ಶಿಗ್ಗಾವ್

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ

ಲೋಕದರ್ಶನ ವರದಿ

ಶಿಗ್ಗಾವಿ 02:  ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ತಾಲೂಕ ಆಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು. ತಹಶೀಲ್ದಾರ ಶಿವಾನಂದ ರಾಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಹಾಗೂ ಪುರಸಭೆ ಅಧ್ಯಕ್ಷ ರೂಪಾ ಬನ್ನಿಕೊಪ್ಪ ಕನ್ನಡ ರಾಜೋತ್ಸವ ಉದ್ದೇಶಿಸಿ ಮಾತನಾಡಿದರು.

 ಬಿಜೆಪಿ ತಾಲೂಕ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಫಕ್ಕಿರಪ್ಪ ಕುಂದೂರ,  ಪುರಸಭೆ ಸದಸ್ಯರಾದ ಸುಭಾಸ ಚವ್ಹಾಣ, ರಮೇಶ ವನಹಳ್ಳಿ, ಗೌಸಖಾನ ಮುನಶಿ, ಮುಸ್ತಾಕಹ್ಮದ ತಹಶೀಲ್ದಾರ, ನಸರ್ರೀನಬಾನು ತಿಮ್ಮಾಪೂರ, ಮುಕ್ತಾರ ತಿಮ್ಮಾಪೂರ, ರಶೀದ ಗೋಟಗೋಡಿ, ಜಾಫರ ಪಠಾಣ, ಸಂಗೀತಾ ವಾಲ್ಮೀಕಿ, ವಸಂತಾ ಬಾಗೂರ, ರೇಖಾ ಕಂಕನವಾಡ, ಸಮಾಜಸೇವಕ ಶಶಿಧರ ಯಲಿಗಾರ, ಕನ್ನಡಪರ ಸಂಘಟನೆಗಳ ಮುಖಂಡರಾದ ಸಂತೋಷಗೌಡ ಪಾಟೀಲ್, ಬಸಲಿಂಗಪ್ಪ ನರಗುಂದ, ನಿಂಗಪ್ಪ ಬೆಂಚಳ್ಳಿ, ಸಲೀಂ ದುಖಾನದಾರ, ಬಸವರಾಜ ಜೇಕಿನಕಟ್ಟಿ, ಮಂಜುನಾಥ ಮಿರ್ಜಿ , ಶಂಬು ಕೇರಿ, ಈರಣ್ಣ ಸಮಗೊಂಡ, ಅಶೋಕ ಕಾಳೆ, ಮಜೀದ ಮಾಳಗಿಮನಿ, ಸುರೇಶ ಹರಿಜನ, ಬಿಇಓ ಎಮ್ ಬಿ ಅಂಬಿಗೇರ, ಸೇರಿದಂತೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೋಟ್ರೇಶ ಮಾಸ್ತರ ಬೆಳಗಲಿ, ಪಕ್ಕಿರೇಶ ಕೊಂಡಾಯಿ, ವಿವಿಧ ಇಲಾಖೆಗಳ ಅಧಿಕಾರಿಗಳಾದ ಪ್ರಶಾಂತ ತುರಖಾಣಿ, ಸರಸ್ವತಿ ಗಜಕೋಶ, ಹೊಸಮನಿ, ಚಿಕ್ಕಮಠ, ಪುರಸಭೆ ಮುಖ್ಯಾಧಿಕಾರಿ ಜಗದೀಶ ವೈ.ಕೆ, ಐ.ಎಮ್.ಪಾಟೀಲ, ಸೋಂಟಕ್ಕಿ ಸೇರಿದಂತೆ  ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜಾನಪದ ತಜ್ಞ ಬಸವರಾಜ ಶಿಗ್ಗಾವಿ ಹಾಗೂ ಶರೀಫ ಮಾಕಪ್ಪನವರ ತಂಡದಿಂದ ನಾಡಗೀತೆ ಮತ್ತು ರೈತಗೀತೆಯನ್ನು ಪ್ರಸ್ತುತ ಪಡಿಸಿದರು. ಕೆ.ಎಸ್ಆರ್.ಪಿ 10 ನೇ ಪಡೆ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು.

ಸುದ್ದಿ ಓದಿ