ಕೃಷ್ಣಾ ನದಿಯಲ್ಲಿ ದೋಣಿ ಮೂಲಕ ತೆರಳಿ ಜಿಲ್ಲಾಧಿಕಾರಿ ಟಿ ಭೂಬಾಲನ್ ರಿಂದ ಪ್ರವಾಹ ಭೀತಿ ಪರಿಶೀಲನೆ

ಕೃಷ್ಣಾ ನದಿಯಲ್ಲಿ ದೋಣಿ ಮೂಲಕ ತೆರಳಿ ಜಿಲ್ಲಾಧಿಕಾರಿ ಟಿ ಭೂಬಾಲನ್ ರಿಂದ ಪ್ರವಾಹ ಭೀತಿ ಪರಿಶೀಲನೆ

ಮುದ್ದೇಬಿಹಾಳ: ಆಲಮಟ್ಟಿ ಲಾಲಬಹಾದ್ದೂರ ಆಣೆಕಟ್ಟಿನಿಂದ ಹೆಚ್ಚುವರಿ ಕೃಷ್ಣಾ ನದಿ ನೀರ ಹೊರಬಿಡುತ್ತಿರುವ ಕಾರಣ ಮುದ್ದೇಬಿಹಾಳ ತಾಲೂಕಿನ ವ್ಯಾಪ್ತಿಯ ಮೂದೂರ. ಕಾಳಗಿ ಗ್ರಾಮ ಸೇರಿದಂಯತೆ ಇತರೇ ಕೃಷ್ಣಾ ನದೀ ತೀರದ ಗ್ರಾಮಗಳಿಗೆ ವಿಜಯಪುರ ಜಿಲ್ಲಾಧಿಕಾರಿ ಟಿ ಭೂಬಾಲನ್ ಅವರು ಕೃಷ್ಣಾ ನದಿಯಲ್ಲಿ ಢೋಣಿ ಮೂಲಕ ತೆರಳಿ ಪ್ರವಾಹದ ಬೀತಿ ಮತ್ತು ಮುಳುಗಡೆಯ ಬಗ್ಗೆ ಪರಿಶಿಲಿಸಿದರು. 

ಈ ವೇಳೆ ವಿಜಯಪುರ ಜಿಲ್ಲಾಧಿಕಾರಿ ಟಿ ಭೂಬಾಲನ್ನುವರು ಮಾತನಾಡಿ ಸಧ್ಯ ಆಲಮಟ್ಟಿ ಜಲಾಶಯಲಕ್ಕೆ ಹೆಚ್ಚುವರಿ ನೀರು ಹರಿದು ಬರುತ್ತಿದ್ದು ಈ ಹಿನ್ನೇಲೆಯಲ್ಲಿ  ಅಗತ್ಯ ನೀರನ್ನು ಮಾತ್ರ ತಡೆ ಹಿಡಿದು ಇನ್ನುಳಿದ ಹೆಚ್ಚುವರಿ ನೀರನ್ನು ಹರಿಬಡಲಾಗುತ್ತದೆ. ಕಾರಣ ಕೃಷ್ಣಾ ನಧಿ ತೀರದ ಗ್ರಾಮಗಳ ಜನರಿಗೆ ಅಪಾಯ ತಪ್ಪಿದ್ದಲ್ಲ ಜೊತೆಗೆ ನದಿ ನೀರಿನಲ್ಲಿ ಮೊಸಳೆಗಳು ಇದ್ದು ಜನರು ತಮ್ಮ ಮಕ್ಕಳನ್ನಾಗಿ, ಜಾನುವಾರುಗಳನ್ನಾಗಿ, ಮಹಿಳೆಯರನ್ನಾಗಲಿ ನದೀ ತೀರಕ್ಕೆ ಹೋಗದಂತೆ ನೋಡಿಕೊಳ್ಳಬೇಕು. ಸೊಳ್ಳೆಗಳ ಕಾಟ ತಪ್ಪಿಸಲು ಸ್ವಚ್ಛತೆಯಿಂದ ಇರುವಂತೆ ನೋಡಿಕೊಳ್ಳುವುದರ ಜೊತೆಗೆ ಆಯಾ ಗ್ರಾಮಗಳ ಮೂಲ ಸೌಲಭ್ಯಗಳ ಕೊರತೆಯಾಗದಂತೆ ಜೊತೆಗೆ ಪ್ರವಾಹದ ಕುರಿತು ಜನಸಾಮಾನ್ಯರಾಗಲಿ ಅಥವಾ ಸಂಬಂಧ ಪಟ್ಟ ಅಧಿಕಾರಿಗಳು ತಮ್ಮನ್ನು ಸಂಪರ್ಕಿಸಲು ಎಲ್ಲ ಇಲಾಖೆ ಅಧಿಕಾರಿಗಳು ತಮ್ಮ ಮೋಬೈಲ್ ನ್ನು ಸ್ವೀಚ್ ಆಪ್ ಮಾಡಿಕೊಳ್ಳದೇ ಕರೆ ಮಾಡಿದ ತಕ್ಷಣ ಸಂಪರ್ಕದಲ್ಲಿರುವಂತೆ ದಿನದ 24 ಗಂಟೆಗಳ ಕಾಲ ತಮ್ಮ ಮೋಬೈಲ್ ಸಂಪರ್ಕದಲ್ಲಿ ಸೀಗುವಂತೆ ನೋಡಿಕೊಳ್ಳಬೇಕು ಎಂದು   ತಾಲೂಕಾ ಅಧಿಕಾರಿಗಳಿಗೆ ಮತ್ತು ಕೆಬಿಜೆಎನ್ ಎಲ್ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಮಾಡಿ ಸಲಕಹೇ ನೀಡಿದರು. ಈ ವೇಳೆ ಕುಲಸಚೀವ ಹಾಗೂ ತಾಲೂಕಾ ಉಸ್ತುವಾರಿ ಅಧಿಕಾರಿ ಶಂಕರಗೌಡ ಸೋಮನಾಳ, ತಹಾಶಿಲ್ದಾರ ಬಲರಾಮ ಕಟ್ಟಿಮನಿ ಸೇರಿದಂತೆ ವಿವಿಧ ಸರಕಾರಿ ಅಧಿಕಾರಿಗಳು ಇದ್ದರು. 


ಸುದ್ದಿ ಓದಿ