಾಲಯಗಳಿಗೆ ನೀರಿನ ವ್ಯೆವಸ್ಥೆ ಇಲ್ಲ, ಮಕ್ಕಳು ಬಯಲು ಶೌಚಾಲಯದ ಮೊರೆ ಹೂಗುತ್ತಿರುವುದು ಕಂಡರೆ ತಾಲೂಕು ಶಿಕ್ಷಣ ಇಲಾಖೆ ಮಕಾಡೆ ಮಲಗಿದೆಯೇ ಎಂಬ ಅನುಮಾನ ಶಾಲೆಯ ಪೋಷಕರಲ್ಲಿ ಕಾಡುತ್ತಿದೆ. 


ಸುದ್ದಿ ಓದಿ