ರಾಣೆಬೆನ್ನೂರ

ಶ್ರೀಮಾತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ್ಯ ಧ್ವಜಾರೋಹಣ

ಶ್ರೀಮಾತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ್ಯ ಧ್ವಜಾರೋಹಣ

ರಾಣೆಬೆನ್ನೂರು, ಆ.20: ನಗರದ ಹಳಿಗೆ ರಸ್ತೆ ಚೊಳಮರಡೇಶ್ವರ ನಗರದ ಶ್ರೀಮಾತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದೇಶದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಬಿ.ಎಚ್‌. ಮಡೂರ್ ಧ್ವಜಾರೋಹಣ ನೆರವೇರಿಸಿದರು.  ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಾಲಾ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.  ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಅಶೋಕ ಪೂಜಾರಿ, ಪ್ರಧಾನ ಗುರು ಎಸ್‌. ಚನ್ನಬಸಪ್ಪ, ಸದಸ್ಯರಾದ ಶಂಭುನಾಥ ಕೋಟೂರು, ವಿಶ್ವನಾಥ ಕಮಾರ್, ಶಿಕ್ಷಕರಾದ ದೇವರಾಜ ಹುಣಸಿಕಟ್ಟಿ, ಮಮತಾ ಕೆ., ವನಜಾಕ್ಷಿ ಕಮಾರ್, ಕೆ. ದೀಪಾ, ಆಶಾ ಬಿ., ವಿದ್ಯಾ ಬಿ., ಕವಿತಾ, ರೇಖಾ, ಸಾಕಮ್ಮ, ಗೀತಾ ಕಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ