ಮುದ್ದೆಬಿಹಾಲ್

ಅಭಿವೃದ್ಧಿಗೆ ಆದ್ಯತೆ, ಗುತ್ತಿಗೆದಾರರ ಸಮಸ್ಯೆ ಬಗೆಹರಿಸಿದ ಸರ್ಕಾರ, ಪಂಚ ಗ್ಯಾರಂಟಿ ಜನಮನ ಗೆದ್ದಿದೆ; ಸಿ.ಎಸ್‌. ನಾಡಗೌಡ

ಅಭಿವೃದ್ಧಿಗೆ ಆದ್ಯತೆ, ಗುತ್ತಿಗೆದಾರರ ಸಮಸ್ಯೆ ಬಗೆಹರಿಸಿದ ಸರ್ಕಾರ, ಪಂಚ ಗ್ಯಾರಂಟಿ ಜನಮನ ಗೆದ್ದಿದೆ; ಸಿ.ಎಸ್‌. ನಾಡಗೌಡ

ಮುದ್ದೇಬಿಹಾಳ, 28 : ಈ ಹಿಂದಿನ ಸರ್ಕಾರವು ಗುತ್ತಿಗೆದಾರರಿಗೆ ಅಂದಾಜು 33 ಸಾವಿರ ಕೋಟಿ ರೂಪಾಯಿ ಬಿಲ್‌ಗಳನ್ನು ಪಾವತಿಸದೇ ಬಾಕಿ ಇಟ್ಟಿತ್ತು. ಆದರೆ, ಸದ್ಯದ ಕಾಂಗ್ರೆಸ್ ಸರ್ಕಾರ ಗುತ್ತಿಗೆದಾರರ ಸಂಘದ ಅಧ್ಯಕ್ಷರ ಜೊತೆ ಮಾತುಕತೆ ನಡೆಸಿ ಅವರ ಸಮಸ್ಯೆ ಬಗೆಹರಿಸಿದೆ ಎಂದು ಶಾಸಕ ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ನಿಯಮಿತದ ಅಧ್ಯಕ್ಷರಾದ ಸಿ.ಎಸ್‌. ನಾಡಗೌಡ ಅಪ್ಪಾಜಿ ಹೇಳಿದರು.

ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿನ ಲೋಕೋಪಯೋಗಿ ಇಲಾಖೆ ವತಿಯಿಂದ ನಡೆದ ರಾಜ್ಯ ಹೆದ್ದಾರಿ ಚತುಷ್ಪಥ ರಸ್ತೆ ನಿರ್ಮಾಣ 683 ಲಕ್ಷಗಳ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಸರ್ಕಾರ ಅಭಿವೃದ್ಧಿ ಮತ್ತು ಜನಪರ ಯೋಜನೆಗಳತ್ತ ತೀವ್ರ ಮನಸ್ಸು ಮಾಡಿದೆ. ಹಿಂದೆ ಒಂದು ಕಿಲೋಮೀಟರ್ ರಸ್ತೆ ನಿರ್ಮಾಣಕ್ಕೆ ಕೇವಲ ಒಂದು ಲಕ್ಷ ರೂ. ಅನುದಾನ ನೀಡಲಾಗುತ್ತಿತ್ತು. ಆದರೆ, ಇಂದಿನ ಕಾಲದಲ್ಲಿ ಆ ಪ್ರಮಾಣದ ಕೆಲಸ ಮಾಡಲು ಕೋಟ್ಯಂತರ ಅನುದಾನ ಅಗತ್ಯವಾಗಿದೆ ಎಂದು ಹೇಳಿದರು.ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಅತ್ಯಧಿಕ ಅನುದಾನವನ್ನು ಮಂಜೂರು ಮಾಡಿದೆ. ಪಂಚ ಗ್ಯಾರಂಟಿ ಯೋಜನೆಗಳ ಅಡಿಯಲ್ಲಿ ಸುಮಾರು 50 ಸಾವಿರ ಕೋಟಿ ರೂ. ಮೀಸಲಿರಿಸಿದ್ದು, ಈ ಯೋಜನೆಗಳ ಪ್ರಯೋಜನಗಳು ನೇರವಾಗಿ ಪಲಾನುಭವಿಗಳ ಮನೆ ಬಾಗಿಲಿಗೆ ಮುಟ್ಟಿವೆ. ಮೂರಾರ್ಜಿ ಸರ್ಕಾರಿ ಶಾಲೆಯ ನವೀಕರಣ, ಹೊಸ ತರಗತಿ ಕೊಠಡಿಗಳ ನಿರ್ಮಾಣ, ರಸ್ತೆ ವಿಸ್ತರಣೆ, ಕುಡಿಯುವ ನೀರಿನ ಯೋಜನೆಗಳು, ಒಳಚರಂಡಿ ಕಾಮಗಾರಿಗಳು ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಸರ್ಕಾರ ಕೈಗೆತ್ತಿಕೊಂಡಿದೆ , ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ವಿದ್ಯುತ್, ನೀರು, ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಒತ್ತು ನೀಡಲಾಗಿದೆ. 

ಮುದ್ದೇಬಿಹಾಳ ತಾಲೂಕಿನಲ್ಲಿ ಬಡಜನರ ಮನೆ ನಿರ್ಮಾಣದಿಂದ ಹಿಡಿದು ರೈತರ ಹಿತ ಕಾಯುವ ಕೃಷಿ ಯೋಜನೆಗಳವರೆಗೂ ಎಲ್ಲೆಡೆ ಸರ್ಕಾರ ಸ್ಪಂದಿಸಿದೆ. ಈ ಕಾರ್ಯಗಳಲ್ಲಿ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಹಕಾರ ಅತ್ಯಗತ್ಯ” ಎಂದು ನಾಡಗೌಡ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ  ಪುರಸಭೆ ಅಧ್ಯಕ್ಷರಾದ ಮಹಿಬೂಬ ಗೋಳಸಂಗಿ, ಉಪಾಧ್ಯಕ್ಷರಾದ ಪ್ರೀತಿ ದೇಗಿನಾಳ, ಯಲ್ಲಪ್ಪ ನಾಯಕಮಕ್ಕಳ,  ಸದಸ್ಯರಾದ ಸಂಗಮ್ಮ ದೇವರಳ್ಳಿ,ಶಿವು ಶಿವಪೂರೆ,  ಹರೀಶ ಬೇವೂರ,  ಹಾಗೂ ಸ್ಥಳೀಯ ನಾಯಕರು ಉಪಸ್ಥಿತರಿದ್ದರು. 


ಸುದ್ದಿ ಓದಿ