ಕೊಟ್ಟೂರೇಶ್ವರ ಸ್ವಾಮಿಯ ಹೂವಿನ ರಥೋತ್ಸವ
ಹಗರಿಬೊಮ್ಮನಹಳ್ಳಿ 21: ತಾಲೂಕಿನ ತಂಬ್ರಹಳ್ಳಿಯಲ್ಲಿ ಗ್ರಾಮದ ಆರಾಧ್ಯ ದೈವ ಗುರು ಕೊಟ್ಟೂರೇಶ್ವರ ಸ್ವಾಮಿಯ ಕಾರ್ತಿಕೋತ್ಸವದ ನಿಮಿತ್ತ ಹೂವಿನ ರಥೋತ್ಸವ ಜರುಗಿತು.
ಪ್ರತಿ ವರ್ಷದಂತೆ ಈ ವರ್ಷವೂ ಹೂವಿನ ರಥೋತ್ಸವ ಎಳೆಯಲು ಸಿದ್ದತೆ ಮಾಡಲಾಗಿತ್ತು. ಬಾಳೆದಿಂಡು, ಬಣ್ಣದ ಬಟ್ಟೆ, ನಾನಾ ದೇವರುಗಳ ಭಾವಚಿತ್ರ ಹಾಗೂ ವಿವಿಧ ಹೂವಿನಿಂದ ರಥವನ್ನು ಅಲಂಕರಿಸಿದ್ದು, ಗ್ರಾಮದ ಗೌರಜ್ಜನವರ ತೋಟಪ್ಪ ಬೃಹತ್ ಗ್ರಾತ್ರದ ಹೂವಿನ ಮಾಲೆಯನ್ನು ಮೆರವಣಿಗೆ ಮೂಲಕ ತಂದು ರಥಕ್ಕೆ ಅರ್ಿಸಿದರು ನಂತರ ಕಾರ್ತಿಕೋತ್ಸವಕ್ಕೆ ಸುಕ್ಷೇತ್ರ ನಂದಿಪುರದ ಮಹೇಶ್ವರ ಸ್ವಾಮಿಗಳು ಚಾಲನೆ ನೀಡಿದರು. ನರೆದ ಭಕ್ತರು ಮಣ್ಣಿನ ಹಣತೆಗಳಲ್ಲಿ ಎಣ್ಣೆ ಹಾಕಿ ದೀಪ ಬೆಳಗಿಸಿ ಕೊಟ್ಟೂರೇಶ್ವರನ ಕೃಪೆಗೆ ಪಾತ್ರರಾದರು.
ಗ್ರಾಮದ ಹಿರಿಯರಾದ ಅಕ್ಕಿ ಕೊಟ್ರ್ಪ, ಬಾಳೆಕಾಯಿ ಚಿದಾನಂದಪ್ಪ, ಬಣಕಾರ ಕೊಟ್ರೇಶ್, ಹಡಪದ ಕೊಟ್ರೇಶ್, ಡಿಎಂ.ತೋಟಯ್ಯ. ಕೆಎಚ್‌ಎಂ ಪಂಚಯ್ಯ, ಕೊಟ್ರಯ್ಯ, ಬಣಕಾರ ಮಲ್ಲಿಕಾರ್ಜುನ, ಜೀರ ಆನಂದ, ಜೀರ್ ವಿಜಯ, ಗೌರಜ್ಜನವರ ಮಂಜುನಾಥ, ಎಂ..ಚೆನ್ನಪ್ಪ ಶಿವಾನಂದಯ್ಯ ಇತರರು ಭಾಗವಹಿಸಿದ್ದರು.